April 19, 2024

Chitradurga hoysala

Kannada news portal

ಸಾರ್ಥಕ ಬದುಕಿನ ಸಾಫಲ್ಯದ ಕಡೆಗೆ ದಾರಿ ತೋರುವವನೆ ನಿಜವಾದ ಗುರು ಎಂದು

1 min read


ಸಾರ್ಥಕ ಬದುಕಿನ ಸಾಫಲ್ಯದ ಕಡೆಗೆ ದಾರಿ ತೋರುವವನೆ ನಿಜವಾದ ಗುರು ಎಂದು

ಚಿತ್ರದುರ್ಗ. :ಆರ್. ಎಸ್.ಎಸ್.ಪ್ರಚಾರಕ ಶಿವಮೊಗ್ಗ ವಿಭಾಗದ ನವೀನ್ ಸುಬ್ರಮಣ್ಯ ತಿಳಿಸಿದರು.ಸಂಸ್ಕಾರ ಭಾರತಿ ಚಿತ್ರದುರ್ಗ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್, ವಾಸವಿ ವಿದ್ಯಾಸಂಸ್ಥೆ ಇವುಗಳ ಸಹಯೋಗದೊಂದಿಗೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವ್ಯಾಸರ ಜನ್ಮದಿನವನ್ನು ಗುರು ಪೂರ್ಣಿಮ ದಿನವನ್ನಾಗಿ ಆಚರಿಸುವ ಸಂಪ್ರದಾಯ ಭಾರತದಲ್ಲಿ ಬೆಳೆದು ಬಂದಿದೆ. ಪಿ.ಹೆಚ್.ಡಿ, ಸರ್ಟಿಫಿಕೇಟ್‍ಗಳನ್ನು ಇಟ್ಟುಕೊಂಡು ಅಂಕ ತುಂಬಿಸುವ ಶಿಕ್ಷಣವನ್ನು ಮಕ್ಕಳಿಗೆ ಹೇಳುವುದಕ್ಕಿಂತ ಮುಖ್ಯವಾಗಿ ಸಮಾಜ ಪ್ರಕೃತಿ ಜೊತೆಗೆ ಸಾಗಲು ಸಾಫಲ್ಯದ ದಾರಿ ತೋರಿಸಿ ಹೇಗೆ ಬದುಕಬೇಕೆಂಬುದನ್ನು ಹೇಳಿಕೊಡುವವನೆ ನಿಜವಾದ ಗುರು ಎಂದು ಗುರುವಿನ ಮೌಲ್ಯವನ್ನು ಹೇಳಿದರು.ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ನೀಡುವ ಗುರು ಮತ್ತು ಶಿಷ್ಯರ ನಡುವಿನ ಸಂಬಂಧವμÉ್ಟ ಮುಖ್ಯವಲ್ಲ. ದತ್ತಾತ್ರೇಯ ಎಲ್ಲರನ್ನು ಗುರುವಾಗಿ ಸ್ವೀಕರಿಸಿ ಹೇಗೆ ಜೀವನದ ಎತ್ತರಕ್ಕೆ ಏರಲು ಪ್ರಯತ್ನಿಸುತ್ತಾನೋ ಹಾಗೆ ಕಲಿಕೆಯ ಮಾರ್ಗ ಯಾರು ತೋರುತ್ತಾರೋ ಅವರೆ ನಿಜವಾದ ಗುರುಗಳು. ಕಲೆ, ಸಾಹಿತ್ಯ, ಸಂಸ್ಕøತಿ, ವಿಜ್ಞಾನ, ಯೋಗ, ಹೀಗೆ ಇನ್ನು ಹತ್ತು ಹಲವಾರು ಕ್ಷೇತ್ರಗಳಲ್ಲಿ ಯಾರು ಪರಿಶ್ರಮ ಹಾಕಿ ತಮ್ಮ ಪ್ರತಿಭೆಯ ಮೂಲಕ ಸಾಧನೆ ಮಾಡುತ್ತಾರೋ ಅಂತಹವರಿಂದ ಭಾರತವನ್ನು ಜಗತ್ತಿಗೆ ಗುರುವನ್ನಾಗಿಸಲು ಸಾಧ್ಯ ಎಂದು ಹೇಳಿದರು.ಏಕಲವ್ಯ ದ್ರೋಣಾಚಾರ್ಯನಿಗೆ ತನ್ನ ಹೆಬ್ಬೆರಳನ್ನೇ ಗುರು ಕಾಣಿಕೆಯಾಗಿ ನೀಡಿ ಸಮರ್ಪಣಾ ಮನೋಭಾವವನ್ನು ಪ್ರದರ್ಶಿಸುತ್ತಾನೆ. ವ್ಯಾಸ ಮಹರ್ಷಿ ನಾಲ್ಕು ವೇದಗಳನ್ನು ವಿಂಗಡಣೆ ಮಾಡಿ ಯಾವ್ಯಾವ ವೇದಗಳಲ್ಲಿ ವಿಶೇಷತೆ ಇದೆ ಎನ್ನುವುದನ್ನು ತೋರಿಸಿಕೊಟ್ಟರು. ಅದಕ್ಕಾಗಿಯೇ ಗುರುವಿನ ಮಹತ್ವ ದೊಡ್ಡದು. ಬದುಕನ್ನು ಸಾರ್ಥಕತೆಯತ್ತ ಸಾಗಿಸುವುದು ಹೇಗೆ ಎನ್ನುವುದನ್ನು ಕಲಿಸುವವನೆ ಗುರು ಎಂದರು.ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ಮಾತನಾಡಿ ತಾಯಿ ಸಂಸ್ಕಾರಕ್ಕೆ ಗುರು, ತಂದೆ ಸನ್ಮಾರ್ಗಕ್ಕೆ ಗುರು, ಗುರು ಮೋಕ್ಷಕ್ಕೆ ಗುರು. ಜೀವನದ ಮೌಲ್ಯಗಳನ್ನು ಎರಕ ಹೊಯ್ದು ಮಗು ವಿಶ್ವಮಾನವನಾಗಲು ದಾರಿ ತೋರುವ ಅಘಾದವಾದ ಪ್ರೇರಣಾ ಶಕ್ತಿಯೇ ಗುರು. ನಿಜವಾಗಿಯೂ ಗುರುವಿನ ಶಕ್ತಿ ಏನು ಎನ್ನುವುದನ್ನು ಹೇಳಬೇಕಾದರೆ ಆನೆಯನ್ನು ಕನ್ನಡಿಯಲ್ಲಿ ತೋರಿಸಿದಂತೆ. ಶಿಕ್ಷಕ ಮಗುವನ್ನು ಅರವತ್ತು ಎಪ್ಪತ್ತು ಪರ್ಸೆಂಟ್ ತಿದ್ದಬಹುದು. ಅದೇ ಗುರು ಮೋಕ್ಷ ಕೊಡುತ್ತಾನೆ. ಗುರುಗಳಿಗೆ ವಿಧೇಯನಾಗಿ ವಿವೇಕ ಹೆಚ್ಚಿಸಿಕೊಂಡಾಗ ಉನ್ನತ ಸ್ಥಾನಕ್ಕೆ ಏರಬಹುದು ಎಂದು ಗುರುವಿನ ಅರ್ಥ ವಿವರಿಸಿದರು.ಸಂಸ್ಕಾರ ಭಾರತಿ ರಾಜ್ಯ ಪ್ರಮುಖರಾದ ಡಾ.ರಾಜೀವ ಲೋಚನ ಮಾತನಾಡಿದರು.ದ್ಯೇಯ ಗೀತೆಯ ಪ್ರಾರ್ಥನೆಯೊಂದಿಗೆ ಗುರು ಪೂರ್ಣಿಮ ಕಾರ್ಯಕ್ರಮ ಆರಂಭಗೊಂಡಿತು. ಟಿ.ಕೆ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.ರೋಟರಿ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಶಿವಕುಮಾರ್, ರೋಟರಿ ಇನ್ನರ್‍ವೀಲ್ ಚಿತ್ರದುರ್ಗ ಅಧ್ಯಕ್ಷೆ ಜಯಶ್ರೀμÁ ವೇದಿಕೆಯಲ್ಲಿದ್ದರು.ಮಾರುತಿ ಮೋಹನ್ ಸ್ವಾಗತಿಸಿದರು. ನೃತ್ಯ ಕಲಾವಿದೆ ಡಾ.ನಂದಿನಿ ಶಿವಪ್ರಕಾಶ್, ಮದ್ದಳೆ ಕಲಾವಿದ ಬಸವರಾಜ್, ಶಹನಾಯಿ ಕಲಾವಿದ ಜಿ.ಎನ್.ವೆಂಕಟೇಶ್, ಶಿಕ್ಷಕಿ ಡಾ.ಸ್ನೇಹಲತಾ ಇವರುಗಳನ್ನು ಸನ್ಮಾನಿಸಲಾಯಿತು.

About The Author

Leave a Reply

Your email address will not be published. Required fields are marked *