April 20, 2024

Chitradurga hoysala

Kannada news portal

ಮಹನೀಯರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತಿದವರು ಸಿರಿಗೆರೆ ತರಳುಬಾಳುಮಠದ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರು:ಮಾದಾರಚನ್ನಯ್ಯ ಶ್ರೀಗಳು

1 min read


ಮಹನೀಯರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತಿದವರು ಸಿರಿಗೆರೆ ತರಳುಬಾಳುಮಠದ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರು:ಮಾದಾರಚನ್ನಯ್ಯ ಶ್ರೀಗಳು.

ಉತ್ತಮ ಆಡಳಿತ ನೀಡೊರಿಗೆ ನಮ್ಮ ಬೆಂಬಲ:ಡಾ.ಪಂಡಿತರಾಧ್ಯ ಸ್ವಾಮೀಜಿ

ಚಿತ್ರದುರ್ಗ ●ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಕಾಯಕ ದಾಸೋಹ ಪ್ರಜ್ಞೆಯನ್ನು ಹಾಗೂ ಸಮಾನತೆಯನ್ನು ಪ್ರತಿಪಾದಿಸಿದವರು ಬಸವಾದಿ ಶರಣರು. ಅಂತಹ ಮಹನೀಯರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತಿದವರು ಸಿರಿಗೆರೆ ತರಳುಬಾಳುಮಠದ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರು. ಅಂತಹ ಮಹನೀಯರು ಮುತ್ತುಗದೂರಿನ ಗ್ರಾಮವರು ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಯಾರು ಉತ್ತಮ ಆಡಳಿತ ನೀಡುತ್ತಾರೆಯೋ ಅಂತಹವರಿಗೆ ನಮ್ಮ ಬೆಂಬಲ ಇದ್ದೆ ಇರುತ್ತದೆ ಎಂದು ಸಾಣೆಹಳ್ಳಿ ತರಳುಬಾಳು ಶಾಖಾ ಮಠದ ಡಾ.ಪಂಡಿತರಾಧ್ಯ ಸ್ವಾಮೀಜಿ ಹೇಳಿದರು. ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದಲ್ಲಿ ಬುಧವಾರ ಪ್ರಗತಿ ಪರ ಕೃಷಿಕ ಗೋಣಿ ಬಸವವಂತಪ್ಪ ಅವರ ಸ್ಮರಣೋತ್ಸವ ಹಾಗೂ ಸರ್ವಶರಣರ ಸಮ್ಮೇಳನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಒಳ್ಳೆಯ ಆಡಳಿತ ಯಾರು ನೀಡುತ್ತಾರೆಯೋ ಅಂತಹವರ ಬೆನ್ನುತಟ್ಟುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಪ್ರಮಾಣಿಕತೆ, ತಾಳ್ಮೆ, ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡರೆ ಅಧಿಕಾರ ತಾನಾಗಿಯೇ ಬರಲಿದೆ ಎಂಬುವುದಕ್ಕೆ ನೂತನ ಮುಖ್ಯಮಂತ್ರಿಗಳಾಗಿ ನೇಮಕಗೊಂಡಿರುವ ಬಸವರಾಜ್ ಬೊಮ್ಮಾಯಿ ಅವರೇ ಸಾಕ್ಷಿ ಎಂದು ಹೇಳಿದರು. ಬಸವರಾಜ್ ಬೊಮ್ಮಾಯಿ ಶುದ್ಧ ನಡೆಯ ವ್ಯಕ್ತಿ. ಮನುಷ್ಯ ಸಭ್ಯನಾಗಿ, ಉತ್ತಮವಾಗಿ ನಡೆದುಕೊಂಡದರೆ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂಬುದಕ್ಕೆ ಸಾಕ್ಷಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ. ಮನುಷ್ಯ ಒಳ್ಳೆಯ ಗುಣ, ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದರೆ ಉತ್ತಮ ಸ್ಥಾನ, ಗೌರವಗಳು ತಾನಾಗಿಯೆ ತಮ್ಮ ಬಳಿ ಬರಲಿದೆ ಎಂದು ಶ್ರೀಗಳು ಹೇಳಿದರು. ಬಸವರಾಜ್ ಬೊಮ್ಮಾಯಿ ಅವರು ನೀರಾವರಿ, ಗೃಹ ಸಚಿವರಾಗಿದ್ದಾಗ ಅವರ ಮೇಲೆ ಯಾವುದೇ ಹಗರಣಗಳು ಇಲ್ಲ. ಅವರು ನಾಲಿಗೆ ತಪ್ಪಿ ನುಡಿದದನ್ನು ಯಾವತ್ತು ಕಂಡಿಲ್ಲ. ಮಾತಿನಲ್ಲೂ ಹಿಡಿತ, ಕೆಲಸ ಕಾರ್ಯದಲ್ಲೂ ಹಿಡಿತ ಸಾಧಿಸಿರುವ ವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು, ರಾಜ್ಯದ ಸೌಭಾಗ್ಯವೇ ಸರಿ ಎಂದು ಹೇಳಿದರು. ನಾವು ಬಹುತೇಕ ಬಿಜೆಪಿಯನ್ನು ಯಾವಾಗಲೂ ಮೆಚ್ಚಿದವರಲ್ಲ. ಆದರೆ ಯಡಿಯೂರಪ್ಪ ಅವರ ಕಾರಣಕ್ಕೆ ಬಿಜೆಪಿ ಬಗ್ಗೆ ಗೌರವವಿಟ್ಟುಕೊಂಡಿದ್ದೇವೆ. ನಾವು ಯಡಿಯೂರಪ್ಪ ಅವರನ್ನು ಮೊದಲ ಬಾರಿ ನೋಡಿದ್ದು, ಶಿಕಾರಿಪುರದಲ್ಲಿ ನಡೆದ ತರಳುಬಾಳು ಹುಣ್ಣಿಮೆ ನಡೆದ ಸಂದರ್ಭದಲ್ಲಿ, ಆಗ ಅವರು ಇನ್ನೂ ಯುವಕರಾಗಿದ್ದರು. ಅವರ ಅಧ್ಯಕ್ಷತೆಯಲ್ಲಿ ತರಳುಬಾಳು ಹುಣ್ಣಿಮೆ ನಡೆಯಿತು. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದರೂ ಕೂಡ ಎಂದೂ ಅವರು ವೇದಿಕೆಗೆ ಬಂದು ಕೂರಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಶುದ್ಧ ಮನಸ್ಥಿತಿ ಹೊಂದಿದ ವ್ಯಕ್ತಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಹೊಳಲ್ಕೆರೆ ಬಿಜೆಪಿ ಮಂಡಲಾಧ್ಯಕ್ಷ ಸಿದ್ದೇಶ್, ಮುಖಂಡರಾದ ಮಾಧುರಿ ಗಿರೀಶ್, ಕಾಟೇಹಳ್ಳಿ ಶಿವಣ್ಣ, ಪಿ.ಜಿ.ನರೇಂದ್ರನಾಥ್, ಕೆ.ಸಿ.ರಮೇಶ್, ಯುಗಧರ್ಮ ರಾಮಣ್ಣ ಸೇರಿದಂತೆ ಹಲವಾರು ಮುಖಂಡರು ಇದ್ದರು.

About The Author

Leave a Reply

Your email address will not be published. Required fields are marked *