May 23, 2024

Chitradurga hoysala

Kannada news portal

ಕೋವಿಡ್ ಗೆ ಸೈ ಅಭಿವೃದ್ಧಿಗೆ ಜೈ ಕೋವಿಡ್ ನಡುವೆಯೂ ಅಭಿವೃದ್ಧಿ ಮರೆಯದ ಶಾಸಕ ತಿಪ್ಪಾರೆಡ್ಡಿ.

1 min read

ಚಿತ್ರದುರ್ಗ ಕೋಟೆ ನಾಡಿನ ರಸ್ತೆಗಳ ಅಭಿವೃದ್ಧಿಗೆ ಒತ್ತು .  

 ವಿಶೇಷ ವರದಿ: ರಾಜ್ಯ ರಾಜಕಾರಣದಲ್ಲಿ  ಸ್ನೇಹ ಜೀವಿಯಾಗಿ , ಜಿಲ್ಲಾ ರಾಜಕಾರಣದ  ಚಾಣಕ್ಯ, ಚುನಾವಣಾ ಪಟ್ಟುಗಳನ್ನು ಕರಗತ ಮಾಡಿಕೊಂಡು ಆರು ಬಾರಿ ಶಾಸಕರಾಗಿ  ಜಿಲ್ಲಾ ಕೇಂದ್ರದ  ಅಭಿವೃದ್ಧಿಯ ಜೊತೆಗೆ ಕೋವಿಡ್ ಸಮಸ್ಯೆಗಳನ್ನು ತಡೆಯುವಲ್ಲಿ  ಹಗಲಿರುಳು ಶ್ರಮಿಸುತ್ತಿರುವ ಜನಪ್ರಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಕೆಲಸಕ್ಕೆ ಎಲ್ಲೆಡೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ‌.

ಕೋವಿಡ್ ಕೋವಿಡ್ ನಿಯಂತ್ರಣಕ್ಕೆ ಸತತ ಶ್ರಮ: ತಿಪ್ಪಾರೆಡ್ಡಿ  ಅವರ ವಯಸ್ಸು  ಲೆಕ್ಕಿಸದೆ ಅವರ ಚಟುವಟಿಕೆ , ಚುರುಕುತನ ಯುವಕರನ್ನು ನಾಚಿಸುತ್ತದೆ. ನಿತ್ಯ ಹತ್ತಾರು ಹಳ್ಳಿಗಳು ಸುತ್ತುತ್ತ ಅನೇಕ  ಕಾರ್ಯಕ್ರಮಗಳಿಗೆ  ತೆರಳುತ್ತ ದಿನವನ್ನು ಕಳೆಯುವ ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ತಿಪ್ಪಾರೆಡ್ಡಿ ಮೊದಲಿಗರು. ಅಧಿಕಾರಿಗಳಿಗೆ  ಅನೇಕ ಬಾರಿ ಬಿಸಿ ಮುಟ್ಟಿಸುವ ಜೊತೆಯಲ್ಲಿ ಸಾವಿರಾರು ಬಡವರಿಗೆ , ಕೂಲಿ ಕಾರ್ಮಿಕರಿಗೆ ಸಾವಿರಾರು ಆಹಾರದ ಕಿಟ್ , ಮಾಸ್ಕ್ , ಸ್ಯಾನಿಟೈಸರ್  ವಿತರಣೆ ಜೊತೆಗೆ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸುತ್ತ ಜನರ ಆರೋಗ್ಯ ಕಾಪಾಡಿಕೊಳ್ಳಲು ಮನವಿ ಮಾಡುತ್ತಿದ್ದಾರೆ.  

ರಸ್ತೆ ಅಗಲೀಕರಣಕ್ಕೆ ಒತ್ತು 300 ರಿಂದ 400 ಕೋಟಿ : ಹೌದು ಚಿತ್ರದುರ್ಗ ಜನರು ರಸ್ತೆಯ ಅಗಲೀಕರಣದ ಬಗ್ಗೆ  ಸದಾ ಮಾತಡುತ್ತಿದ್ದರು.ಆದರೆ ಅಂತಹ ಅವಕಾಶಕ್ಕೆ ಕಾಯುತ್ತಿದ್ದ ಶಾಸಕ ತಿಪ್ಪಾರೆಡ್ಡಿ  ಗೆದ್ದ ಮೊದಲ ವರ್ಷದಲ್ಲಿ ಸರ್ಕಾರ ಇಲ್ಲದೆ ಸುಮ್ಮನೆ  ಕೂರದೆ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡುವುದಕ್ಕೆ  ಚಳ್ಳಕೆರೆ ಗೇಟ್ ನಿಂದ ಪ್ರವಾಸಿ  ಮಂದಿರದವರೆಗೆ ಕಾಮಗಾರಿಗೆ  ಚಾಲನೆ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಅವಕಾಶ ಕೈ ಚಲ್ಲದೆ ಇಡೀ ದುರ್ಗದ ಉಳಿದ  ಮುಖ್ಯ ರಸ್ತೆಗಳಿಗೆ ಮತ್ತು   ಇತರೆ ಅನುದಾನದಲ್ಲಿ ಹಣ  ಮಂಜೂರು ಮಾಡಿಸುವ ಕೆಲಸ ಮಾಡಿ ಅತಿ ವೇಗವಾಗಿ ರಸ್ತೆಯ ಕೆಲಸಗಳು ಮತ್ತು  ರಸ್ತೆ ಅಗಲೀಕರಣಕ್ಕ ಅಡ್ಡಿ ಆತಂಕಗಳ ನಿವಾರಣೆ ಮಾಡುತ್ತ  ಅಭಿವೃದ್ಧಿ ಎಡೆಗೆ ದುರ್ಗದ ರಸ್ತೆಗಳು ಸಾಗುತ್ತಿವೆ. 

ರಾಜ್ಯದಲ್ಲಿ  ಕೋವಿಡ್ ಸಮಸ್ಯೆ ಕಾಡುತ್ತಿದ್ದರು ಸಹ ಜನರ ಜೊತೆಯಲ್ಲಿ ಇದ್ದು ಸಮಸ್ಯೆ ಆಲಿಸುತ್ತ ಕೋವಿಡ್ ನಿಯಂತ್ರಣದ  ಜೊತೆಯಲ್ಲಿ  ಕೋಟೆ ನಾಡಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿರುವುದು ಶಾಸಕ ತಿಪ್ಪಾರೆಡ್ಡಿ ಅವರು  ಜನರ ಕಾಳಜಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಕಾಪಡುವಲ್ಲಿ ಸದಾ ಮುಂದೆ ಎಂಬುದು ಸಾಬೀತುಪಡಿಸುತ್ತ ಬಂದಿರುವುದರಿಂದ ಕ್ಷೇತ್ರದ ಜನರ ಮನ ಗೆದ್ದಿದ್ದಾರೆ.

About The Author

Leave a Reply

Your email address will not be published. Required fields are marked *