Recent Posts

October 17, 2021

Chitradurga hoysala

Kannada news portal

ಜೆಡಿಎಸ್ ಬಲಿಷ್ಠವಾಗಿದೆ; ಅನಂತ್ ಪುತಿ ವಿಜೇತ ಟೀಟ್ ಸಿಕಾಪಟೆ ವೈರಲ್

1 min read

ಜೆಡಿಎಸ್ ಬಲಿಷ್ಠವಾಗಿದೆ; ಅನಂತ್ ಪುತಿ ವಿಜೇತ ಟೀಟ್ ಸಿಕಾಪಟೆ ವೈರಲ್

ಬೆಂಗಳೂರು ●ನಮ್ಮ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಪ್ರಬಲ ರಾಜಕೀಯ ಶಕ್ತಿಯಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿವಂಗತ ಅನಂತಕುಮಾರ್ ಅವರ ಮಗಳು ವಿಜೇತಾ ಟ್ವೀಟ್ ಮಾಡಿದ್ದಾರೆ.ಈ ಟ್ವಿಟ್ ನೆಟ್ಟಿಗರ ಮನಸ್ಸಿಗೆ ನಾಟಿದೆ. ರಾಜ್ಯ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕವಾಗಿದೆ?ಎಂದು ಸಹ ಪ್ರಶ್ನಿಸಿರುವ ಅವರು, ಜಾತ್ಯತೀತ ಜನತಾದಳ ಪಕ್ಷ ರಾಜ್ಯದಲ್ಲಿ ಇನ್ನೂ ಬಲಿಷ್ಠವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿರಿಯ ಮತ್ತು ಪ್ರಭಾವಿ ಬಿಜೆಪಿ ನಾಯಕರಾಗಿದ್ದ ಅನಂತಕುಮಾರ್ ಅವರ ಪುತ್ರಿಯಾಗಿರುವ ಕಾರಣದಿಂದಾಗಿ , ಅವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ದಿವಂಗತ ಅನಂತಕುಮಾರ್ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿಯೂ ಹಲವು ಬಾರಿ ಆಯ್ಕೆಯಾಗಿದ್ದ ಅವರು ಕರ್ನಾಟಕವನ್ನು ಮತ್ತು ಬಿಜೆಪಿಯ ಕರ್ನಾಟಕ ಘಟಕವನ್ನು ದೆಹಲಿಯಲ್ಲಿ ಪ್ರತಿನಿಧಿಸುತ್ತಿದ್ದರು. ಅವರ ಮರಣಾನಂತರ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಮಾತುಗಳು ಆಗ ಪ್ರಬಲವಾಗಿ ಕೇಳಿಬಂದಿತ್ತು.

ಆದರೆ ಬಿಜೆಪಿ ಯುವ ನಾಯಕ ತೇಜಸ್ವಿ ಸೂರ್ಯಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿತ್ತು,ಒಟ್ಟಾರೆ ವಿಜೇತ ರವರ ಟ್ವಿಟ್ ನಾನಾ ಪ್ರಶ್ನೆಗಳನ್ನಂತು ಹುಟ್ಟು ಹಾಕಿದೆ ಎನ್ನಬಹುದು.

Leave a Reply

Your email address will not be published. Required fields are marked *

You may have missed