April 25, 2024

Chitradurga hoysala

Kannada news portal

ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ಲಾಭ, ನಷ್ಟ?!
ಹಿಂದುಳಿದ ವರ್ಗಗಳ ನಾಯಕ,
ಮಧ್ಯಕರ್ನಾಟಕದ ಹಿರಿಯ ರಾಜಕಾರಣಿ…

ಆಯ್ಕೆಗೆ ಕಾರಣಗಳು…..
■ಚಿತ್ರದುರ್ಗ ಜಿಲ್ಲೆ ಏಕೆ ರಾಜ್ಯದ ಅರ್ಧ ಭಾಗಕ್ಕೆ ಚಿರಪರಿಚಿತರು
■ಜಿಲ್ಲೆಯ ಸಂಪೂರ್ಣ ಜವಾಬ್ದಾರಿ ನೀಡಿದರೆ 6ಕ್ಕೆ6 ಕ್ಷೇತ್ರಗೆಲ್ಲಿಸಿಕೊಳ್ಳುವ ಶಕ್ತಿ ಇದೆ.
■ ಅತ್ಯಂತ ಸರಳ, ಸಜ್ಜನಿಕೆ ವ್ಯಕ್ತಿತ್ವ.
■ಸಂಘಟನಾ ಚತುರ
■ಹಿಂದುಳಿದ ನಾಯಕ.
■ಸೇವಾ ಹಿರಿತನ.
■ಮುತ್ಸದ್ದಿ ರಾಜಕಾರಣಿ.
■ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದರೆ ಇವರ ಸಹಕಾರಅಗತ್ಯ.
■ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬವ ಸಾಮಥ್ರ್ಯವಿದೆ.

________________________________

ಚಿತ್ರದುರ್ಗ ●ಸರಳ, ಸಜ್ಜನಿಕೆಯ ಮೇರು ವ್ಯಕ್ತಿತ್ವದ, ಹಿಂದುಳಿದ ವರ್ಗಗಳ ನಾಯಕ ಜಿ.ಎಚ್.ತಿಪ್ಪಾರೆಡ್ಡಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡುವುದು ಬಿಜೆಪಿಗೆ ಅನಿವಾರ್ಯ ಮತ್ತು ಹೆಮ್ಮೆಯ ವಿಷಯವಾಗಿದೆ.ಕಳೆದ ನಾಲ್ಕು ದಶಕಗಳಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಶಾಸಕ ತಿಪ್ಪಾರೆಡ್ಡಿ ಅವರು ನಿಸ್ವಾರ್ಥವಾಗಿ ಜನ ಸೇವೆ ಮಾಡುವ ಮೂಲಕ ಹಿಂದುಳಿದ ವರ್ಗಗಳ ಅದರಲ್ಲೂ ಅತ್ಯಂತ ಕಡಿಮೆ ಜನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಹಿಂದುಳಿದ ಜಾತಿಗಳ ನಾಯಕರಾಗಿ ಹೊರಹೊಮ್ಮಿದ್ದಾರೆ. ಚಿತ್ರದುರ್ಗ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಗೆ ಕಾಯಕಲ್ಪ ಮಾಡುವ ಮಹತ್ವವನ್ನು ಶಾಸಕರು ಹೊಂದಿದ್ದಾರೆ. ಜಿ.ಎಚ್. ತಿಪ್ಪಾರೆಡ್ಡಿ ಅವರು ಜನಪ್ರಿಯ ಶಾಸಕರೆಂದೇ ಖ್ಯಾತಿ ಪಡೆದಿದ್ದಾರೆ. ಕಳೆದ 35 ವರ್ಷಗಳಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದು ಬಿಟ್ಟರೆ ರಾಜಕೀಯವಾಗಿ ಅವರೆಂದೂ ಹಿಂದೆ ನೋಡಲಿಲ್ಲ. ಒಮ್ಮೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನ ಪರಿಷತ್ ಗೂ ಆಯ್ಕೆಯಾಗಿದ್ದರು. 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಕಮ್ಮ ರೆಡ್ಡಿ ಐದಾರು ಸಾವಿರ ದಾಟುವುದಿಲ್ಲ. ಆದರೂ ನಿರಂತರವಾಗಿ ಗೆಲ್ಲುತ್ತಾರೆ ಎಂದಾದರೆ ಅದಕ್ಕೆ ಅವರ ಜನಪ್ರಿಯತೆಯೇ ಸಾಕ್ಷಿ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು, ಮೂರು ವಿಧಾನ ಪರಿಷತ್ ಕ್ಷೇತ್ರಗಳು ಹಾಗು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಸಾಧಿಸಿರುವ ತಿಪ್ಪಾರೆಡ್ಡಿ ಅವರಿಗೆ ಇಷ್ಟು ಕ್ಷೇತ್ರಗಳಲ್ಲಿ ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿ, ಸಾಮಥ್ರ್ಯ ಇರುವ ಏಕೈಕ ನಾಯಕ ತಿಪ್ಪಾರೆಡ್ಡಿ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಗೆಲ್ಲಬೇಕಾದರೆ ಇವರ ಸಹಕಾರ ಅತ್ಯಗತ್ಯ.

ತಿಪ್ಪಾರೆಡ್ಡಿ ಯಾರು…?

ಅವಿಭಜಿತ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ಜನಿಸಿದರು. ಸುಮಾರು 74 ವರ್ಷ ವಯಸ್ಸಿನ ಇವರು ಅತ್ಯಂತ ಕ್ರಿಯಾಶೀಲ ರಾಜಕಾರಣಿ. ಕ್ಷೇತ್ರದ ಜನತೆಯ ನಾಡಿ ಮಿಡಿತ ಅರಿತಿರುವ ಇವರ ಅತ್ಯಂತ ಪ್ರಭಾವಿ ನಾಯಕರಷ್ಟೆ ಅಲ್ಲ ಮಾಸ್ ಲೀಡರ್ ಕೂಡಾ ಆಗಿದ್ದಾರೆ.

ಇವರ ತಂದೆ ಜಿ. ಹನುಮಂತರೆಡ್ಡಿಯವರ ಕಾಲಾನಂತರದಲ್ಲಿ ಇವರ ಕುಟುಂಬ ಚಿತ್ರದುರ್ಗ ನಗರಕ್ಕೆ ಬಂದು ನೆಲೆಸಿತು .ಇವರ ತಂದೆಯವರು ಹತ್ತಿ ಜಿನ್ನಿಂಗ್ ಮಿಲ್ ಸ್ಥಾಪಿಸಿದ್ದರು ಹಾಗೂ ಇವರ ಕುಟುಂಬ ಹತ್ತಿ ಮತ್ತೆ ಅರಳೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿತ್ತು. ಹತ್ತಿ ವ್ಯಾಪಾರ ಜೊತೆಜೊತೆಯಲ್ಲೇ ಕಾಲೇಜು ದಿನಗಳಿಂದಲೂ ಸಕ್ರಿಯವಾಗಿ ಕಾಂಗ್ರೆಸ್ ಕಾರ್ಯಕರ್ತರಾಗಿ, ಯುವ ಕಾಂಗ್ರೆಸ್ ಮುಖಂಡರಾಗಿ ಸೇವೆ ಆರಂಭಿಸಿದ್ದರು. ಇವರು ಒಳ್ಳೆ ಬ್ಯಾಸ್ಕೆಟ್ಬಾಲ್ ಆಟಗಾರರಾಗಿ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದವರಲ್ಲಿ ಇವರು ಒಬ್ಬರು ಎನ್ನುವುದು ಮುಖ್ಯ. ಇವರು 1966ರಲ್ಲಿ ರಾಷ್ಟೀಯ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದರು. ಇವರ ಹಿರಿಯ ಸಹೋದರ ಅಶ್ವತ್ಥರೆಡ್ಡಿಯವರು ರಾಜಕೀಯಕ್ಕೆ ಕಾಲಿಟ್ಟಾಗ ಅಲ್ಲಿಂದ ಶುರುವಾದ ರಾಜಕೀಯ ಜೀವನ ಹತ್ತು ಹಲವು ತಿರುವುಗಳನ್ನು ಪಡೆದುಕೊಂಡು, ಒಬ್ಬ ಸಮರ್ಥ ರಾಜಕೀಯ ನಾಯಕನ ಸೃಷ್ಟಿಗೆ ಕಾರಣವಾಗಿದೆ.1980 ರಿಂದಲೂ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿದ ಇವರಿಗೆ ಕಾಂಗ್ರೆಸ್ ಪಕ್ಷ, ಪ್ರತಿ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆಂದು ಭರವಸೆ ನೀಡುತ್ತಾ ಕಡೆ ಘಳಿಗೆಯಲ್ಲಿ ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡಿ ಇವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿತ್ತು. ಇದರಿಂದ ಬೇಸತ್ತ ಇವರು 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಪ್ರಥಮ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವಿನ ನಗೆ ಬೀರಿದರು.

ಚಿತ್ರದುರ್ಗ ಕ್ಷೇತ್ರದ ಶಾಸಕರಾದ ಇವರು ಜನರೊಂದಿಗೆ ನೇರ ಮತ್ತು ಆತ್ಮೀಯ ಸಂಬಂಧ ಹೊಂದಿದ್ದಾರೆ. ಎಲ್ಲ ಮತದಾರರನ್ನು ವೈಯಕ್ತಿಕವಾಗಿ ಗುರುತಿಸಬಲ್ಲಂತಹ ವಿಶೇಷ ವ್ಯಕ್ತಿತ್ವ ಅಪರಿಮಿತವಾಗಿ ಜ್ಞಾಪಕಶಕ್ತಿ ಹೊಂದಿದ್ದಾರೆ.ಶಾಂತಿಸಾಗರದಿಂದ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಸಾಕಾರಗೊಳಿಸಿದರು. ಇವರು ಅತ್ಯಂತ ಸರಳ ರಾಜಕಾರಣಿ ಹಾಗೂ ಜನರ ನೋವಿಗೆ ಮಿಡಿಯುವ ಶಾಸಕ ಎಂದರೆ ಅತಿಶಯೋಕ್ತಿಯಾಗಲರದು.

ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹಿಂದುಳಿದ ವರ್ಗಕ್ಕೆ ಸಾಮಾಜಿಕ, ರಾಜಕೀಯ ನ್ಯಾಯ ಒದಗಿಸಿಕೊಟ್ಟ, ದುರ್ಬಲರಿಗೆ ಧ್ವನಿಯಾಗಿರುವ ತಿಪ್ಪಾರೆಡ್ಡಿ ಅವರಿಗೆ ಅವರೇ ಸಾಟಿ. ಶೋಷಿತ ಸಮುದಾಯಗಳ ಪರವಾಗಿ ಸದಾ ಧ್ವನಿ ಎತ್ತುವ ಇವರ ರಾಜಕೀಯ ಬದುಕು ತೆರೆದ ಪುಸ್ತಕದಂತೆ.

ಅವರ ಜೀವನದಲ್ಲಿ ಅಪ್ಪಿತಪ್ಪಿಯೂ ಜಾತಿಯತೆ ಸುಳಿಯಲಿಲ್ಲ. 7 ಸಲ ಶಾಸಕರು, ವಿಪ ಸದಸ್ಯರಾಗಿದ್ದರೂ ಅಧಿಕಾರದ ಹಮ್ಮಿ ಬಿಮ್ಮನ್ನು ತೆಲೆಗೇರಿಸಿಕೊಳ್ಳಲಿಲ್ಲ, ವಾಸ್ತವಿಕ ಜೀವನದಿಂದ ದೂರ ಸರಿಯಲಿಲ್ಲ. ಬಡವರು, ದುರ್ಬಲ ವರ್ಗದವರು ಶೋಷಿತರು, ದಲಿತರ ಬಗೆಗೆ ಎಲ್ಲಿಲ್ಲದ ಕಾಳಜಿ. ಇಂತಹ ಜನನಾಯಕರಿಗೆ ಮಂತ್ರಿ ಸ್ಥಾನ ನೀಡುವುದು ಬಿಜೆಪಿಗೆ ಹೆಮ್ಮೆಯ ವಿಷಯವಾಗಲಿದೆ.

About The Author

Leave a Reply

Your email address will not be published. Required fields are marked *