April 23, 2024

Chitradurga hoysala

Kannada news portal

ವದಂತಿಗಳಿಗೆ ಕಿವಿಕೊಡದೆ ಕೋವಿಡ್ ಲಸಿಕೆ ಪಡೆದು  ಕುಟುಂಬದ  ಸದಸ್ಯರಿಗೂ  ಕೊಡಿಸಿ: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ….

1 min read


ವದಂತಿಗಳಿಗೆ ಕಿವಿಕೊಡದೆ ಕೋವಿಡ್ ಲಸಿಕೆ ಪಡೆದು  ಕುಟುಂಬದ  ಸದಸ್ಯರಿಗೂ  ಕೊಡಿಸಿ: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ….

ಪ್ರಧಾನಮಂತ್ರಿ ಕೌಶಲ ಕೇಂದ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ

ಚಿತ್ರದುರ್ಗ,ಜುಲೈ31:
ಚಿತ್ರದುರ್ಗ ನಗರದ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ವಿವಿಧ ಕೌಶಲ್ಯ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಕೋವಿಡ್ ಲಸಿಕಾ ಅಭಿಯಾನ ಆದ್ಯತಾ ವರ್ಗದ ಫಲಾನುಭವಿಗಳಿಗೆ ಜರುಗಿತು.
ಕೋವಿಡ್ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಪೀಠಧ್ಯಕ್ಷರಾದ
ಶ್ರೀಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕೊರೋನಾದಿಂದ ಪ್ರಾಣಹಾನಿಯಾಗದಂತೆ ರಕ್ಷಣೆ ಪಡೆಯಲು ಲಸಿಕೆ ಸುರಕ್ಷೆಯಾಗಿದೆ. ಯಾವುದೇ ವದಂತಿಗಳಿಗೆ ಕಿವಿಕೊಡದೆ ಲಸಿಕೆ ಪಡೆದು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಲಸಿಕೆ ಕೊಡಿಸಿ ಎಂದು ಶ್ರೀಗಳು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಶೇ. 70 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಚಿತ್ರದುರ್ಗ ನಗರದಲ್ಲಿ ಶೇ.90 ರಷ್ಟು ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಕೊರೋನಾ ರೋಗ ಇನ್ನೂ ಸಂಪೂರ್ಣವಾಗಿ ಹೋಗಿರುವುದಿಲ್ಲ. ನಾವಿನ್ನು ಸಾಂಕ್ರಾಮಿಕ ರೋಗದ ಮಧ್ಯೆ ವಾಸಿಸುತ್ತಿದ್ದೇವೆ. ಲಸಿಕೆ ಪಡೆದಿದ್ದರೂ ಸಹ ಎಚ್ಚರಿಕೆಯ ಅಗತ್ಯವಿದೆ. ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ವೈಯಕ್ತಿಕ ಸ್ವಚ್ಚತೆಗೆ ಗಮನಹರಿಸುವುದು ಮುಖ್ಯ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಅವರು ಬಳಸಿದ ಮಾಸ್ಕ್ ಹೇಗೆ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಮಾರುತಿಪ್ರಸಾದ್, ಯಾವುದೇ ಜ್ವರ, ಕೆಮ್ಮು ಇರಲಿ ಕ್ಷಯರೋಗ ತಪಾಸಣೆ ಮಾಡಿಸಿ ಎಂದರು.
ಈ ಸಂದರ್ಭದಲ್ಲಿ ನೂರಾರು ಪ್ರಶಿಕ್ಷಣಾರ್ಥಿಗಳಿಗೆ ಲಸಿಕೆ ಮತ್ತು ಕೋವಿಡ್ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರ್, ಸಿರೀಶ್, ಪರ್ವಿನ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *