Recent Posts

October 17, 2021

Chitradurga hoysala

Kannada news portal

ಕೋಮುವಾದಿಗಳು ಇವತ್ತಿಗೂ ಅಂಬೇಡ್ಕರ್, ಮಹಾತ್ಮಾ ಗಾಂಧಿಯನ್ನು ಒಪ್ಪುತ್ತಿಲ್ಲ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವು ಯಾದವ್ ಆರೋಪ.

1 min read

ಅಂಬೇಡ್ಕರ್ ಸಮಸಮಾಜದ ಕನಸನ್ನು ಕಂಡವರು; ಹಿರಿಯ ವಕೀಲ ಶಿವು ಯಾದವ್

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ದೇಶದಲ್ಲಿ ಸಮಸಮಾಜದ ಕನಸನ್ನು ಕಂಡಿದ್ದರು. ಆದರೆ ಕೋಮುವಾದಿಗಳು ಇವತ್ತಿಗೂ ಅಂಬೇಡ್ಕರ್, ಮಹಾತ್ಮಾ ಗಾಂಧಿಯನ್ನು ಒಪ್ಪುತ್ತಿಲ್ಲ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವು ಯಾದವ್ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕಟ್ಟಡ ಕಾರ್ಮಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಈ ಹಿಂದೆ ಹಣವಂತರು ಹಾಗು ಮೇಲ್ಜಾತಿ ವರ್ಗಕ್ಕೆ ಮಾತ್ರ ಚುನಾವಣೆಯಲ್ಲಿ ಮತ ಹಾಕಲು ಅವಕಾಶವಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ನಂತರ ಅವರು ಸೂಚಿಸಿದ ಕಾನೂನಿನನ್ವಯ ಕೆಳವರ್ಗದಿಂದ ಮಧ್ಯ ವರ್ಗದವರಿಗೂ ಸೇರಿ ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತ ಚಲಾಯಿಸುವ ಹಕ್ಕನ್ನು ನೀಡಿದ್ದಾರೆ. ಮತ್ತೊಬ್ಬ ಸ್ವಾತಂತ್ರ್ಯ ಸೇನಾನಿ ಮಹಾತ್ಮ ಗಾಂಧಿ ದೇಶಕ್ಕೆ ಅಗತ್ಯವಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಈ ಇಬ್ಬರು ಮಹಾನಾಯಕರನ್ನು ಕೋಮುವಾದಿಗಳು ಇಂದಿಗೂ ಒಪ್ಪದೆ ತಾಸ್ಕರ ಮನೋಭಾವ ತೋರಿಸುತ್ತಿರುವುದು ದುರಂತ ಎಂದರು.
ಮಕ್ಕಳಿಗೆ ಶಿಕ್ಷಣವೇ ಮದ್ದು, ಕಟ್ಟಡ ಕಾರ್ಮಿಕರು ಆದಷ್ಟು ಮಕ್ಕಳನ್ನು ಶಾಲೆಯಿಂದ ಬಿಡಿಸದೇ ಕಷ್ಟ ಏನೇ ಇರಲಿ ದೊಡ್ಡವರಾದ ನೀವುಗಳು ನಿಭಾಯಿಸುವ ಮೂಲಕ ತಮ್ಮ ತಮ್ಮ ಮಕ್ಕಳನ್ನು ಪರಿಪೂರ್ಣ ಶಿಕ್ಷಣವಂತರನ್ನಾಗಿ ಮಾಡಿ, ಮುಂದೆ ಮಗ, ಮಗಳೊ ದೊಡ್ಡ ಹುದ್ದೆಯಲ್ಲಿ ಸೇರಿ ಅಗತ್ಯವಿದ್ದ ನಿಮ್ಮ ಬೇಡಿಕೆಗಳನ್ನು ಪೂರೈಸುತ್ತಾರೆ. ಬೆಳೆಯುವ ಮೊಳಕೆಯಲ್ಲಿಯೇ ಚಿವುಟುವ ಕೆಲಸವನ್ನು ಯಾರು ಮಾಡಬಾರದು. ದಲಿತ, ಹಿಂದುಳಿದ ವರ್ಗದ ಪ್ರತಿಯೊಬ್ಬರಿಗು ಸಂವಿಧಾನ ಎಲ್ಲಾವನ್ನು ಕೊಟ್ಟಿದೆ. ಗ್ರಾಂ ಪಂಚಾಯಿತಿ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.
ಕಟ್ಟಡ ಕಾರ್ಮಿಕರೊಂದಿಗೆ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕರಾದ ಶಿವು ಯಾದವ್

ಗ್ರಾಮ ದಲ್ಲಿ ಆಗುವ ಸಣ್ಣಪುಟ್ಟ ಜಗಳಗಳನ್ನೊತ್ತು ಕೊರ್ಟ್‍ಗೆ ಬರಬೇಡಿ, ಇದರಿಂದ ನಿಮಗೆ ಹೆಚ್ಚಿನ ತೊಂದರೆ, ಏನೇ ಇರಲಿ ಸಮಾಧಾನದಿಂದ ಗ್ರಾಮದಲ್ಲಿ ಆದಷ್ಟು ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದರು.
ನಾನು ವಕೀಲರ ಸಂಘದ ಅಧ್ಯಕ್ಷನಾಗಲು ಹೊರಟಾಗಲೂ ನನ್ನ ಮೆಲೆ ಇಲ್ಲಸಲ್ಲದ ಪಿತೂರಿಗಳು ಹರಿದಾಡಿದವಾದರೂ ಅದಕ್ಯಾವುದು ನಮ್ಮ ಜಿಲ್ಲೆಯ ವಕೀಲರು ಸೊಪ್ಪು ಹಾಕದೇ ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ನ್ಯಾಯವನ್ನು ಎತ್ತಿ ಹಿಡಿದಿದ್ದಾರೆ. ಜೊತೆಗೆ ಎದುರಾಳಿಗಳಿಗೆ ತಕ್ಕ ಉತ್ತರವನ್ನು ರವಾನಿಸಿದ್ದಾರೆ. ಜಿಲ್ಲಾ ವಕೀಲರ ಸಂಘದಲ್ಲಿ ಅಧಿಕಾರಲ್ಲಿರುವಷ್ಟು ವಕೀಲರ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಉಪಸ್ಥಿತರಿದ್ದ ಚಿತ್ರದುರ್ಗ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ಅಧ್ಯಕ್ಷ ಟಿ.ಶಫಿವುಲ್ಲಾ ಮಾತನಾಡಿ, ಹಿರಿಯ ವಕೀಲರಾದ ಶೀವು ಯಾದವ್ ಅವರು, ವಕೀಲ ಸಂಘದಲ್ಲಿ ದುಡಿದವರು, ಅನುಭವಸ್ಥರು. ತೀರಾ ಕೆಳವರ್ಗದಿಂದ ಬಂದಂತಹ ವ್ಯಕ್ತಿ ವಕೀಲರ ಸಂಘಕ್ಕೆ ಅಧ್ಯಕ್ಷ ಆಗಿರುವುದು ಖುಷಿಯ ವಿಚಾರ. ಉನ್ನತ ಹುದ್ದೆ ಸಿಗುವ ಮುನ್ನ ಹೆಚ್ಚಿನ ಶ್ರಮವಿರುತ್ತದೆ. ಡಾ.ಅಂಬೇಡ್ಕರ್ ಅವರ ಕೊಡುಗೆಗಳಿಂದ ಇಂದು ತಳ ಸಮುದಾಯಗಳ ಬುದ್ದಿವಂತರು ಇಂತಹ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಕಟ್ಟಡ ಕಾರ್ಮಿಕ ಸಂಘದ ನಜೀರ್ ಅಹ್ಮದ್(ರಾಜಣ್ಣ) ಮಾತನಾಡಿ, ದೇಶದಲ್ಲಿ ಕಟ್ಟಡ ಕಾರ್ಮಿಕರ ಸಂಖ್ಯೆ ಹೆಚ್ಚಿದ ಆದರೆ ಅವರ ಮಕ್ಕಳು ಕೂಡ ಇದೇ ಹುದ್ದೆಯಲ್ಲಿ ನಿರತರಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಮುಂದೆ ಆಗುವುದು ಬೇಡ, ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಣವಂತರನ್ನಾಗಿ ಮಾಡುವ ಮೂಲಕ ಪ್ರಜ್ಞಾವಂತ ಸಮಾಜವನ್ನು ಕಟ್ಟಲು ಮುಂದಾಗಬೇಕೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುರುಬರಹಳ್ಳಿ ಮಝರ್, ಶ್ರೀಕಾಂತ್, ಚಂದ್ರಮ್ಮ, ಸುಮಿತ್ರಮ್ಮ, ಸುಂದರಮ್ಮ, ಭಾಗ್ಯಮ್ಮ, ಚಂದ್ರಮ್ಮ ಮುಂತಾದವರು ಉಪಸ್ಥಿತರಿದ್ದರು.
ಕೋಟ್,ಹಿಂದಿನಿಂದಲೂ ದಲಿತ, ಹಿಂದುಳಿದವ ದ್ವನಿಯಾಗಿದ್ದೇನೆ.. ಕಾನೂನನ್ನು ಯಾರು ಗೌರವಿಸುತ್ತಾರೋ ಅವರನ್ನು ಕಾನೂನು ಗೌರವಿಸುತ್ತದೆ. ಕಾನೂನು ಬಿಟ್ಟು ಯಾರು ಮುಂದೆ ಹೋಗಬಾರದು. ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಅತ್ಯಾವಶ್ಯಕವಾಗಿ ಬೇಕಿದೆ. ಕಾಲೇಜಿಗಾಗಿ ನನ್ನ ಹೋರಾಟ ನಿರಂತರವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡಲು ಯೋಜಿಸಿದ್ದೇನೆ. ನನ್ನ ಅವಧಿ ಮುಗಿಯುವುದರ ಒಳಗೆ ವೈದ್ಯಕೀಯ ಕಾಲೇಜ್ ಸ್ಥಾಪನೆ ಆಗಲು ಪ್ರಯತ್ನಿಸುತ್ತೇನೆ. ವೈದ್ಯಕೀಯ ಕಾಲೇಜ್ ಆರಂಭಿಸುವುದು ನನ್ನ ಉದ್ದೇಶಗಳಲ್ಲಿ ಒಂದು.
ಶಿವು ಯಾದವ್, ಅಧ್ಯಕ್ಷರು, ಜಿಲ್ಲಾ ವಕೀಲರ ಸಂಘ

 

Leave a Reply

Your email address will not be published. Required fields are marked *

You may have missed