April 25, 2024

Chitradurga hoysala

Kannada news portal

ನೆನಪಿರಲಿ…..!

1 min read

ನೆನಪಿರಲಿ…..!

ಸಾಹೇಬ್ ರನ್ನು ಎಂದೂ ಮರೆಯಬೇಡಿ ದಲಿತ ಬಂಧುಗಳೇ ಮತ್ತು ಅಕ್ಕ,ಅಣ್ಣಂದಿರೇ

• ಇಂದು ನೀವು ಶುದ್ಧೀಕರಿಸಿದ ನೀರು ಕುಡಿತಾ ಇದ್ದೀರಾ,ಅಂದು ನಿಮಗೆ ಹೊಲಸು ನೀರಿಗೂ ಗತಿ ಇರಲಿಲ್ಲ .ಅದಕ್ಕಾಗಿ ಒಬ್ಬ ವ್ಯಕ್ತಿ ಹೋರಾಟ ಮಾಡಿದ್ದರು ನಿಮಗೆ ನೆನಪಿದೆಯಾ ?

• ಇಂದು ನೀವು ಚಿಕನ್ ಮಟನ್ ತಿನ್ನುತ್ತಿದ್ದಿರಾ ಅಂದು ನಿಮಗೆ ಹಳಸಿದ ಎಂಜಲಿಗೂ ಗತಿ ಇರಲಿಲ್ಲ.ಇದರ ವಿರುದ್ಧ ಹೋರಾಟ ಮಾಡಿದ ವ್ಯಕ್ತಿಯ ಬಗ್ಗೆ ನಿಮಗೆ ನೆನಪಿದೆಯಾ ?

• ಇಂದು ಹವಾನಿಯಂತ್ರಿತ ಗಾಡಿಯಲ್ಲಿ ತಿರುಗಾಡ್ತೀರ ಅಂದು ನಿಮ್ಮ ಹೆಜ್ಜೆ ಗುರುತು ಕೂಡಾ ನೆಲದಲ್ಲಿ ಕಾಣಬಾರದು ಅಂತ ಕಾಲಿಗೆ ಬಾರಿಗೆ ಕಟ್ಟಲಾಗಿತ್ತು.ಅದರ ವಿರುದ್ಧ ಹೋರಾಟ ಮಾಡಿದ ವ್ಯಕ್ತಿಯ ಬಗ್ಗೆ ನಿಮಗೆ ನೆನಪಿದೆಯಾ ?

• ಇಂದು ಊರ ನಡುವೆ ಹವಾನಿಯಂತ್ರಿತ ಬಂಗಲೆಯಲ್ಲಿ ರಾಜರಂತೆ ಬದುಕುತ್ತಿರುವಿರಿ. ಅಂದು ಊರ ಹೊರಗಿನ ಗುಡಿಸಲಲ್ಲಿ ಇರೋಕು ಆಸ್ಪದ ಇರಲಿಲ್ಲ .ಇದರ ವಿರುದ್ನ ಹೋರಾಡಿದ ವ್ಯಕ್ತಿಯ ಬಗ್ಗೆ ನಿಮಗೆ ನೆನಪಿದೆಯಾ ?
• ಇಂದು ಐಎಎಸ್ ,ಐಪಿಎಸ್ ಅಧಿಕಾರಿ, ಮಂತ್ರಿಗಳು ಆಗುತ್ತೀರಾ ,ಅಂದು ಅಕ್ಷರ ಕಲಿಯಲೂ ನಿಮಗೆ ಆಸ್ಪದ ಇರಲಿಲ್ಲ.ತಾನೂ ಕೊಠಡಿ ಹೊರಗಡೆ ಕುಳಿತು, ಅಕ್ಷರ ಕಲಿತು ನನ್ನ ಹಾಗೆ ನನ್ನ ಜನ ಹೊರಗೆ ಕುಳಿತುಕೊಳ್ಳಬಾರದು.ಒಳಗಡೆ ಕುಳಿತು ಚೆನ್ನಾಗಿ ಓದಲಿ ಅಂತ ಹೋರಾಟ ಮಾಡಿದ ವ್ಯಕ್ತಿಯ ಬಗ್ಗೆ ನಿಮಗೆ ನೆನಪಿದೆಯಾ ?

• ಅಂದು ನಾನೇನೊ ಕತ್ತಲಲ್ಲಿ , ಗಬ್ಬು ನಾರುವ ಸ್ಥಳದಲ್ಲಿ ಮದುವೆಯಾದೆ. ಇಂದು ನನ್ನ ಜನಗಳು ಸಡಗರ, ಸಂಭ್ರಮದ ಮದ್ಯೆ ಸವ೯ರ ಸಮ್ಮುಖದಲ್ಲಿ ಮದುವೆ ಆಗಲಿ ಅಂತ ಹೋರಾಟ ಮಾಡಿದ ವ್ಯಕ್ತಿಯ ಬಗ್ಗೆ ನಿಮಗೆ ನೆನಪಿದೆಯಾ ?

• ನನ್ನ ಜನ ಚೆನ್ನಾಗಿರಲೆಂದು ತನ್ನ ನಾಲ್ಕು ಮಕ್ಕಳು ಹಾಗೂ ಹೆಂಡತಿಯ ಸಾವಿನ ಬಗ್ಗೆಯೂ ಚಿಂತಿಸದೆ, ನಿಮ್ಮ ಭವಿಷ್ಯದ ಬಗ್ಗೆ ಕನಸು ಕಂಡ ವ್ಯಕ್ತಿಯ ಬಗ್ಗೆ ನಿಮಗೆ ನೆನಪಿದೆಯಾ ?

• ಎಲ್ಲಾ ಮಹಿಳೆಯರೇ,ಮತ್ತು ಅಕ್ಕ ತಂಗಿಯರೇ ನಿಮ್ಮ ಗಂಡ ಸತ್ತರೆ, ಆತನೊಂದಿಗೆ ನಿಮ್ಮನ್ನು ಜೀವಂತವಾಗಿ ಸುಡುತ್ತಿದ್ದರು( ಸತಿ ಸಹಗಮನ) ಅದರ ವಿರುದ್ಧ ಹೋರಾಡಿದ ವ್ಯಕ್ತಿಯ ಬಗ್ಗೆ ನಿಮಗೆ ನೆನಪಿದೆಯಾ ?

• ಶಿಕ್ಷಣ, ಸಂಘಟನೆ, ಹೋರಾಟ,ಸ್ವಾಭಿಮಾನದ ಬೀಜ ಬಿತ್ತಿದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಿದೆಯಾ ?

• ನಾನು ಸತ್ತರೂ ನನ್ನ ಜನಕ್ಕೆ ಕಷ್ಟ ಆಗಬಾರದು ಅಂತ, ಹಕ್ಕುಗಳನ್ನು ಹೊತ್ತ ಗ್ರಂಥ (ಸಂವಿಧಾನ) ಬರೆದಿಟ್ಟು ಹೋದ ವ್ಯಕ್ತಿಯ ಬಗ್ಗೆ ನಿಮಗೆ ನೆನಪಿದೆಯಾ ?

ಹೌದು.ನೆನಪಿದೆ! ಅನ್ನೋದಾದರೆ ಈ ನೂರೆಂಟು ನಾಮಗಳ ಜಪ ತಪವೇಕೆ ? ಇವರಿಂದ ನಿಮಗಾಗಿರುವ ಲಾಭವಾದರೂ ಏನು?
ಆತ್ಮ ಸಾಕ್ಷಿ ಅನ್ನೋದು ಇದ್ದರೆ! ಆಲೋಚಿಸಿ ಭೀಮಾ ಶಕ್ತಿಯನ್ನು ವಿನಿಯೋಗಿಸಿಕೊಳ್ಳಿ.

ಭೀಮ್ ರಾವ್‌ ಅಂಬೇಡ್ಕರ್‌ ದಾರಿಯಲ್ಲಿ ಸಾಗೋಣ ಜೈ ಭೀಮ್
ಸಂಗ್ರಹ : ವಿಜಯ್ ತೊಡರನಾಳ್,

About The Author

Leave a Reply

Your email address will not be published. Required fields are marked *