March 29, 2024

Chitradurga hoysala

Kannada news portal

ಎದ್ದು ನಿಂತು ರಾಷ್ಟ್ರಗೀತೆ ಹಾಡಿ ಅಪ್‍ಲೋಡ್ ಮಾಡಬೇಕು : ರಾಷ್ಟ್ರಗೀತೆ ಹಾಡಿ ಪ್ರಮಾಣ ಪತ್ರ ಪಡೆಯಿರಿ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಧನಂಜಯ

1 min read

ರಾಷ್ಟ್ರಗೀತೆ ಹಾಡಿ ಪ್ರಮಾಣ ಪತ್ರ ಪಡೆಯಿರಿ

ಎದ್ದು ನಿಂತು ರಾಷ್ಟ್ರಗೀತೆ ಹಾಡಿ ಅಪ್‍ಲೋಡ್ ಮಾಡಬೇಕು

ಚಿತ್ರದುರ್ಗ,
75ನೇ ಸ್ವಾತಂತ್ರ್ಯೋತ್ಸವ “ಅಜಾದ್ ಕಾ ಅಮೃತ್ ಮಹೋತ್ಸವ” ಆಚರಣೆಯ ಅಂಗವಾಗಿ ಪ್ರತಿಯೊಬ್ಬ ಭಾರತೀಯನು ನಮ್ಮ ರಾಷ್ಟ್ರಗೀತೆಯನ್ನು ಹಾಡಿ ಕೇಂದ್ರ ಸರ್ಕಾರ ಸೂಚಿಸಿರುವ https://rashtragaan.in/Record ನ ಮೂಲಕ ತಮ್ಮ ಹಾಡನ್ನು ಅಪ್‍ಲೋಡ್ ಮಾಡಲು ಅವಕಾಶ ನೀಡಿದೆ.
ಮೇಲಿನ ಲಿಂಕ್ ಬಳಸಿ ಮೊದಲು ನಿಮ್ಮ ಹೆಸರು ಟೈಪ್ ಮಾಡಿದ ನಂತರ ರಾಜ್ಯ ಆಯ್ಕೆ ಮಾಡಬೇಕು. ನಂತದಲ್ಲಿ ರೆಕಾರ್ಡ್ ಬಟನ್ ಒತ್ತಿದಾಗ ರಾಷ್ಟ್ರಗೀತೆಯ ಸಂಗೀತ ಕೇಳಿಸುತ್ತದೆ. ಅದೇ ಟ್ರ್ಯಾಕಿಗೆ ಎದ್ದು ನಿಂತು ರಾಷ್ಟ್ರಗೀತೆ ಹಾಡಿ ಅಪ್‍ಲೋಡ್ ಮಾಡಬೇಕು ನಂತರ ಸ್ವಯಂಪ್ರೇರಿತವಾಗಿ ಪ್ರಮಾಣಪತ್ರ ಬರಲಿದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ನಾಗರಿಕರು ರಾಷ್ಟ್ರಗೀತೆ ಹಾಡಿ ಪ್ರಮಾಣ ಪತ್ರ ಪಡೆಯಬೇಕು ಎಂದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಧನಂಜಯ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *