April 25, 2024

Chitradurga hoysala

Kannada news portal

ಠೇವಣಿದಾರರಿಗೆ ಬೇಕು ಇನ್ನಷ್ಟು ಭದ್ರತೆ ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾಪ್ರೋರೇಷನ್ ಕಾಯ್ದೆ:  ಆರ್ಥಿಕ ತಜ್ಞ    ಡಾ.ಮಲ್ಲಿಕಾರ್ಜುನಪ್ಪ.

1 min read

ಠೇವಣಿದಾರರಿಗೆ ಬೇಕು ಇನ್ನಷ್ಟು ಭದ್ರತೆ ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾಪ್ರೋರೇಷನ್ ಕಾಯ್ದೆ:                  ಆರ್ಥಿಕ ತಜ್ಞ                              ಡಾ.ಮಲ್ಲಿಕಾರ್ಜುನಪ್ಪ.

ಚಿತ್ರದುರ್ಗ ●ಠೇವಣಿದಾರರಿಗೆ ಹೆಚ್ಚಿನ ಪರಿಹಾರ ಒದಗಿಸುವ ದೃಷ್ಟಿಯಿಂದ ಕಳೆದ ವಾರವಷ್ಟೇ ಭಾರತ ಸರ್ಕಾರದ ಸಚಿವ ಸಂಪುಟ “ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾಪ್ರೋರೇಷ್ನ್ ಕಾಯ್ದೆ-1961”ಗೆ ತಿದ್ದುಪಡಿ ತಂದು, ಬ್ಯಾಂಕು ಮುಚ್ಚುವ ಸಂದರ್ಭ ಬಂದಾಗಲೂ 90 ದಿನಗಳ ಕಾಲಮಿತಿಯಲ್ಲಿ ಠೇವಣಿದಾರರ ಮೊತ್ತವನ್ನು (ಗರಿಷ್ಠ ರೂ. 5 ಲಕ್ಷ ಮಾತ್ರ) ಪಾವತಿಸಬೇಕು ಎನ್ನುವ ತೀರ್ಮಾನ ಕೈಗೊಂಡಿದೆ(ಸಂಪಾದಕೀಯ, ಪ್ರ.ವಾ. ದಿ.4.8.2021).

ಈ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಪೆಗಾಸಸ್ ಗದ್ದಲದ ನಡುವೆಯೂ ಅಂಗೀಕಾರಗೊಂಡಿದೆ. ಇದು ಎಂಟು ವರ್ಷಕ್ಕೆ ನನ್ನ ಮಗ ದಂಟು ಅಂದ, ಎನ್ನುವ ಮಾತಿನಂತಿದ್ದರೂ ಸ್ವಾಗತಿಸಬೇಕಿದೆ. ಸ್ವತಂತ್ರ ಬಂದು ಏಳು ದಶಕಗಳು ಕಳೆದರೂ, ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞ ಹತ್ತು ವರ್ಷಗಳ ಕಾಲ ಈ ದೇಶದ ಪ್ರಧಾನ ಮಂತ್ರಿಯಾಗಿದ್ದರೂ ದೇಶದ ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಗ್ರಾಹಕರಿಗೆ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿರುವುದು ನಿಜ.

ಇದು ಬ್ಯಾಂಕುಗಳು ಮತ್ತು ಠೇವಣಿದಾರರಿಬ್ಬರ ಹಿತದೃಷ್ಟಿಯಿಂದ ದೊಡ್ಡ ಹಿನ್ನಡೆಯೇ ಸರಿ. ಯಾವುದೇ ದೇಶವೊಂದು ತನ್ನ ಆರ್ಥಿಕ ವಲಯದಲ್ಲಿನ ಬ್ಯಾಂಕುಗಳ ಠೇವಣಿದಾರರಿಗೆ ಕೊಡುವ ಠೇವಣಿ ಭದ್ರತೆ ಎಂದರೆ, ಅದು ಅಲ್ಲಿನ ಆಂತರಿಕ ಬಂಡವಾಳ ಕ್ರೋಢೀಕರಣಕ್ಕೆ ನೀಡುವ ಪ್ರೇರಣೆ ಅμÉ್ಟೀ ಅಲ್ಲ, ಬ್ಯಾಂಕುಗಳ ಬಗೆಗಿನ ಗ್ರಾಹಕರ ನಂಬುಗೆಯ ಖಾತ್ರಿ ಕೂಡ. ಭವಿಷ್ಯದ ಭರವಸೆಯ ಬದುಕಿಗಾಗಿ ಕಷ್ಟಪಟ್ಟು ಗಳಿಸಿದ ಅμÉ್ಟೂೀ ಇμÉ್ಟೂೀ ಹಣವನ್ನು ಇಡುಗಂಟಾಗಿ ಬ್ಯಾಂಕಿನಲ್ಲಿ ಠೇವಣಿ ಇರಿಸುವ ಮೂಲಕ ಪಡೆಯುವ ಬಡ್ಡಿಯೇ ಬಹುಸಂಖ್ಯಾತ ಗ್ರಾಹಕರ ಸ್ವಭಿಮಾನದ ಬದುಕು. ಆತಂಕ ರಹಿತ ಹೂಡಿಕೆಯ ದಾರಿ. ಅದರಲ್ಲೂ ವೃತ್ತಿ, ಉದ್ಯೋಗಗಳಿಂದ ನಿವೃತ್ತರಾಗಿ ಜೀವನದ ಸಂಧ್ಯಾ ಕಾಲದಲ್ಲಿರುವವರಿಗೆ ನಿಜಕ್ಕೂ ಇದೊಂದು ವರದಾನ. ಅಧಿಕ ಹಣಗಳಿಕೆಯ ಸಾಧ್ಯತೆಯ ಹೂಡಿಕೆಗಳಲ್ಲಿ ಹಣ ಹಾಕಿ ಭರವಸೆಯ ಆದಾಯವಿಲ್ಲದೆ ಕೈಸುಟ್ಟುಕೊಳ್ಳಬಯಸದವರಿಗೊಂದು ನೆಮ್ಮದಿಯ ಆದಾಯ ಮೂಲ. ಇವರಿಗೆ ನೀಡುವ ಠೇವಣಿ ಭದ್ರತೆ ಎಂದರೆ ಅದು ಅವರಿಗೆ ಒದಗಿಸುವ ಸಾಮಜಿಕ ಭದ್ರತೆ ಮತ್ತು ನ್ಯಾಯ. ಇಂಥ ಭದ್ರತೆಯ ಅನುಪಸ್ಥಿತಿಯಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಠೇವಣಿದಾರರು ಡಬ್ಬಾ ಕಂಪನಿಗಳು ಮತ್ತು ವಂಚಕ ಸಂಸ್ಥೆಗಳ ಜಾಲದಲ್ಲಿ ಸಿಕ್ಕು ಇದ್ದದನ್ನೆಲ್ಲಾ ಕಳದುಕೊಂಡು ಬರಿಗೈ ಬಸಪ್ಪಗಳಾಗುವ ದೈನೇಸಿ ಸ್ಥಿತಿ.

ಇದಕ್ಕೆ ಇವತ್ತು ನಾವು ನೋಡುತ್ತಿರುವ ಕೆಲ ಪ್ರಕರಣಗಳೇ ಸಾಕ್ಷಿ. ಅದು ಬೆಂಗಳೂರಿನ ಐಎಎಂ ಪ್ರಕರಣ ಆಗಿರಬಹುದು, ರಾಘವೇಂದ್ರ ಸಹಕಾರಿ ಬ್ಯಾಂಕ್ ಆಗಿರಬಹುದು ಅಥವಾ ಪಂಜಾಬ್-ಮಹಾರಾಷ್ಟ್ರ ಬ್ಯಾಂಕ್, ಬೆಸ್ಟ್ ಬ್ಯಾಂಕ್, ಲಕ್ಷ್ಮಿವಿಲಾಸ ಬ್ಯಾಂಕುಗಳಂಥ ದೊಡ್ಡ ಬ್ಯಾಂಕುಗಳೂ ಆಗಿರಬಹುದು. ಇಂಥ ವಂಚಕರ ಕಪಿಮುಷ್ಟಿಗೆ ಸಿಕ್ಕು ಮುಗ್ದ ಠೇವಣಿದಾರರು ಸಂಕಟದ ಕೂಪಕ್ಕೆ ಹೋಗಬಾರದೆಂದರೆ, ಅವರು ಇಟ್ಟ ಠೇವಣಿ ಮೊತ್ತ ಸುರಕ್ಷಿತವಾಗಿ ಅವರಿಗೆ ಬೇಕೆಂದಾಗ ಸಿಗುವಂತಿರಬೇಕು. ಈ ಬಗ್ಗೆ ಸರ್ಕಾರಗಳ ಕಟ್ಟುನಿಟ್ಟಿನ ಕಾಯ್ದೆಗಳಿಲ್ಲದಿದ್ದರೆ, ಮತ್ತು ಆ ಕಾಯಿದೆಗಳಾದರೂ ಕಾಲಮಿತಿಯಲ್ಲಿ ಜಾರಿಯಾಗದಿದ್ದರೆ ಅದು ತಾಯ ಮೊಲೆಹಾಲು ನಂಜಾದಂತೆ. ಭಾರತದಲ್ಲಿ ಇಂಥ ಠೇವಣಿ ಭದ್ರತೆಯ ಮೊತ್ತ ದಶಕಗಳಿಂದ ಕೇವಲ ಒಂದು ಲಕ್ಷಕ್ಕೆ ರೂಪಾಯಿಗಳಿಗೆ ಸೀಮಿತವಾಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 2020ರ ಮುಂಗಡಪತ್ರದಲ್ಲಿ ಈ ಮಿತಿಯನ್ನ ರೂ. 5 ಲಕ್ಷಕ್ಕೆ ಏರಿಸಿ ಉಪಕರಿಸಿದ್ದಾರೆ. ಅದೂ ಕೂಡ ಒಂದು ಬ್ಯಾಂಕಿನ ಎಲ್ಲಾ ಶಾಖೆಗಳಿಗೆ ಅನ್ವಯಿಸುವ ಒಟ್ಟು ಮೊತ್ತವಾಗಿರುತ್ತದೆ.

ಆದರೆ ಈ ಮೊತ್ತ ಇತರೆ ಅಭಿವೃದ್ಧಿ ಹೊಂದಿರುವ ಮತ್ತು ಹೊಂದುತ್ತಿರುವ ರಾಷ್ಟ್ರಗಳಿಲ್ಲಿನ ಮೊತ್ತಕ್ಕೆ ಹೋಲಿಸಿದರೆ ತೀರಾ ಕಡಿಮೆ. ಮೆಕ್ಸಿಕೋ, ಟರ್ಕಿ ಮತ್ತು ಜಪಾನ್ ದೇಶಗಳಲ್ಲಿ ಅದು ಶೇ. ನೂರರಷ್ಟಿದೆ. ಪತ್ರಿಕೆಯ ಪ್ರಸ್ತುತ ಸಂಪಾದಕೀಯದಲ್ಲಿ ಸ್ಪಷ್ಟವಾಗಿ ಸೂಚಿಸಿರುವಂತೆ ಅದು ಹಣದುಬ್ಬರ ದರಕ್ಕೆ ಹೊಂದಿಕೆಯಾಗಿ ಏರಿಕೆಯ ದರದಲ್ಲಿರುವುದಾದರೆ ಉಳಿತಾಯದಾರರಿಗೆ ನೆಮ್ಮದಿ. ಈ ನಿಟ್ಟಿನಲ್ಲಿ ಬ್ಯಾಂಕುಗಳು ಠೇವಣಿ ಭರವಸೆ ನೀಡುವ ವಿಮಾ ಸಂಸ್ಥೆಗಳಿಗೆ ಪಾವತಿಸುವ ವಿಮಾ ಮೊತ್ತ ಅವುಗಳ ಆರ್ಥಿಕತೆಗೆ ಭಾರವಾಗುತ್ತದೆ ಎನ್ನುವುದಾದರೆ, ಹಾಲೀ ಕೆಲ ದೇಶಗಳಲ್ಲಿರುವಂತೆ ವಿಮಾ ಮೊತ್ತವನ್ನು ಬ್ಯಾಂಕು ಮತ್ತು ಗ್ರಾಹಕರು ಕೂಡಿ ಭರಿಸುವ ವ್ಯವಸ್ಥೆ ಮಾಡಬಹುದು. ಠೇವಣಿಯ ಮೇಲೆ ನೀಡುವ ಬಡ್ಡಿಯ ದರ ಒಂದಷ್ಟು ಕಡಿಮೆಯಾದರೂ ಸರಿ, ಬ್ಯಾಂಕುಗಳು ದುಃಸ್ಥಿತಿಗೆ ಒಳಗಾದಾಗ ಗ್ರಾಹಕರು ಠೇವಣಿ ವಂಚಿತರಾಗಬಾರದು.

ಹೀಗೆ ವಿಮಾ ಕಂತಿನ ಪಾವತಿಯ ಭಾರವನ್ನು ಹಂಚಿಕೊಳ್ಳುವುದರಿಂದ ಬ್ಯಾಂಕಿಗೂ ಹೊರೆಯಾಗುವುದಿಲ್ಲ, ಮತ್ತು ಯಾವ ಗ್ರಾಹಕನೂ ಇಲ್ಲ ಎನ್ನುವುದಿಲ್ಲ. ಅದೂ ಕೋವಿಡ್-19ರಂತಹ ಸಂಕಷ್ಟದ ಸಂದರ್ಭದಲ್ಲಿ ಕೈಯಲ್ಲೊಂದಿಷ್ಟು ಹಣ ಇಟ್ಟುಕೊಂಡವರಿಗೆ ಸಣ್ಣ ಮೊತ್ತವಾದರೂ ಸರಿ, ನಿಗದಿತವಾಗಿ ಬಡ್ಡಿ ರೂಪದ ಆದಾಯ ಸಿಗುವ ಸಾಧ್ಯತೆ ಎಂದರೆ ಬ್ಯಾಂಕ್ ಠೇವಣಿಗಳು ಮಾತ್ರ.ಈ ದೃಷ್ಟಿಯಿಂದ ಪ್ರಸ್ತುತ ಒಕ್ಕೂಟ ಸರ್ಕಾರ ಮಂಡಿಸಿರುವ “ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾಪೆರ್Çೀರೇಷನ್ ಕಾಯ್ದೆ” ತಿದ್ದುಪಡಿ ಯನ್ನು ಸ್ವಾಗತಿ ಸುತ್ತಲೇ, ಈಗಿನ ಠೇವಣಿ ಭರವಸೆ ಮೊತ್ತ ರೂ. 5ಲಕ್ಷ ಮಿತಿಯನ್ನು ಅಮೆರಿಕಾ, ಇಂಗ್ಲೆಂಡ್, ಜಪಾನ್, ಜರ್ಮನಿ, ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳಲ್ಲಿರುವಷ್ಟರ ಮೊತ್ತಕ್ಕೆ ಸಮನಾಗಿ ಅಲ್ಲದಿದ್ದರೂ, ಕನಿಷ್ಟ ರೂ.20 ಲಕ್ಷಕ್ಕಾದರೂ ಏರಿಸುವ ಅಗತ್ಯವಿದೆ.

ಆ ದೇಶಗಳಲ್ಲಿ ಒದಗಿಸಲಾಗಿರುವ ಠೇವ ಣಿಗಳ ಮೇಲಿನ ಭದ್ರತೆಯ ಮೊತ್ತ, ನಮ್ಮ ರೂಪಾಯಿ ಲಿಕ್ಕದಲ್ಲಿ, ಸರಿ ಸುಮಾರು ಒಂದು ಕೋಟಿ ಹತ್ತಿರ ಬರು ತ್ತದೆ. ಈ ಮೂಲಕ ಠೇವಣಿದಾರರಿಗೆ ಅರ್ಥಿಕ ಭದ್ರತೆ ಮತ್ತು ಬ್ಯಾಂಕುಗಳಿಗೆ ದ್ರವ್ಯv ಎರಡನ್ನೂ ಏಕ ಕಾಲಕ್ಕೆ ಒದಗಿಸಬಹುದು. ಅಲ್ಲದೆ, ವಿದೇಶೀ ಬಂಡವಾಳಕ್ಕಾಗಿ ದೇಶ ಜಾಗತಿಕ ಹಣಕಾಸು ಸಂಸ್ಥೆಗಳ ಮುಂದೆ ಕೈ ಚಾ ಚುವ ದಯಾನೀಯ ಸ್ಥಿತಿಸ್ಥಿತಿಯನ್ನು ತಪ್ಪಿಸಬಹುದು.ಜೊತೆಗೆ, ಸಹಕಾರಿ ವಲಯದ ಬ್ಯಾಂಕುಗಳು ಮತ್ತು ಪತ್ತಿನ ಸಹಕಾರ ಸಂಘಗಳನ್ನೂ ಕೂಡ ಈ ಕಾಯಿದೆಯ ವಾಪ್ತಿ ಮತ್ತು ಆರ್ಬಿಐನ ಕಣ್ಗಾವಲಿಗೆ ಒಳಪಡಿಸಬೇಕಿದೆ. ಹೇಗೂ ಇದೀಗ ಒಕ್ಕೂಟ ಸರ್ಕಾರ ಸಹಕಾರಿ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳುವ ಪ್ರಯತ್ನವಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದೆ.

ಇದರಿಂದಾಗಿ ಸಹಕಾರಿ ವಲಯದ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಟ್ಟವರಿಗೆ ಈ ಸೌಲಭ್ಯವನ್ನು ವಿಸ್ತರಿಸುವುದು ಕಷ್ಟವೇನಲ್ಲ. ಇಂದು ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ ಕೂಡ ನಾಯಿಕೊಡೆಗಳಂತೆ ಹುಟ್ಟಿಕೊಂಡು ಸಾಲ ಕೋರಿ ಬಂದವರ ರಕ್ತ ಹೀರುತ್ತಿವೆ. ಇಲ್ಲಿ ಶೋಷಣೆ ಎನ್ನುವುದು ಎರಡು ಬದಿಯ ಗರಗಸವಾಗಿದೆ. ಸರ್ಕಾರದ ನೊಂದಾಯಿತ ಸಂಸ್ಥೆಗಳು ಎನ್ನುವ ನಂಬುಗೆಯಿಂದ ಇಂಥ ಸಂಸ್ಥೆಗಳಲ್ಲಿ ಹಣ ಹೂಡಿ ವಂಚನೆಗೊಳಗಾದ ಸಂತ್ರಸ್ಥರು ಪರಿಹಾರ ಕೋರಿ ಸಚಿವರನ್ನು ಒತ್ತಾಯಿಸಿ ದಾಗ “ನನ್ನನ್ನು ಕೇಳಿ ನೀವು ಠೇವಣಿ ಇಟ್ಟಿದ್ರಾ?” ಎಂದು ಹರಿಹಾಯುವ, ಹಸಿವು ಇಂಗಿಸಲು ಅಕ್ಕಿ ಕೊಡಿ ಎಂದರೆ “ಸಾಯ್ರಿ” ಎನ್ನುವ ಪ್ರಭುತ್ವದ ಪ್ರತಿನಿಧಿಗಳಿರವಾಗ ನ್ಯಾಯ ಸಿಗುವುದು ಕಷ್ಟಸಾಧ್ಯವಾಗಿ ದ್ದರೂ ಹಕ್ಕೊತ್ತಾಯ ವನ್ನು ಕೈಬಿಡುವಂತಿಲ್ಲ. ಇದೀಗ ಹೆಚ್ಚು ವಂಚನೆಯ ಪ್ರಕರಣಗಳು ವರದಿಯಾಗುತ್ತಿರುವುದೇ ಸಹಕಾರಿ ವಲಯದ ಹಣಕಾಸು ಸಂಸ್ಥೆಗಳಲ್ಲಿ. ಗಾಂಧೀಜಿ ಯವರ ಕನಸಿನ ಸಹಕಾರಿ ಚಳುವಳಿ ಕಳ್ಳ ಕಾಕರ ಕಾರ್ಯಾಚರಣೆಯಾಗುತ್ತಿರುವುದನ್ನು ತಪ್ಪಿಸಲೇ ಬೇಕು. ಕೊನೆಯದಾಗಿ, ಇವತ್ತು ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ನಿತ್ಯ ಆರ್ಥಿಕ ಬದುಕಿನಲ್ಲಿ ಅನ್ವಯಸಿ ನಗದುರಹಿತ ವಹಿವಾಟು ನಡೆಸಲು ಮತ್ತು ವಿದ್ಯನ್ಮಾನ ಬ್ಯಾಂಕ್ ವ್ಯವಹಾರ ನಡೆಸಲು ಒತ್ತಾಯ ಪೂರಕ ಪೆÇ್ರೀತ್ಸಾಹ ಜಾರಿಯಲ್ಲಿದೆ.

ಇದು ಇವತ್ತಿನ ಜಾಗತಿಕ ಸಂದರ್ಭದಲ್ಲಿ ಅನಿವಾರ್ಯ ಕೂಡ. ಆದರೆ ಇದರಿಂದ ವಂಚನೆಗೊಳಗಾದ ಸಂದರ್ಭದಲ್ಲಿ ಅಮಾಯಕರಿಗೆ ರಕ್ಷಣೆ ಇಲ್ಲ ಎನ್ನುವುದಾದದರೆ ವಂಚನೆಯನ್ನೇ ಸಾರ್ವತ್ರೀಕರಿಸಿದಂತಾಗುತ್ತದೆ. ಕೆಲವು ಮುಗ್ದ, ಅμÉ್ಟೀ ಏಕೆ ಪ್ರಬುದ್ಧರೆನಿಸಿಕೊಂಡವರ ಬ್ಯಾಂಕ್ ಖಾತೆಗಳ ಹಣ ವಿದ್ಯುನ್ಮಾನ ಕಳ್ಳರ ಕೈಚಳಕದಿಂದ ಕಾಣೆಯಾಗುತಿರುವ ವರದಿಗಳು ಠೇವಣಿದಾರರ ನಿದ್ದೆಗೆಡಿಸುತ್ತಿದೆ. ಇಲ್ಲಿ ಗ್ರಾಹಕರ ಎಚ್ಚರಿಕೆ ಎಷ್ಟು ಮುಖ್ಯವೋ ಅμÉ್ಟೀ ಮುಖ್ಯ ಬ್ಯಾಂಕುಗಳ ಹೊಣೆಗಾರಿಕೆ ಮತ್ತು ಸರ್ಕಾರಗಳ ರಕ್ಷಣಾ ಕವಚ. ಯಾವ ಕಾನೂನು ಮತ್ತು ಕ್ರಮಗಳನ್ನು ನಂಬಿ ಗ್ರಾಹಕರು ಠೇವಣಿ ಇಡುತ್ತಾರೋ, ಹಣದ ವಹಿವಾಟು ನಡೆಸುತ್ತಾರೋ ಅವು, ಅವರನ್ನು ರಕ್ಷಿಸದೆ ನಡುನೀರಲ್ಲಿ ಕೈಬಿಡುವ ಪ್ರಕರಣಗಳು ಉಂಟಾದಾಗ ಜನ ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರ ಎರಡರ ಮೇಲೂ ಭರವಸೆ ಕಳೆದುಕೊಳ್ಳುವುದು ಸಹಜ. ಮುಕ್ತ ಮಾರುಕಟ್ಟೆ ಯಾವತ್ತೂ ತನ್ನ ವಹಿವಾಟುಗಳ ಸಂದರ್ಭದಲ್ಲಿ ಗ್ರಾಹಕರ ಬೌದ್ಧಿಕ ಸಬಲೀಕರಣವನ್ನು ಊಹಿಸಿಕೊಂಡೇ ಕ್ರಿಯಾಶೀಲವಾಗಿರುತ್ತದೆ.

ಆದ್ದರಿಂದ ಮಾಹಿತಿ ಕೊರತೆ ಇರುವವರಿಗೆ, ಅಸಹಾಯಕರಿಗೆ ಅಲ್ಲಿ ನ್ಯಾಯ ಸಿಗುವುದು ಖಂಡಿತಾ ಸಾಧ್ಯವಿಲ್ಲ. ಇಂಥ ಸಂದರ್ಭ ಬಂದಾಗ ರಕ್ಷಣೆಗೆ ಬರಬೇಕಾದ್ದು ಪ್ರಭುತ್ವದ ಕೆಲಸ. ಈ ಕೆಲಸದಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಏಕ ಕಾಲಕ್ಕೆ ಕ್ರಿಯಾಶೀಲವಾದರೆ ಮಾತ್ರ ದೇಶೀಯ ಊಳಿತಾಯ ಸಾಧ್ಯವಾಗುತ್ತದೆ, ದೇಶೀಯ ಹೂಡಿಕೆ ವೃದ್ಧಿಸುತ್ತದೆ, ಭಾರತ ಬಂಡವಾಳ ಸ್ವಾವಲಂಭೀ ರಾಷ್ಟ್ರವಾಗುತ್ತದೆ. ಇಲ್ಲವಾದರೆ ಠೇವಣಿದಾರರ ಸ್ಥಿತಿ ತೋಳನ ಕೈಗೆ ಕುರಿ ಒಪ್ಪಿಸಿದಂತೆ.ಒಟ್ಟಿನಲ್ಲಿ ಠೇವಣಿದಾರರು ಮತ್ತು ಬ್ಯಾಂಕುಗಳೆರಡನ್ನೂ ರಕ್ಷಿಸಿ ಪೆÇೀಷಿಸುವ ಹೊಣೆ ಪ್ರಭುತ್ವದ್ದಾಗಿದೆ. ಠೇವಣಿದಾರರ ನಂಬುಗೆಯನ್ನು ಕಳೆದುಕೊಂಡ ಯಾವುದೇ ಬ್ಯಾಂಕು ಅಥವಾ ಠೇವಣಿಯನ್ನು ಕಚ್ಚಾವಸ್ತುವಾಗಿರಿಸಿಕೊಂಡ ಹಣಕಾಸು ಸಂಸ್ಥೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಸಾಧ್ಯವೇ ಇಲ್ಲ.

ಲೇಖನ ●ಆರ್ಥಿಕ ತಜ್ಞ
ಡಾ||ಜಿ.ಎನ್.ಮಲ್ಲಿಕಾರ್ಜುನಪ್ಪ,
ಚಿತ್ರದುರ್ಗ. ಮೊ. 94490 77003

About The Author

Leave a Reply

Your email address will not be published. Required fields are marked *