ಹಿರಿಯೂರು: ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಲಿ: ಗೊಲ್ಲ ಸಮುದಾಯದ ಆಗ್ರಹ
1 min readಹಿರಿಯೂರು: ಶಾಸಕಿ ಪೂರ್ಣಿಮಾ ಅವರಿಗೆ
ಹಿರಿಯೂರು: ತಾಲ್ಲೂಕು ಯಾದವ(ಗೊಲ್ಲ) ಸಂಘದ ವತಿಯಿಂದ ನಗರದ ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾಜದಿಂದ ಇರುವ ಏಕೈಕ ಶಾಸಕಿ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಿದರು. ಈ ಹಿಂದೆ ಸಿಎಂ ಯಡಿಯೂರಪ್ಪ ಅವರು ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಈಗ ಅವರು ನೀಡಿದ್ದ ಭರವಸೆ ಉಳಿಸಿಕೊಳ್ಳಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಆರ್.ರಂಗಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿಕೆ ಉಗ್ರಮೂರ್ತಿ, ಪುರಸಭೆ ಮಾಜಿ ಸದಸ್ಯ ಬಿಕೆ ಕರಿಯಪ್ಪ, ತಾಪಂ ಮಾಜಿ ಅಧ್ಯಕ್ಷ ಸಿ.ತಮ್ಮಣ್ಣ, ಯಾದವ ಸಂಘದ ನಿರ್ದೇಶಕ, ಟಿಎಪಿಸಿಎಂಎಸ್ ಸದಸ್ಯ ಪಿ.ಕರಿಯಣ್ಣ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಶಿವಾನಂದ, ಮುಖಂಡರಾದ ಟಿ.ನಾಗಪ್ಪ, ತಿಪ್ಪೇಸ್ವಾಮಿ, ಶಿವು ಯಾದವ್, ಪಿ.ಕೃಷ್ಣಮೂರ್ತಿ, ಎ.ಕೃಷ್ಣಮೂರ್ತಿ, ಡಾಬ ಚಿಕ್ಕಣ್ಣ, ಈರಣ್ಣ, ಮೂಡಲಗಿರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.