ಧಾನ್ಯಗಳ ಅಲಂಕಾರದಲ್ಲಿ ಕಾಳಮ್ಮನ ಕಣ್ಣ ತುಂಬಿಕೊಂಡ ಭಕ್ತರು.
1 min readಚಿತ್ರದುರ್ಗ: ಚಿತ್ರದುರ್ಗದ ಕೋಟೆಯ ಬಳಿಯ ನಗರದ ಶಕ್ತಿ ದೇವತೆ ಶ್ರೀಕಾಳಿಕಮಠೇಶ್ವರಿ ದೇವಿಗೆ ಶ್ರಾವಣ ಶುಕ್ರವಾರ ಪ್ರಯುಕ್ತ ಇಂದು ಧಾನ್ಯಗಳ ಅಲಂಕಾರ ಮಾಡಲಾಗಿತ್ತು. ಹೆಸರುಕಾಳು, ತೊಗರಿಬೆಳೆ, ಕಡಲೆಕಾಳು, ಹುರುಳಿಕಾಳು, ಕಟ್ಟು ಹುರುಳಿಕಾಳು, ರಾಗಿ , ಹೀಗೆ ವಿವಿಧ ಬಗೆಯ ಕಾಳುಗಳನ್ನು ಮೂರು ದಿನಗಳ ಮುಂಚಿತವಾಗಿ ನೀರಿನಲ್ಲಿ ಹಾಕಿ ಮೊಳಕೆ ಒಡೆಯುವ ಕಾಳುಗಳನ್ನು ಶ್ರೀ ಕಾಳಮ್ಮನಿಗೆ ಅಲಂಕಾರ ಮಾಡುತ್ತಾರೆ. ಆ ಕಾಳುಗಳನ್ನು ಭಕ್ತರು ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗಿ ಹಾಕಿದರೆ ಉತ್ತಮ ಫಲ ನೀಡುತ್ತದೆ ಎಂಬ ಪ್ರತೀತಿಯಿದೆ. ಶ್ರಾವಣ ಮಾಸದಲ್ಲಿ ಅಷ್ಟೆ ಅಲ್ಲದೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪ್ರಾರ್ಥನೆ ಮತ್ತು ದೀಪ ಅಲಂಕಾರ ಮಾಡಿ ಭಕ್ತರು ಪೂಜ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಕಾಳಮ್ಮನ ಮೊರೆ ಹೋಗುತ್ತಾರೆ.