March 28, 2024

Chitradurga hoysala

Kannada news portal

ಸರ್ಕಾರಿ ಬಾಲಕಿಯರ ಕಾಲೇಜ್‍ನ ಶೌಚಾಲಯದಲ್ಲಿ ನೀರಿಲ್ಲದ ಪರಿಸ್ಥಿತಿ.

1 min read

ಸರ್ಕಾರಿ ಬಾಲಕಿಯರ ಕಾಲೇಜ್‍ನ ಶೌಚಾಲಯದಲ್ಲಿ ನೀರಿಲ್ಲದ ಪರಿಸ್ಥಿತಿ.

ಚಿತ್ರದುರ್ಗ ●ಕೋವಿಡ್ ನಿಯಮ ಪಾಲನೆಯ ಮುಖಾಂತರ, ಈ ವರ್ಷ ಪ್ರಾರಂಭವಾದಂತಹ ಶಾಲಾ ಕಾಲೇಜುಗಳಲ್ಲಿ, ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ ಎಂಬ ಭರವಸೆಯ ಮೇಲೆ, ಪೆÇೀಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸುತ್ತಿದ್ದಾರೆ. ಉದ್ಘಾಟನೆಯಾದ ದಿನ ಮಕ್ಕಳಿಗೆ ಒಂದು ಹೊಸ ಅನುಭವ, ಖುಷಿ ತಂದುಕೊಡುವಂತಹ ವ್ಯವಸ್ಥೆಯನ್ನ, ಸರ್ಕಾರದ ಎಲ್ಲಾ ಕಾಲೇಜುಗಳಲ್ಲಿ ಮಾಡಿದ್ದಾರೆ, ಎಂಬ ನಂಬಿಕೆ ಜನರಲ್ಲಿತ್ತು. ಆದರೆ ಕೆಲವು ಕಾಲೇಜುಗಳ ನಂಬಿಕೆಯನ್ನು ಹುಸಿಗೊಳಿಸಿ, ವಿದ್ಯಾರ್ಥಿನಿಯರ ಆರೋಗ್ಯದ ಜೊತೆ ಚಲ್ಲಾಟವಾಡುತ್ತಿವೆ. ವಿದ್ಯಾರ್ಥಿನಿಯರನ್ನ ಕಾಲೇಜಿನ ಒಳಗಡೆ ಬಿಟ್ಟು ಸುರಕ್ಷಿತವಾಗಿದ್ದಾರೆ ಎಂದು ಮನೆಗೆ ಆಗಮಿಸಿದಾಗ ಪೆÇೀಷಕರಿಗೆ ಬಂದ ಆಘಾತಕಾರಿ ಸುದ್ದಿ, ಸಾವಿರಾರು ವಿದ್ಯಾರ್ಥಿನಿಯರು ಹೋಗುವಂತ ಕಾಲೇಜುಗಳಲ್ಲಿ, ಶೌಚಾಲಯದಲ್ಲಿ ನೀರು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಳಿ ಗಾಬರಿಗೊಂಡದ್ದು.ಕಾಲೇಜು ಆವರಣದಲ್ಲಿ ಹಸಿರು ನೆಲಹಾಸನ್ನ ಹಾಸಿ, ಹಸಿರು ತೋರಣ ಕಟ್ಟಿ, ಬಣ್ಣಬಣ್ಣದ ಬಲೂನುಗಳನ್ನು ಕಟ್ಟಿ, ಸ್ವಾಗತ ಕೋರುವ ಫ್ಲೆಕ್ಸ್‍ಗಳನ್ನು ಹಾಕಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಟಿ.ವಿ. ಪತ್ರಿಕಾ ಮಾಧ್ಯಮದವರನ್ನ ಕರೆಸಿ, ವಿದ್ಯಾರ್ಥಿಗಳನ್ನ ವಿಜೃಂಭಣೆಯಿಂದ ಸ್ವಾಗತಿಸಿದ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ, ಶೌಚಾಲಯದಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾರ ಗಮನಕ್ಕೂ ಬಾರಲೇ ಇಲ್ಲಾ, ಇದು ಆಶ್ಚರ್ಯಕರವಾಗಿದೆ. ಕೊನೆಯ ಪಕ್ಷ ಉದ್ಘಾಟನೆ ದಿನವಾದರೂ, ತುರ್ತು ಸಂದರ್ಭವೆಂದು ತಿಳಿದು, ಒಂದು ನೀರಿನ ಟ್ಯಾಂಕರ್‍ನ ಮುಖಾಂತರ, ಶೌಚಾಲಯಕ್ಕೆ ನೀರು ಒದಗಿಸಬಹುದಿತ್ತು. ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಖರ್ಚು ಮಾಡುವುದಕ್ಕಿಂತ, ಮೂಲ ಸೌಕರ್ಯಕ್ಕೆ ಹಣ ಖರ್ಚು ಮಾಡುವುದು ಸೂಕ್ತ. ಹೆಣ್ಣು ಮಕ್ಕಳಿಗೆ ಶೌಚಾಲಯದಲ್ಲಿ ನೀರು ಇಲ್ಲದಿದ್ದರೆ ಹೇಗೆ ಎಂದು ಮಹಿಳಾ ಉಪನ್ಯಾಸಕರಿಗಾದರು ತಿಳಿದಿರಬೇಕಿತ್ತು. ಋತು ಚಕ್ರದ ವಯಸ್ಸಿಲ್ಲಿರುವ ಹೆಣ್ಣು ಮಕ್ಕಳಿಗೆ, ಶೌಚಾಲಯದಲ್ಲಿ ನೀರು, ನ್ಯಾಪಕಿನ್ ಹಾಕಲು ಕಸದ ಬುಟ್ಟಿ ಇಲ್ಲದಿದ್ದರೇ, ಅಂತಹ ಶಿಕ್ಷಣ ಸಂಸ್ಥೆಗಳನ್ನ ಮುಚ್ಚಿಬಿಡುವುದೇ ಸೂಕ್ತ. ಅದರಲ್ಲೂ ಹಿಂದುಳಿದ, ಅಲ್ಪ ಸಂಖ್ಯಾತರ ಹೆಚ್ಚಾಗಿ ಸೇರು ಕಾಲೇಜುಗಳು, ಅರೋಗ್ಯದ ಬಗ್ಗೆ ವಿದ್ಯಾರ್ಥಿನಿಯರಿಗೆ ಹೆಚ್ಚಿನ ತರಬೇತಿ, ಮಾಹಿತಿ ನೀಡಿ, ಅವರನ್ನ ಮುಖ್ಯವಾಹಿನಿಗೆ ತರಬೇಕು. ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ ಯಾವುದೇ ರೀತಿಯ ಮುನ್ನೆಚ್ಚರಿಕೆ ವಹಿಸದೆ, ಏಕಾಏಕಿ ಕಾಲೇಜ್‍ಗಳನ್ನು ತೆಗೆದು, ಸಾವಿರಾರು ವಿದ್ಯಾರ್ಥಿಗಳನ್ನು ನೀರಿಲ್ಲದ ಶೌಚಾಲಯದ ಬಳಕೆ ಮಾಡಲು ಬಿಟ್ಟಾಗ, ಪರಿಸ್ಥಿತಿ ಏನಾಗಬಹುದು?, ಕೋವಿಡ್ ನಿಯಮಗಳು ಏನಾದವು?, ಎಲ್ಲವನ್ನ ಗಾಳಿಗೆ ತೂರುವುದೇ ನಮ್ಮ ಗುಣವಾಗಬಾರದು. ಕೋವಿಡ್ ನಿಯಮಪಾಲನೆ ಎಂದರೇ, ಬರೀ ಸ್ಯಾನಿಟೈಸರ್ ಹಾಕುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಹಾಕುವುದು ಅμÉ್ಟೀ ಅಲ್ಲಾ. ಶೌಚಾಲಯದ ನೀರಿನ ವ್ಯವಸ್ಥೆಯನ್ನು ಸಹ ಸೇರಿಸಿಕೊಳ್ಳಬೇಕು. ಹೊರಗಡೆ ತೊರ್ಪಡಿಸುವ ಎಲ್ಲಾ ವ್ಯವಸ್ಥೆಗಳನ್ನ ಕಲ್ಪಿಸಿ, ಕಾಣಲಾರದ ಶೌಚಾಲಯದ ಬಗ್ಗೆ ವಿಚಾರದಲ್ಲಿ ತಿರಸ್ಕಾರ ಸಲ್ಲದು. ಗಾಂಧೀಜಿವರು ಅದಕ್ಕೆ ಎಲ್ಲಾ ಕಡೆ, ಶೌಚಾಲಯಕ್ಕೆ ಬೇಟಿ ನೀಡುತ್ತಿದ್ದರು. ಆರೋಗ್ಯದ ಮೂಲತತ್ವದಲ್ಲಿ ಶೌಚಾಲಯವೂ ಕೂಡಿದೇ. ಈ ಮೂಲ ತತ್ವವನ್ನು ಧಿಕ್ಕರಿಸಿ, ನಾವು ಶಾಲಾ ಕಾಲೇಜುಗಳನ್ನು ಪ್ರಾರಂಭ ಮಾಡಿ, ಕರೋನ ಹೆಚ್ಚಿಸಿಕೊಂಡು, ಮತ್ತೊಮ್ಮೆ ಪೆÇೀಷಕರು ತಮ್ಮ ಮಕ್ಕಳನ್ನ ಶಾಲೆಯಿಂದ ಹಿಂದಕ್ಕೆಳೆಯುವ ಸಂದರ್ಭಗಳುಂಟು. ಮೂರನೇ ಅಲೇಗೆ ನಾವೇ ಕಾರಣವಾಗಬಾರದು. ಸರ್ಕಾರದ ಅಧಿಕಾರಿಗಳು, ಆರೋಗ್ಯ ಇಲಾಖೆಯವರು, ಶಿಕ್ಷಕ ವೃಂದದವರು, ಆ ಕಾಲೇಜಿನ ಆಡಳಿತ ಮಂಡಳಿಯವರು, ತಮ್ಮ ಸ್ವಂತ ಮಕ್ಕಳನ್ನ ಶೌಚಾಲಯ ಇಲ್ಲದ, ನೀರಿಲ್ಲದ ಕಾಲೇಜುಗಳಿಗೆ ಕಳಿಸುತ್ತಿದ್ದರೆ ಏನಾಗುತ್ತಿತ್ತು ಎಂಬ ಭಾವನೆಯಿಂದ, ಮುತುರ್ವಜಿಯಿಂದ ವ್ಯವಸ್ಥೆಗಳನ್ನ ಸರಿಪಡಿಸಿಬೇಕು. ಇದು ಚಿತ್ರದುರ್ಗ ನಗರದ ಎಲ್ಲಾ, ಸಾವಿರಾರು ವಿದ್ಯಾರ್ಥಿಗಳ ಪೆÇೀಷಕರ ಕಳಕಳಿಯಾಗಿದೆ. ನಾಳೆಯಿಂದ ಶಾಲಾ ಕಾಲೇಜುಗಳು, ಶೌಚಾಲಯದ ಬಗ್ಗೆ ತೀವ್ರ ನಿಗಾ ಇಟ್ಟುಕೊಂಡು, ಅವುಗಳಿಗೆ ನೀರಿನ ಸೌಕರ್ಯ ಕಲ್ಪಿಸಿ, ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಶೌಚಾಲಯದ ಬಾಗಿಲುಗಳು ಮುಖ್ಯ ರಸ್ತೆಗೆ ಕಾಣುವ ರೀತಿ ಕಟ್ಟಡಗಳನ್ನು ಕಟ್ಟಿದ್ದರೆ, ಹೆಣ್ಣುಮಕ್ಕಳು ಶೌಚಾಲಯದೊಳಗೆ ಹೋಗುವುದಾದರೂ ಹೇಗೆ?, ಮುಜುಗರ ಪಡುವಂಥ ಸಂದರ್ಭಗಳೇ ಹೆಚ್ಚಾಗಿರುತ್ತದೆ. ಹೆಣ್ಣಿನ ಹಕ್ಕಿನ ಉಲ್ಲಂಘನೆಯೇ ಆಗುತ್ತದೆ. ಆತ್ಯಾಚಾರ, ದೌರ್ಜನ್ಯ ಹೆಚ್ಚಾಗಲು ಇಂತಹ ವ್ಯವಸ್ಥೆಗಳು ಕಾರಣವಾಗುತ್ತದೆ. ಹಾಗಾಗಿ ಈ ಕಾಲೇಜಿನಲ್ಲಿರುವ ಶೌಚಾಲಯಕ್ಕೆ ಒಂದಿಷ್ಟು, ಮರೆ ಮಾಚುವ ವ್ಯವಸ್ಥೆ ಕಲ್ಪಿಸಿ, ಪರಿವರ್ತನೆಯ ಗಾಳಿ ಬೀಸಲಿ ಎಂದು ಹಾರೈಸುತ್ತೇವೆ.ನೊಂದ ಪೆÇೀಷಕರು.

About The Author

Leave a Reply

Your email address will not be published. Required fields are marked *