Recent Posts

October 17, 2021

Chitradurga hoysala

Kannada news portal

ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಜನಾಶೀರ್ವಾದದ ಮೂಲಕ ಮಾದಿಗರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಾದಿಗರು ನಿಮ್ಮ ಜೊತೆ ಎಂದಿಗೂ ಇರುವುದಿಲ್ಲ:ಕೆ.ಪಿ.ಸಿ.ಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್

1 min read

  1. ನಾರಾಯಣಸ್ವಾಮಿ ಮಾದಿಗರನ್ನು ದಿಕ್ಕು ತಪ್ಪಿಸುತ್ತಿದ್ದಾರೆ:    ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್

ಚಿತ್ರದುರ್ಗ ●ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಜನಾಶೀರ್ವಾದದ ಮೂಲಕ ಮಾದಿಗರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಾದಿಗರು ನಿಮ್ಮ ಜೊತೆ ಎಂದಿಗೂ ಇರುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ನಾರಾಯಣಸ್ವಾಮಿರವರ ಉಡಾಫೆ ಮಾತುಗಳಿಗೆ ತಿರುಗೇಟು ನೀಡಿದರು. ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿರವರನ್ನು ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಮಂತ್ರಿಯನ್ನಾಗಿ ಮಾಡಿರುವುದರಿಂದ ನಾರಾಯಣಸ್ವಾಮಿ ಜನಾಶೀರ್ವಾದ ಯಾತ್ರೆ ಮೂಲಕ ಕೋವಿಡ್ ಹರಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಾ.ಬಾಬುಜಗಜೀವನರಾಂರವರನ್ನು ಐದು ಬಾರಿ ಮಂತ್ರಿಯನ್ನಾಗಿ ಮಾಡಿ ಒಮ್ಮೆ ಉಪಪ್ರಧಾನಿಯನ್ನಾಗಿಯೂ ಮಾಡಿದೆ. ಹರಿಯಾಣ, ಉತ್ತರಪ್ರದೇಶದವರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿದೆ. ಮೀರಾಕುಮಾರ್‍ರವರನ್ನು ಕೇಂದ್ರದ ಮಂತ್ರಿಯನ್ನಾಗಿ ಮಾಡಿದ್ದಲ್ಲದೆ ಲೋಕಸಭೆ ಸ್ಪೀಕರ್ ಆಗಿ ಕೂಡ ನೇಮಕ ಮಾಡಿದ್ದು, ಕಾಂಗ್ರೆಸ್. ಅವರ್ಯಾರು ನಾರಾಯಣಸ್ವಾಮಿಯಂತೆ ಮರೆವಣಿಗೆ ಮಾಡಿಕೊಳ್ಳಲಿಲ್ಲ. ಸುಶೀಲ್‍ಕುಮಾರ್ ಸಿಂದೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಒಟ್ಟು ಒಂಬತ್ತು ಮಂದಿಯನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದು, ಕಾಂಗ್ರೆಸ್. ಅವರುಗಳು ಈ ರೀತಿ ಆರ್ಭಟಿಸಲಿಲ್ಲ ಎಂದು ವ್ಯಂಗ್ಯವಾಡಿದರು. ಅರವತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಕೇಂದ್ರ ಮಂತ್ರಿ ಮೊದಲು ಕಾಂಗ್ರೆಸ್ ಇತಿಹಾಸವನ್ನು ತಿಳಿದುಕೊಂಡು ಮಾತನಾಡಲಿ. ನಾಲ್ಕು ನೂರು ಯುದ್ದ ಟ್ಯಾಂಕರ್, 944 ಯುದ್ದ ವಿಮಾನ, ಒಂದು ಕೋಟಿ ಇಪ್ಪತ್ತು ಲಕ್ಷ ಸೈನಿಕರನ್ನು ದೇಶಕ್ಕೆ ನೀಡಿದ್ದು, ಕಾಂಗ್ರೆಸ್. ಚಂದ್ರಯಾನ, ಮಂಗಳಯಾನಕ್ಕೆ ಹೋಗಿದ್ದು, ಕಾಂಗ್ರೆಸ್. ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯ, ಡ್ಯಾಂಗಳು, ಮೊಬೈಲ್, ಟಿವಿ, ಇಂಟರ್‍ನೆಟ್ ಇವುಗಳೆಲ್ಲಾ ಕಾಂಗ್ರೆಸ್ ಕೊಡುಗೆ. ಕೋಮುವಾದಿ ಬಿಜೆಪಿ. ಯಾವೊಬ್ಬ ಬಡವನಿಗೂ ಆಶ್ರಯ ಮನೆ, ಜಮೀನು ನೀಡಿಲ್ಲ. ಜನಾಶೀರ್ವಾದದಲ್ಲಿ ಕಾಂಗ್ರೆಸ್ ನಾಯಕರುಗಳು ಅನುಮತಿಯಿಲ್ಲದೆ ಫ್ಲೆಕ್ಸ್, ಬ್ಯಾನರ್‍ಗಳಲ್ಲಿ ಕಾಂಗ್ರೆಸ್ ನಾಯಕರುಗಳ ಫೋಟೋಗಳನ್ನು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.ಉಳುವವನೆ ಭೂಮಿಯ ಒಡೆಯ ಎನ್ನುವ ಕಾಯಿದೆಯಲ್ಲಿ ನೆಲಮಂಗಲದ ಬಳಿ ಎ.ನಾರಾಯಣಸ್ವಾಮಿ ಕುಟುಂಬ ಜಮೀನು ಪಡೆದುಕೊಂಡಿರುವುದು ಕಾಂಗ್ರೆಸ್‍ನಿಂದ. ಹೊರಗಡೆಯಿಂದ ಬಂದ ಅವರನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ಅಪ್ಪಿಕೊಂಡಿದ್ದಾರೆ. ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ, ನೇರ ರೈಲು ಮಾರ್ಗ, ಮೆಡಿಕಲ್ ಕಾಲೇಜನ್ನು ಆರಂಭಿಸಲಿ. ಅದು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಕೆಲಸ ಮಾಡುವುದು ಸರಿಯಲ್ಲ. ದಲಿತರ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಮೊದಲು ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರಲಿ ಎಂದು ಜಿ.ಎಸ್.ಮಂಜುನಾಥ್ ಸವಾಲು ಹಾಕಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿರವರ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಅಪ್ಪಣೆಯಿಲ್ಲದೆ ಕಾಂಗ್ರೆಸ್ ನಾಯಕರುಗಳ ಫೋಟೋಗಳನ್ನು ಬಳಸಿಕೊಂಡಿರುವುದು ಕಾರ್ಯಕರ್ತರಲ್ಲಿ ಗೊಂದಲವುಂಟಾಗಿದೆ. ಈ ಸಂಬಂಧ ಯಾರ್ಯಾರ ಫೋಟೋಗಳು ಬ್ಯಾನರ್‍ನಲ್ಲಿದ್ದವು ಅವರಿಗೆಲ್ಲಾ ಜಿಲ್ಲಾ ಕಾಂಗ್ರೆಸ್‍ನಿಂದ ನೋಟಿಸ್ ನೀಡಲಾಗುವುದೆಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ ಮಾತನಾಡಿ ಗೊಲ್ಲ ಜನಾಂಗದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಮಾತಿನಲ್ಲೆ ತೇಲಿಸಿ ಗೊಲ್ಲ ಜನಾಂಗಕ್ಕೆ ಮೂಗಿಗೆ ತುಪ್ಪ ಸವರುವ ಕೆಲಸ ಬಿಟ್ಟಿರೆ ಇನ್ನೇನು ಇಲ್ಲ. ಕಾದಂಬರಿ ರೀತಿಯಲ್ಲಿ ಭಾಷಣ ಮಾಡಿ ಹೋಗಿದ್ದಾರೆಯೇ ವಿನಃ ಅವರ ಮಾತಿನಲ್ಲಿ ಯಾವ ಸತ್ವವೂ ಇರಲಿಲ್ಲ ಎಂಟು ಟೀಕಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‍ಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿಕಾಂತ್, ನಾಗರಾಜ್ ಜಾನ್ಹವಿ, ಅಸಂಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಮಹಡಿ ಶಿವಮೂರ್ತಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಇಂಟೆಕ್ ಜಿಲ್ಲಾಧ್ಯಕ್ಷ ಅಶೋಕ್ ನಾಯ್ಡು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

You may have missed