Recent Posts

October 16, 2021

Chitradurga hoysala

Kannada news portal

ನಾನೇ ಭಗೀರಥ, ನಾನು ಬಂದ ಮೇಲೆ ನೀರು ಬಂತು ಬಿಜೆಪಿಗೆ ಮುಖಂಡರಿಗೆ ತಿವಿದ ಮಾಜಿ ಸಂಸದ ಚಂದ್ರಪ್ಪ

1 min read


ನಾನೇ ಭಗೀರಥ, ನಾನು ಬಂದ ಮೇಲೆ ನೀರು ಬಂತು ಬಿಜೆಪಿಗೆ ಮುಖಂಡರಿಗೆ ತಿವಿದ ಮಾಜಿ ಸಂಸದ ಚಂದ್ರಪ್ಪ

 

ಹಿರಿಯೂರು ●ಬಿಜೆಪಿ ಪಕ್ಷವು ಕೇಂದ್ರ ಮತ್ತು ರಾಜ್ಯದಲ್ಲಿ ಸುಳ್ಳಿನ ಆಡಳಿತ ನಡೆಸುತ್ತಿದ್ದು, 6 ಲಕ್ಷ ಕೋಟಿ ರೂ. ಆಸ್ತಿ ಮಾರಾಟ ಮಾಡುತ್ತಿದೆ. ಆರ್ಥಿಕವಾಗಿ ಕೇಂದ್ರ ಸರ್ಕಾರ ದಿವಾಳಿಯಾಗಿದೆ, ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೆ ಸರ್ಕಾರಿ ಸ್ವಾಮ್ಯದ ಆಸ್ತಿ ಮಾರುವ ಅಗತ್ಯ ಏನಿತ್ತು, ಸರ್ಕಾರ ನೀಡುತ್ತಿರುವ ಪ್ರತಿ ಮಾಹಿತಿಯೂ ಸುಳ್ಳಿನ ಲೆಕ್ಕಾಚಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕರೆಯಲಾಗಿದ್ದ ಕಾಂಗ್ರೆಸ್ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಿಜೆಪಿ ಪಕ್ಷದ ಒಟ್ಟು ಕಾರ್ಯಕ್ರಮಗಳನ್ನು ಲೆಕ್ಕ ಹಾಕಿದರೆ, ಇದರಿಂದ ದೇಶದಲ್ಲಿ ಶೇ. 50 ರಷ್ಟು ಸಹ ಅಭಿವೃದ್ಧಿಯಾಗಿಲ್ಲ. ಹಿಂದೆ ಕಾಂಗ್ರೆಸ್ ನವರು ಮಾಡಿದ ಕಾರ್ಯಗಳನ್ನೇ ನಾನೇ ಭಗೀರಥ, ನಾನು ಬಂದ ಮೇಲೆ ನೀರು ಬಂತು ಎನ್ನುತ್ತಾರೆ ಬಿಜೆಪಿ ಮುಖಂಡರು, ಆದರೆ ವಾಣಿವಿಲಾಸ ಸಾಗರಕ್ಕೆ ಬಹುಶಃ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ವಾಣಿವಿಲಾಸಕ್ಕೆ ನೀರು ಬಂತು ವ್ಯವಸ್ಥಿತವಾಗಿ ಬಂದಂತಹುದು, ಯಾವುದೇ ಅಧಿಕಾರಿಯಿಂದ ಬಂದಿದ್ದಲ್ಲಾ, ಒಂದು ವ್ಯವಸ್ಥೆಯ ಮುಖಾಂತರ ಬಂದಿರುವುದು ಎಂಬುದಾಗಿ ಹೇಳಿದರು.ಭದ್ರೆಯ ರಾಷ್ಟ್ರೀಯ ನೀರಾವರಿ ಯೋಜನೆಯನ್ನು 2017ರ ಸಿದ್ಧರಾಮಯ್ಯ ಸರ್ಕಾರದಲ್ಲಿ ಸುಮಾರು 12 ಸಾವಿರ ಕೋಟಿಗಿಂದ ಹೆಚ್ಚಿಗೆ ಯೋಜನೆಯನ್ನು ರಾಜ್ಯ ಸರ್ಕಾರದ ನಿಯಮದಂತೆ ರಾಷ್ಟ್ರೀಯ ಜಲಮಂಡಳಿಯಲ್ಲಿ ಈ ಯೋಜನೆ 2019ರಲ್ಲಿ ಸೇರ್ಪಡೆಯಾಗಿದೆ.ಈ ಯೋಜನೆಯನ್ನು ಕೇಂದ್ರ ಸಚಿವರಾಗಿ ನಾನು ಮೋದಿಯ ವರೊಂದಿಗೆ ಚರ್ಚಿಸಿ, ಈ ಯೋಜನೆಯ ಮಾಡಿರುವುದಾಗಿ ಹೇಳಿದ್ದಾರೆ. ಅದಕ್ಕೆ ವಿರೋಧ ಪಕ್ಷದವರಾಗಿ ನಮ್ಮ ಪ್ರಶ್ನೆ ಇμÉ್ಟೀ, ಮೋದಿಯವರ ಜೊತೆ ಯಾವಾಗ ಚರ್ಚೆ ನಡೆಸಿದ್ದರು ಮತ್ತು ದೂರವಾಣಿ ಮುಖಾಂತರ ಚರ್ಚೆ ಮಾಡಿದ್ದರ ಲಿಖಿತ ದಾಖಲೆ ಇದೆಯಾ ಎನ್ನುವಂತಹದನ್ನು ಸ್ಪಷ್ಟನೆ ನೀಡಬೇಕಾಗುತ್ತದೆ ಈ ಯೋಜನೆಯು ಜಲನೀತಿ ಮಂಡಳಿ ಮುಖಾಂತರ ಆಗಿದೆ, ಯಾರಿಂದಲೂ ಆಗಿರುವಂತಹುದಲ್ಲ, ನೀವು ಸುಳ್ಳು ಹೇಳುತ್ತಿದ್ದೀರಿ, ಇದಕ್ಕೆ ಗೋವಿಂದಪ್ಪರವರ ಅಪಾರ ಅನುಭವ ಕಾರಣ, ನಿಮಗೆ ಈ ಬಗ್ಗೆ ಏನು ಗೊತ್ತಿಲ್ಲ, ಮೊನ್ನೆ ಜನಾಶೀರ್ವಾದ ಪ್ರಚಾರ ಮಾಡಿದ್ದೀರಿ, ಜನಾಶೀರ್ವಾದ ಮಾಡಿರುವುದರಿಂದಲೇ ನೀವು ಕೇಂದ್ರ ಸಚಿವರಾಗಿದ್ದೀರಿ, ಆದರೆ ನೀವು ಮಂತ್ರಿಯಾಗಿರುವುದನ್ನು ತೋರಿಸಿಕೊಳ್ಳುವುದಕ್ಕೆ ಪ್ರಚಾರಕ್ಕಾಗಿ ನೀವು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿಕೊಂಡಿದ್ದೀರಿ ಅμÉ್ಟ ಎಂಬುದಾಗಿ ಆರೋಪಿಸಿದರು. ಈ ಸಂದರ್ಭದಲ್ಲಿ ಮಾಚಿ ಸಚಿವರಾದ ಡಿ.ಸುಧಾಕರ್, ರಾಜ್ಯ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed