March 29, 2024

Chitradurga hoysala

Kannada news portal

ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಶ್ರೀಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತ

1 min read

ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಕೋವಿಡ್-19ರ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅವರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.

 

ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಶ್ರೀಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತ

____________________________________

ಚಿತ್ರದುರ್ಗ,ಆಗಸ್ಟ್29:

ಸಮಾಜ, ದೇಶ ಹಾಗೂ ವಿಶ್ವಕ್ಕೆ ದಾರಿತೋರಿಸುವ ನಿಟ್ಟಿನಲ್ಲಿ ಶ್ರೀಕೃಷ್ಣನ ಕೊಡುಗೆ ಅಪಾರ. ಶ್ರೀಕೃಷ್ಣನು ಭಗದ್ಗೀತೆಯ ಮೂಲಕ ನೀಡಿದ ಸಂದೇಶಗಳು ಮಾನವಕುಲಕ್ಕೆ ಇಂದಿಗೂ ಪ್ರಸ್ತುತವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಶ್ರೀಕೃಷ್ಣ ಯಾದವ ಜನಾಂಗದಲ್ಲಿ ಹುಟ್ಟಿ, ಆ ಸಂದರ್ಭದಲ್ಲಿನ ಅಧರ್ಮ, ಅಸತ್ಯವನ್ನು ತೊಲಗಿಸುವ ನಿಟ್ಟಿನಲ್ಲಿ ನಾನು ಯಾವ ಸಂದರ್ಭದಲ್ಲಿ ಅಧರ್ಮ ತಲೆಎತ್ತಿದಾಗ ಆ ಸಂದರ್ಭದಲ್ಲಿ ಪದೇ ಪದೇ ಜನ್ಮವೆತ್ತಿ ಬಂದು ಧರ್ಮದ ರಕ್ಷಣೆ ಮಾಡುತ್ತೇನೆ ಎಂದು ಹೇಳಿ, ತಂದೆ, ತಾಯಿ, ಜನಾಂಗ, ಸಮಾಜ, ದೇಶ ಹಾಗೂ ವಿಶ್ವಕ್ಕೆ ದಾರಿತೋರಿಸುವ ನಿಟ್ಟಿನಲ್ಲಿ ಶ್ರೀಕೃಷ್ಣ ಕೊಡುಗೆ ನೀಡಿದ್ದಾರೆ ಎಂದರು.
ಶ್ರೀಕೃಷ್ಣ ಆಗಿನ ಸಂದರ್ಭದಲ್ಲಿ ಅಧರ್ಮ ಎನ್ನುವುದು ಹೆಚ್ಚು ತಲೆಎತ್ತಿ ನಿಂತಿತ್ತು. ಸಮಾಜಿಕವಾಗಿ, ಆರ್ಥಿಕವಾಗಿ, ಆಡಳಿತಾತ್ಮಕ ವಿಚಾರವಾಗಿಯೂ ದುರಾಡಳಿತಕ್ಕೆ ಒಳಪಟ್ಟಿದ್ದರು. ಆ ಸಂದರ್ಭದಲ್ಲಿ ಅವರನ್ನು ಸಂಕೋಲೆಯಿಂದ ಬಿಡುಗಡೆಗೊಳಿಸಲು ಕೃಷ್ಣನ ಅವತಾರವಾಗಿ ತಾಳಿ ಅಧರ್ಮ ಹೋಗಲಾಡಿಸಿ, ಧರ್ಮ ಸ್ಥಾಪನೆ ಮಾಡಿ ಭಗವದ್ಗೀತೆಯ ಮೂಲಕ ಸಾಕಷ್ಟು ಸತ್ಯದ, ಧರ್ಮದ ಸಂದೇಶಗಳನ್ನು ನೀಡಿದ್ದಾರೆ. ಅವುಗಳನ್ನು ಈಗಲೂ ಪ್ರಸ್ತುತವಾಗಿ ಅನ್ವಯ ಮಾಡಿಕೊಂಡರೆ ಜೀವನ ಅರ್ಥಗರ್ಭೀತವಾಗಿರುತ್ತದೆ ಎಂದು ಅಭಿಪ್ರಾಯಪಟ್ಚರು.
ಶ್ರೀಕೃಷ್ಣನ ಭಗವದ್ಗೀತೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿಯೂ ಆರಾಧಿಸುತ್ತಾರೆ. ಭಗವದ್ಗೀತೆಯನ್ನು ಆರಾಧಿಸುವವರು, ಅನುಕರಿಸುವವರು ಸಾಕಷ್ಟು ಮಂದಿ ಪಾಶ್ವಿಮಾತ್ಯ ರಾಷ್ಟ್ರಗಳಲ್ಲಿ ಇದ್ದಾರೆ. ಭಗವದ್ಗೀತೆಯಲ್ಲಿ ಸತ್ಯದ ಮಾರ್ಗ, ಜೀವನದ ವಿಧಾನವನ್ನು ತಿಳಿಸುವ ಸಾಕಷ್ಟು ಅಂಶಗಳನ್ನು ಕಾಣಬಹುದು ಎಂದು ಹೇಳಿದರು.
ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವುಯಾದವ್ ಮಾತನಾಡಿ, ಶ್ರೀಕೃಷ್ಣ ಜನಾಂಗಕ್ಕೆ ಮಾತ್ರ ಸಿಮೀತವಲ್ಲ. ಶ್ರೀಕೃಷ್ಣ ಜಗತ್ ರಕ್ಷಕ ಹಾಗೂ ವಿಶ್ವಕ್ಕೆ ಗುರುವಾಗಿದ್ದಾರೆ. ವಿಶ್ವವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗವಂತಹ ಪ್ರಯತ್ನ ಮಾಡಿದವರು. ಸಮಾಜದ ತಪ್ಪುಗಳನ್ನು ತಿದ್ದು, ಸತ್ಯದ ಪಥದಲ್ಲಿ ಸಾಗಬೇಕು ಎಂದು ಸಾರಿದವ ಶ್ರೀಕೃಷ್ಣ ಎಂದು ಹೇಳಿದರು.
ಸಾಧ್ಯವಾದಷ್ಟು ನಾವು ಶ್ರೀಕೃಷ್ಣನ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಇವುಗಳು ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ಹತ್ತಿರವಾಗಿದ್ದು, ಶ್ರೀಕೃಷ್ಣ ಹಾಕಿಕೊಟ್ಟ ಮಾರ್ಗದರ್ಶನ, ರೀತಿನೀತಿಗಳನ್ನು ನಮ್ಮ ನಡೆನುಡಿಗಳಲ್ಲಿ ಅಳವಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಯಾದವ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಆನಂದ್, ಯಾದವ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಪ್ರಕಾಶ್, ವೀರಭದ್ರಪ್ಪ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಲಕ್ಷ್ಮಣ್, ಪತ್ರಕರ್ತರಾದ ಗೌನಹಳ್ಳಿ ಗೋವಿಂದಪ್ಪ ಇದ್ದರು.

About The Author

Leave a Reply

Your email address will not be published. Required fields are marked *