Recent Posts

October 17, 2021

Chitradurga hoysala

Kannada news portal

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಫಿಟ್ ಇಂಡಿಯಾ ಪ್ರೀಡಂ ರನ್ ಕಾರ್ಯಕ್ರಮಕ್ಕೆ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ ಚಾಲನೆ

1 min read

ಆಜಾದಿ-ಕಾ ಅಮೃತ್ ಮಹೋತ್ಸವ್ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಫಿಟ್ ಇಂಡಿಯಾ ಪ್ರೀಡಂ ರನ್ ಕಾರ್ಯಕ್ರಮಕ್ಕೆ ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ ಚಾಲನೆ
ಯುವ ಜನಾಂಗ ದೇಶಾಭಿಮಾನ, ರಾಷ್ಟ್ರೀಯತೆ ಬೆಳೆಸಿಕೊಳ್ಳಬೇಕು

_____________________________________
ಚಿತ್ರದುರ್ಗ,ಆಗಸ್ಟ್29:
ಯುವ ಜನಾಂಗ ದೇಶಾಭಿಮಾನ, ರಾಷ್ಟ್ರೀಯತೆ ಬೆಳೆಸಿಕೊಳ್ಳವುದರ ಮೂಲಕ ದೇಶದ ಸಂಪನ್ಮೂಲವಾಗಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕ ಕೇಂದ್ರ, ಹಾಗೂ ಜಿಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಜಾದಿ-ಕಾ ಅಮೃತ್ ಮಹೋತ್ಸವ್ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಫಿಟ್ ಇಂಡಿಯಾ ಪ್ರೀಡಂ ರನ್ ಕಾರ್ಯಕ್ರಮಕ್ಕೆ ನಗರದ ಒನಕೆ ಓಬವ್ವ ವೃತ್ತ ಹಾಗೂ ಐತಿಹಾಸಿಕ ಕೋಟೆ ಮುಂಭಾಗದಲ್ಲಿ ಭಾನುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು 2021ರ ಮಾರ್ಚ್12 ರಿಂದ 2023ರ ಆಗಸ್ಟ್15ರ ವರೆಗೆ ಆಚರಿಸಲು ತೀರ್ಮಾನಿಸಲಾಗಿದ್ದು, ಯುವ ಜನರಲ್ಲಿ ದೇಶ ಪ್ರೇಮ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಯುವ ಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿಬಾಯಿ ಮಾತನಾಡಿ, ಮೇಜರ್ ಧ್ಯಾನ್‍ಚಂದ್ ನೆನಪಿಗಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇದರ ಜೊತೆಗೆ ಒಲಿಂಪಿಕ್ಸ್‍ನಲ್ಲಿ ವಿಜೇತರಾದವರನ್ನು ಸ್ಮರಣೆ ಮಾಡುತ್ತಾ ದೇಶಕ್ಕೆ ಕೋಡುಗೆ ನೀಡಿದ ಸೇವೆಯನ್ನು ಸ್ಮರಿಸಲಾಗುತ್ತಿದೆ ಎಂದು ಹೇಳಿದರು.
ಫೀಟ್ ಇಂಡಿಯಾ ಪ್ರೀಡಂ ರನ್ ಕಾರ್ಯಕ್ರಮದ ಅಂಗವಾಗಿ ಮೊದಲನೇ ಸುತ್ತ ಒನಕೆ ಓಬವ್ವ ವೃತ್ತದಿಂದ ಪ್ರೀಡಂ ರನ್ ಜಿಲ್ಲಾ ಕ್ರೀಡಾಂಗಣದವರೆಗೂ ಹಾಗೂ ಎರಡನೇ ಸುತ್ತು ಐತಿಹಾಸಿಕ ಕೋಟೆ ಮುಂಭಾಗದಿಂದ ಆರಂಭವಾದ ಪ್ರೀಡಂ ರನ್ ಜಿಲ್ಲಾ ಕ್ರೀಡಾಂಗದವರೆಗೂ ಸಾಗಿ ನಂತರ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎನ್.ಸುಹಾಸ್, ಕ್ರೀಡಾ ತರಬೇತುದಾರ ಮಹೀಬುಲ್ಲಾ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಯಣ್ಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಜರ್‍ಉಲ್ಲಾ, ಅಂತರಾಷ್ಟ್ರೀಯ ಕ್ರೀಡಾಪಟು ನಾಗಭೂಷಣ್, ರಾಷ್ಟ್ರೀಯ ಕ್ರೀಡಾಪಟು ರಮೇಶ್, ಟೆಕ್ವೆಂಡೋ ಕ್ರೀಡಾಪಟುಗಳಾದ ಅನಿತಾ, ಸುನಿತಾ, ಕುಸ್ತಿಪಟು ಸದ್ದಮ್, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಮಳಲಿ ಶ್ರೀನಿವಾಸ್, ವೆಂಕಟೇಶ್, ಪಿಡಿಒ ಸುಷ್ಮಾರಾಣಿ, ರಾಯಲ್ ಸ್ಫೋಟ್ಸ್ ಕ್ಲಬ್, ಚಾಲೆಂಜರ್ಸ್, ಪುಟ್‍ಬಾಲ್ ಶಾರ್ಪ್ ಕ್ಲಬ್, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You may have missed