March 28, 2024

Chitradurga hoysala

Kannada news portal

ಚಿತ್ರದುರ್ಗ ನಗರ ಸುಗಮ ಸಂಚಾರಕ್ಕೆ ಪಾರ್ಕಿಂಗ್ ವ್ಯವಸ್ಥೆ : ಜಿಲ್ಲಾ ದಂಡಾಧಿಕಾರಿಗಳಾದ ಕವಿತಾ ಎಸ್. ಮನ್ನಿಕೇರಿ

1 min read

ಚಿತ್ರದುರ್ಗ ನಗರ ಸುಗಮ ಸಂಚಾರಕ್ಕೆ ಪಾರ್ಕಿಂಗ್ ವ್ಯವಸ್ಥೆ
____________________________

ಚಿತ್ರದುರ್ಗ,ಆಗಸ್ಟ್30:

ಚಿತ್ರದುರ್ಗ ನಗರದಲ್ಲಿ ಸಂಚಾರಿ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದರಿಂದ ಸಾರ್ವಜನಿಕ ಸಂಚಾರ ಕ್ರಮಗೊಳಿಸುವ ದೃಷ್ಟಿಯಿಂದ ಸುಗಮ ರಸ್ತೆ ಸಂಚಾರಕ್ಕಾಗಿ ನಗರದಲ್ಲಿ ಸ್ಥಳಗಳನ್ನು ವಾಹನ ನಿಲುಗಡೆ (ಪಾರ್ಕಿಂಗ್) ಸ್ಥಳಗಳನ್ನು ಗುರುತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಠಿಯಿಂದ ಸುಗಮ ರಸ್ತೆ ಸಂಚಾರಕ್ಕೆ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿದ್ದು, ಪಾರ್ಕಿಂಗ್ ಸ್ಥಳಗಳಲ್ಲಿಯೇ ಸಾರ್ವಜನಿಕರು ವಾಹನಗಳನ್ನು ನಿಲುಗಡೆ (ಪಾರ್ಕಿಂಗ್) ಮಾಡಬೇಕು.

ಚಿತ್ರದುರ್ಗ ನಗರದ ವಾಹನ ನಿಲುಗಡೆ (ಪಾರ್ಕಿಂಗ್) ಸ್ಥಳಗಳ ವಿವರ: ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ: ಡಿಸಿ ಸರ್ಕಲ್-ಕೋಟೆ ರಸ್ತೆಯಲ್ಲಿ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಲಯದ ಕಟ್ಟಡದಿಂದ ಕೋರ್ಟ್ ಮುಂಭಾಗದಲ್ಲಿನ ತುರುವನೂರು ರಸ್ತೆ ಕ್ರಾಸ್‍ವರೆಗೆ (ಡಿ.ಎ.ಆರ್ ಕವಾಯತು ಮೈದಾನ ಕಡೆಗೆ) ದ್ವಿ-ಚಕ್ರ ವಾಹನ ನಿಲುಗಡೆ ಮಾಡಬಹುದು.

ನಾಲ್ಕು ಚಕ್ರದ ವಾಹನಗಳ ನಿಲುಗಡೆ ಸ್ಥಳ: ರೋಟರಿ ಶಾಲೆ ರಸ್ತೆಯಲ್ಲಿ ರೋಟರಿ ಶಾಲೆ ಮುಂಭಾಗದ ಪಾರ್ಕ್ ಕಡೆಯಿಂದ ಜೆಸಿಆರ್ ಮುಖ್ಯ ರಸ್ತೆವರೆಗೆ (ಭಗತ್ ಸಿಂಗ್ ಉದ್ಯಾನವನದ ಕಡೆಗೆ) ನಾಲ್ಕು ಚಕ್ರದ ವಾಹನ ನಿಲುಗಡೆ ಮಾಡಬಹುದು.

ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ: ತಾಲ್ಲೂಕು ಕಚೇರಿ ರಸ್ತೆಯಲ್ಲಿ ವಾಸವಿ ಸರ್ಕಲ್‍ನಿಂದ ತಾಲ್ಲೂಕು ಕಚೇರಿ ಮುಂಭಾಗದ ಇಂದಿರಾ ಕ್ಯಾಂಟೀನ್‍ವರಗೆ (ಐ.ಬಿ. ಕಡೆಗೆ) ದ್ವಿ-ಚಕ್ರ ವಾಹನ ನಿಲುಗಡೆ ಮಾಡಬಹುದು.
ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ: ಬಸವೇಶ್ವರ ಟಾಕೀಸ್ ರಸ್ತೆಯಲ್ಲಿ ಥಿಯೋಸಫಿಕಲ್ ಸೊಸೈಟಿ ಕಟ್ಟಡದ ಮುಂಭಾಗದ ರಸ್ತೆಯಿಂದ ಪ್ರಗತಿ ಮೆಡಿಕಲ್ ಸ್ಟೋರ್ (ಎಸ್‍ಬಿಎಂ ಬ್ಯಾಂಕ್ ಕಡೆಗೆ ಹೋಗುವ ರಸ್ತೆ ಕ್ರಾಸ್) ವರೆಗೂ ದ್ವಿ-ಚಕ್ರ ವಾಹನ ನಿಲುಗಡೆ ಮಾಡಬಹುದು.

ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ: ಸಂತೆ ಹೊಂಡ ರಸ್ತೆಯಲ್ಲಿ ಐಯ್ಯಾಂಗರ್ ಬೇಕರಿಯಿಂದ (ಎಸ್‍ಬಿಎಂ ಬ್ಯಾಂಕ್ ಕಡೆಗೆ ಹೋಗುವ ಅಮೋಘ ಹೋಟಲ್ ರಸ್ತೆಯಿಂದ) ಸಂಗೀತ ಮೊಬೈಲ್ ಅಂಗಡಿ (ಮಟನ್ ಮಾರ್ಕೇಟ್ ಕ್ರಾಸ್) ವರೆಗೂ ದ್ವಿ-ಚಕ್ರ ವಾಹನ ನಿಲುಗಡೆ ಮಾಡಬಹುದು.

ಸುಗಮ ಸಂಚಾರಕ್ಕಾಗಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿದ್ದು, ಪಾರ್ಕಿಂಗ್ ಸ್ಥಳಗಳಲ್ಲಿಯೇ ಸಾರ್ವಜನಿಕರು ವಾಹನ ನಿಲುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ

About The Author

Leave a Reply

Your email address will not be published. Required fields are marked *