Recent Posts

October 17, 2021

Chitradurga hoysala

Kannada news portal

ಕಾಂಗ್ರೇಸ್‍ನಲ್ಲಿ ನಿಷ್ಠಾವಂತರಿಗೆ ಅವಕಾಶ ಕೊಡಿ ಕೆಪಿಸಿಸಿ ಕಾರ್ಯದರ್ಶಿ ಡಾ.ಹನುಮಲಿ ಷಣ್ಮುಖಪ್ಪ

1 min read

ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕೆಳಗೋಟೆ, ಸಿ.ಕೆ.ಪುರದಲ್ಲಿ ನಗರ ವಾರ್ಡ್ ಕಮಿಟಿ ರಚನೆಯನ್ನು ಕೆಪಿಸಿಸಿ ಕಾರ್ಯದರ್ಶಿ ಡಾ. ಹನುಮಲಿ ಷಣ್ಮುಖಪ್ಪ ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗ:  ಅ ೩೧                                               ಕಾಂಗ್ರೇಸ್ ನಲ್ಲಿ ಎಲ್ಲೋ ಕುಳಿತು ಕಮಿಟಿ ರಚಿಸುವುದರಿಂದ ನಿಷ್ಟಾವಂತರನ್ನು ಗುರುತಿಸಲು ಸಾಧ್ಯವಿಲ್ಲ ಬದಲಾಗಿ ವಾರ್ಡ್ ಮತ್ತು ಪಂಚಾಯಿತಿ ಮಟ್ಟದಲ್ಲಿ ಜನರ ಬಳಿ ಹೋಗಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಡಾ.ಹನುಮಲಿ ಷಣ್ಮುಖಪ್ಪ ಹೇಳಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕೆಳಗೋಟೆ, ಸಿ.ಕೆ.ಪುರದ 31 ನೇ ವಾರ್ಡ್‍ನಲ್ಲಿ ಮಂಗಳವಾರ ನಗರ ವಾರ್ಡ್ ಕಮಿಟಿ ರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂದಿನ ಎಲ್ಲಾ ಚುನಾವಣೆಯಲ್ಲಿಯೂ ಪಕ್ಷವನ್ನು ಗೆಲ್ಲಿಸಿಕೊಳ್ಳುವುದು ನಗರ ವಾರ್ಡ್ ಕಮಿಟಿ ರಚನೆಯ ಉದ್ದೇಶ ಎಂದರು.
ಎ.ಐ.ಸಿ.ಸಿ.ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೂಚನೆಯಂತೆ ವಾರ್ಡ್ ಕಮಿಟಿ ಹಾಗೂ ಪಂಚಾಯಿತಿ ಕಮಿಟಿಗಳನ್ನು ರಚಿಸಲಾಗುವುದು. ಇದರಿಂದ ಕಾರ್ಯಕರ್ತರ ಪಡೆ ಸಜ್ಜುಗೊಳಿಸಿದಂತಾಗುತ್ತದೆ. ಒಂದು ವಾರ್ಡ್‍ನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಐವತ್ತು ಮಂದಿ ಪದಾಧಿಕಾರಿಗಳಿರುತ್ತಾರೆ. ಇದರಿಂದ ತಳಮಟ್ಟದಲ್ಲಿ ಪಕ್ಷಕ್ಕೆ ಬಲ ತುಂಬಿದಂತಾಗುತ್ತದೆ ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷಕ್ಕೆ 139 ವರ್ಷಗಳ ಇತಿಹಾಸವಿದೆ. ಕೋಮುವಾದಿ ಬಿಜೆಪಿ ಯಲ್ಲಿ ಯಾರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿಲ್ಲ. ನಗರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕಾಗಿರುವುದರಿಂದ ಈಗಿನಿಂದಲೆ ಸಂಘಟಿತರಾಗಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ ಮಾತನಾಡಿದರು.
ಯುವ ಮುಖಂಡರಾದ ರಘುನಾಯ್ಕ, ವಿಷ್ಣುಕುಮಾರ್, ಪರಿಶಿಷ್ಟ ವರ್ಗ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಮಹಡಿ ಶಿವಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಡಾ.ರಹಮತ್‍ವುಲ್ಲಾ, ಪೊಲೀಸ್ ಮಲ್ಲಿ, ನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ನ್ಯಾಯವಾದಿ ಸುದರ್ಶನ್, ಎನ್.ಡಿ.ಕುಮಾರ್, ಯುವ ಮುಖಂಡರಾದ ರಘುನಾಯ್ಕ, ವಿಷ್ಣುಕುಮಾರ್, ಸಿ.ಎನ್.ಕುಮಾರ್ ಮಾಜಿ ನಗರ ಸಭಾ ಸದಸ್ಯರು, ಮಂಜು ಪಾಪಣ್ಣ ಇತರರಿದ್ದರು.

 

Leave a Reply

Your email address will not be published. Required fields are marked *

You may have missed