April 19, 2024

Chitradurga hoysala

Kannada news portal

ಏಕತಾ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ಜಗದ್ಗುರು ಛಲವಾದಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಬಸವನಾಗಿದೇವ ಮಹಾಸ್ವಾಮೀಜಿ

1 min read


ಏಕತಾ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಕೋಟೆನಾಡಿನಲ್ಲಿ ಗಣಪನ ಸಂಭ್ರಮಾರಂಭ

ಚಿತ್ರದುರ್ಗ: ಹಿಂದೂಪರ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲೆಯ ಎಲ್ಲಾ ಹಿಂದೂಪರ ಸಂಘಟನೆ ನೇತೃತ್ವದಲ್ಲಿ ಶನಿವಾರ ಏಕತಾ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಕೋಟೆನಾಡು ಚಿತ್ರದುರ್ಗದಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರಿಂದ ಬೃಹತ್ ಭಗವಾಧ್ವಜ ಪ್ರತಿಷ್ಠಾಪಿಸುವ ಮೂಲಕ ವಿಧ್ಯುಕ್ತಚಾಲನೆ ನೀಡಲಾಯಿತು.

ಜಗದ್ಗುರು ಛಲವಾದಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಬಸವನಾಗಿದೇವ ಮಹಾಸ್ವಾಮೀಜಿ, ಲಂಬಾಣಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹಾಗೂ ಗುಜರಾತ್‍ನ ಅವಧೂತ ರಾಜಾನಾಥ್ ನಾಗಾಸಾಧ್ ಗುರೂಜಿ, ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಿ.ಸುರೇಶ್ ಬಾಬು, ಅವರು ಭಗವಾಧ್ವಜ ಪೂಜೆ ಸಲ್ಲಿಸುವ ಮೂಲಕ ಪೆಂಡಾಲ್ ಹಾಕುವ ಕಾರ್ಯವನ್ನು ಉದ್ಘಾಟಿಸಿದರು.
ಚಿತ್ರದುರ್ಗದ ಸುಂದರವಾದ ಜೋಗಿಮಟ್ಟಿ ಗಿರಿಧಾಮಕ್ಕೆ ತೆರಳುವ ಜೋಗಿಮಟ್ಟಿ 4ನೇ ಕ್ರಾಸ್‍ನ ಬೃಹತ್ ಮೈದಾನದಲ್ಲಿ ಏಕತಾ ಹಿಂದೂ ಮಹಾಗಣಪತಿಯ ಸಂಭ್ರಮ ಮನೆಮಾಡಿದ್ದು ಏಕತಾ ಹಿಂದೂ ಮಹಾಗಣಪತಿಯ ಎಲ್ಲಾ ಕಾರ್ಯಗಳನ್ನು ಸಕಲ ಸಂಪ್ರದಾಯಗಳೊಂದಿಗೆ ನೆರವೇರಿಸಲಾಗುವುದು ಎಂದು ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ಕುಮಾರ್, ಮತ್ತು ಖಜಾಂಚಿ ಸಂತೋಷ್ ತಿಳಿಸಿದರು.
ಜಗದ್ಗುರು ಛಲವಾದಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಬಸವನಾಗಿದೇವ ಮಹಾಸ್ವಾಮೀಜಿ ಮಾತನಾಡಿ, ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಹಿಂದೂಪರ ಸಂಘಟನೆಗಳ ಒಕ್ಕೂಟದ ಮೂಲಕ ಎಲ್ಲ ಸಂಘಟನೆಗಳು ಸೇರಿ ಏಕತಾ ಹಿಂದೂ ಗಣಪತಿಯನ್ನು ಸಾರ್ವಜನಿಕವಾಗಿ ಸ್ಥಾಪನೆ ಮಾಡಿ ಹಿಂದೂಗಳನ್ನು ಒಗ್ಗೂಡಿಸುವ ಮತ್ತು ಜಾಗೃತಿಯನ್ನುಂಟು ಮಾಡಲು ನಿಂತಿರುವುದು ಶ್ಲಾಘನೀಯ ಎಂದರು.ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ನೇತೃತ್ವವಹಿಸಿರುವ ಸಮಿತಿಯ ಗೌರವಾಧ್ಯಕ್ಷರಾದ ಡಿ.ಸುರೇಶ್ ಬಾಬು (ಸೈಟ್‍ಬಾಬಣ್ಣ) ಮಾತನಾಡಿ, ಅಂತಾರಾಷ್ಟ್ರೀಯ ರಾಜ್ಯದ ಎಲ್ಲಾ ಹಿಂದೂ ಸಂಘಟನೆ ಮುಖಂಡರನ್ನೆಲ್ಲಾ ಏಕತೆಗಾಗಿ ಒಂದು ಮಾಡುವ ಈ ಕಾರ್ಯ ಯಶಸ್ವಿಯಾಗಲು ಏಕತಾ ಹಿಂದೂ ಮಹಾಗಣಪತಿ ಸಾಕ್ಷಿಯಾಗಲಿದೆ. ಸಂವಿಧಾನದ ಆಶಯಗಳನ್ನು ನಾವು ತೋರಿಸುವ ಕೆಲಸವಾಗಬೇಕು. ಎಲ್ಲರನ್ನು ಒಂದೆಡೆ ಸೇರಿಸಿ ಏಕತೆಗಾಗಿ ಮಾಡುವ ಕಾರ್ಯಕ್ಕೆ ಎಲ್ಲರೂ ಸಾಗರದಂತೆ ಬರಲಿದ್ದಾರೆ ಎಂದರು.
ಗುಜರಾತ್‍ನ ಅವಧೂತ ರಾಜಾನಾಥ್ ನಾಗಾಸಾಧ್ ಗುರೂಜಿ ಮಾತನಾಡಿ ಹಿಂದೂಸ್ಥಾನದಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಸಂಘಟಿತರಾಗಲು ಇದೊಂದು ಪ್ರಮುಖ ಘಟ್ಟ. ನಾಡಿನ ಎಲ್ಲಾ ಸಂಘಟನೆಗಳು ಚಿತ್ರದುರ್ಗದಲ್ಲಿ ಒಂದಾಗಲಿ ಅಲ್ಲದೆ ದೇಶದ ಎಲ್ಲಾ ರಾಜ್ಯದಕ್ಕೂ ಇದು ಹಬ್ಬಲಿ ನಿಮ್ಮ ಕಾರ್ಯಕ್ಕೆ ಸಾಧು ಸಂತರ ದೇವರ ಆರ್ಶೀವಾದ ಸಿಗಲಿದೆ ಎಂದರು.
ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಉಪಾಧ್ಯಕ್ಷರಾದ ಎಸ್.ಟಿ. ನವೀನ್ ಕುಮಾರ್ ಮಾತನಾಡಿ, ಚಿತ್ರದುರ್ಗ ಎಂದರೆ ಅದೊಂದು ಶಕ್ತಿಯ ಸ್ಥಳ ಇಲ್ಲಿಂದಲೇ ಎಲ್ಲವೂ ನಡೆಯುತ್ತಿದ್ದು, ಜೋಗಿಮಟ್ಟಿ ಸ್ಥಳ ಅಂತಹ ಪ್ರಮುಖವಾದ ಕೇಂದ್ರವಾಗಿದೆ. ಈ ಮೂಲಕ ರಾಜ್ಯದಲ್ಲಿ ಹಾಗು ದೇಶದಲ್ಲಿ ಏಕತೆಯನ್ನು ಸೃಷ್ಠಿಸುವ ಏಕತಾ ಹಿಂದೂ ಮಹಾಗಣಪತಿ ನಮ್ಮದಾಗಲಿ ಎಂದರು
ಲಂಬಾಣಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಖಜಾಂಚಿ ಸಂತೋಷ್ ಕುಮಾರ್, ಮಾಲತೇಶ್ ಅರಸ್ ಮಾತನಾಡಿದರು.
ಈ ಸಂದರ್ಭದಲ್ಲಿ ಏಕತಾ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿ ಉಪಾಧ್ಯಕ್ಷರಾದ ಆರ್.ಸಂತೋಷ್, ಕಾರ್ಯದರ್ಶಿಗಳಾದ ಮಂಜುನಾಥ್, ನೇಮಿಚಂದ್ರ, ಗರಡಿತಿಪ್ಪೇಶ್ ಮತ್ತು ಸಮಿತಿಯ ಕಾರ್ಯಕರ್ತರು, ಅನೇಕ ಮುಖಂಡರು ಹಾಜರಿದ್ದರು.
ಪೋಟೋ
ಚಿತ್ರದುರ್ಗ ನಗರದಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲೆಯ ಎಲ್ಲಾ ಹಿಂದೂಪರ ಸಂಘಟನೆ ನೇತೃತ್ವದಲ್ಲಿ ಶನಿವಾರ ಏಕತಾ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ವಿವಿಧ ಮಠಾಧೀಶರು ಹಾಗೂ ಗಣ್ಯರಿಂದ ಬೃಹತ್ ಭಗವಾಧ್ವಜ ಪ್ರತಿಷ್ಠಾಪಿಸುವ ಮೂಲಕ ವಿಧ್ಯುಕ್ತಚಾಲನೆ ನೀಡಲಾಯಿತು.

About The Author

Leave a Reply

Your email address will not be published. Required fields are marked *