March 28, 2024

Chitradurga hoysala

Kannada news portal

ಡಾ.ಎಸ್.ರಾಧಾಕೃಷ್ಣನ್ ಜನ್ಮ ದಿನದ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ ; ಯಾಕೆ?

2 min read

ಡಾ.ಎಸ್.ರಾಧಾಕೃಷ್ಣನ್ ಜನ್ಮ ದಿನದ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ ; ಯಾಕೆ? _____________________________

“ಡಾ.ಎಸ್.ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿಯಾಗಿದ್ದವರು. ಅವರು ದೇಶದ ಪ್ರಥಮ ಪ್ರಜೆ ಎಂದು ಗುರುತಿಸಿಕೊಳ್ಳುವುದಕ್ಕಿಂತಲೂ ಮಿಗಿಲಾಗಿ ತಾನೊಬ್ಬ ಶಿಕ್ಷಕ ಎಂದು ಗುರುತಿಸಿಕೊಳ್ಳುವುದರ ಮೂಲಕ ಶಿಕ್ಷಕರ ವೃತ್ತಿಗೂ ಅಧ್ಯಾಪಕರ ವರ್ಗಕ್ಕೂ ಘನತೆ ತಂದುಕೊಟ್ಟವರು. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು, ರಾಧಾಕೃಷ್ಣನ್ ಅವರ ಜನ್ಮ ದಿನದ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ನಡೆಸುತ್ತಿರುವುದು ಹೆಮ್ಮೆಯ ಮತ್ತು ಅಭಿಮಾನದ ಸಂಗತಿ ” ಎಂದು ರಾಧಾಕೃಷ್ಣನ್ ಅವರ ಹೆಸರನ್ನು ಇವತ್ತು ದೇಶದೆಲ್ಲೆಡೆ ಭಜಿಸಲಾಗುತ್ತಿದೆ.
ಶಿಕ್ಷಕರ ವೃತ್ತಿ ಗೌರವದ ರೂಪಕವಾಗಿ ಬಾಳಿದ ರಾಧಾಕೃಷ್ಣನ್ ಅವರ ಜನ್ಮ ದಿನ ಆಚರಿಸುವ ಮೂಲಕ ಇಡೀ ಅಧ್ಯಾಪಕ ವರ್ಗ ತನ್ನನ್ನು ತಾನು ಗೌರವಿಸಿಕೊಳ್ಳುತ್ತಿದೆ ಎಂದು ಇಲ್ಲಿಯವರೆಗೂ ನಾವು ಕುರುಡಾಗಿ ಭಾವಿಸಿದ್ದೇವೆ. ರಾಧಾಕೃಷ್ಣನ್ ಅವರು ಇಡೀ ಶಿಕ್ಷಕ ಕುಲ ಹೆಮ್ಮೆಪಡುವಂಥ ಮತ್ತು ಶಿಕ್ಷಕರಿಗೆ ಆದರ್ಶಪ್ರಾಯವಾಗಬಲ್ಲ ಘನತೆಯ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದವರಲ್ಲ. ಗುರುವಿನ ಪರಮ ಪದವಿಯೇ ಶ್ರೇಷ್ಠ ಎನ್ನಿಸಿರುವಾಗ ನಮ್ಮ ಗುರುವರ್ಗದವರು ರಾಧಾಕೃಷ್ಣನ್ ಎಂಬ ವ್ಯಕ್ತಿಯೊಬ್ಬನನ್ನು ಆದರ್ಶ ಮಾದರಿಯಾಗಿ ಪ್ರತಿಷ್ಠಾಪಿಸಿಕೊಂಡು ವ್ಯಕ್ತಿಪೂಜೆ ಮಾಡುವುದು ಶೋಭೆಯಲ್ಲ.
ಇಷ್ಟಕ್ಕೂ, 5 ಸೆಪ್ಟೆಂಬರ್ 1888 ರಾಧಾಕೃಷ್ಣನ್ ಅವರ ಜನ್ಮ ದಿನವಲ್ಲ 20 ಸೆಪ್ಟೆಂಬರ್ 1887 ಎಂಬುದನ್ನು ಸ್ವತಃ ಅವರ ಮಗ ಡಾ.ಸರ್ವಪಲ್ಲಿ ಗೋಪಾಲ್ ದಾಖಲಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಪ್ರಾಧ್ಯಾಪಕರೂ ಇತಿಹಾಸಕಾರರೂ ಆಗಿರುವ ಡಾ.ಸರ್ವಪಲ್ಲಿ ಗೋಪಾಲ್ ಅವರು ತಮ್ಮ ತಂದೆಯನ್ನು ಕುರಿತು ಬರೆದಿರುವ ಹಾಗೂ ಪ್ರಖ್ಯಾತ Oxford University Press 1989 ರಲ್ಲಿ ಪ್ರಕಟಿಸಿರುವ Radhakrishnan : A Biography ಎಂಬ ಪುಸ್ತಕದ 10 ನೇ ಪುಟದಲ್ಲಿ ಈ ಅಂಶ ದಾಖಲಾಗಿದೆ.
ಸ್ವತಃ ಡಾ.ಎಸ್.ರಾಧಾಕೃಷ್ಣನ್ ಅವರ ಮಗನಾದ ಡಾ.ಸರ್ವಪಲ್ಲಿ ಗೋಪಾಲ್ ಬರೆದಿರುವ Radhakrishnan : A Biography, Oxford University Press (1989) ಪುಸ್ತಕದಲ್ಲಿ ನಮಗೆ ತಿಳಿದುಬರುವ ಸಂಗತಿಗಳೇನೆಂದರೆ ರಾಧಾಕೃಷ್ಣನ್ ಅವರು ತನಗೆ ಜನ್ಮಕೊಟ್ಟ ತಾಯಿಯನ್ನು ಆಕೆಯ ಜೀವಮಾನ ಪರ್ಯಂತ ದೂರ ಇಟ್ಟಿದ್ದರು. ವೈಷ್ಣವ ಅಧಿಕಾರಿಯೊಬ್ಬನಿಗೆ ರಾಧಾಕೃಷ್ಣನ್ ವಿವಾಹ ಬಾಹಿರ ಸಂಬಂಧದಿಂದ ಜನಿಸಿದವರು.ಇದೇ ಕಾರಣದ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ತನ್ನ ತಾಯಿಯ ಚಾರಿತ್ರ್ಯದ ಬಗ್ಗೆ ನೈತಿಕ ಕ್ರೋಧ ವ್ಯಕ್ತಪಡಿಸುತ್ತಿದ್ದರು. ಡಾ.ಸರ್ವಪಲ್ಲಿ ಗೋಪಾಲ್ ಬರೆಯುತ್ತಾರೆ : “Most of the major details about the birth of Sarvepalli Radhakrishnan are uncertain. The official version is that he was born on 5 September 1888 at Tirutini, a very small temple town to the north west of Madras city, the second son of a poor Brahmin couple, Sarvepalli Veeraswamyi and his wife Sitamma. However, Radhakrishnan himself was inclined to believe that the date of his birth was in fact 20 September 1887. More important is the doubt whether Veeraswami was his father. Parental responsibility lay, according to village rumor, with an itinerant Vaishnavite official.Sitamma’s brother, who served in the local administration, was thought to have arranged the rendezvous to oblige a superior officer. Credence is lent to the story by the difficulty in believing that Radhakrishnan and his four brothers and sister belonged to the same genetic pool. Intellectual endowment and physical appearance both suggested that Radhakrishnan belonged to different stock. Radhakrishnan himself accepted this version and, critical of his mother’s conduct, always, throughout her long life, kept her at a distance. But he was attached to the man who passed for his father.(ಪುಟ 10)
ಬ್ರಾಹ್ಮಣ ಮನೆತನದ ರಾಧಾಕೃಷ್ಣನ್ ಅವರ ತಾಯಿಯಾದ ಸೀತಮ್ಮನವರು, ಸ್ಥಳೀಯ ಆಡಳಿತದಲ್ಲಿ ಅಧಿಕಾರಿಯಾಗಿದ್ದ ಸ್ವತಃ ತನ್ನ ತಮ್ಮನಿಂದಲೇ ಆತನ ಹಿರಿಯ ವೈಷ್ಣವ ಅಧಿಕಾರಿಯೊಂದಿಗೆ ವಿವಾಹಬಾಹಿರ ಸಂಬಂಧ ಹೊಂದಿದ್ದ ಬಗ್ಗೆ ಬರೆದಿರುವ ಡಾ.ಸರ್ವಪಲ್ಲಿ ಗೋಪಾಲ್, ತಮ್ಮ ತಂದೆಯಾದ ಡಾ.ಎಸ್.ರಾಧಾಕೃಷ್ಣನ್ ಅವರ ವಿವಾಹ ಬಾಹಿರ ಸಂಬಂಧಗಳ ಬಗ್ಗೆಯೂ ಈ ಪುಸ್ತಕದಲ್ಲಿ ನಿರ್ಮಮಕಾರವಾಗಿ ತೆರೆದಿಟ್ಟಿದ್ದಾರೆ. ನೈತಿಕ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತನ್ನ ಹೆತ್ತ ತಾಯಿಯನ್ನು ನಿಂದಿಸುತ್ತಿದ್ದ ಮಗ ರಾಧಾಕೃಷ್ಣನ್, ವೈಯಕ್ತಿಕವಾಗಿ ಅಂತಹ ಯಾವುದೇ ವೈವಾಹಿಕ ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡಿದ್ದವರಾಗಿರಲಿಲ್ಲ.
“…… Radhakrishnan began, too, to show an interest in another woman…… He would not accept, even to himself, that that his loyalty to her was tarnished by his extramarital adventures….. Marriage as he saw it, did not require a husband;s momogamous attitude. She was a devoted wife by any standards. (ಪುಟ. 14).
ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಧಾಕೃಷ್ಣನ್, ತಮ್ಮ ಪಕ್ಕದ ಮನೆಯಲ್ಲಿದ್ದ ವ್ಯಕ್ತಿಯ ಹೆಂಡತಿಯೊಂದಿಗೆ ಅಕ್ರಮ ಲೈಂಗಿಕ ಸಂಬಂಧ ಹೊಂದಿದ್ದರು. ಒಬ್ಬಿಬ್ಬರು ಹೆಂಗಸರೊಂದಿಗಲ್ಲದೆ ಹಲವಾರು ಹೆಂಗಸರೊಂದಿಗೆ ವಿವಾಹ ಬಾಹಿರ ಲೈಂಗಿಕ ಸಂಬಂಧಗಳ ಸರಣಿಯನ್ನು ಹೊಂದಿದ್ದರೆಂದು ಈ ಪುಸ್ತಕದ ಓದಿನಿಂದ ತಿಳಿದುಬರುತ್ತದೆ.
“….he showed his mistresses consideration…. But he never gave them even the semblance of love….. all the women whom he accepted in his life were of superficial mind some enjoyed dubious reputations and many were dominating and hysterical.” (ಪುಟ. 50 – 51).
ತಮ್ಮ”The Hindu view of life” ಎಂಬ ಪುಸ್ತಕದಲ್ಲಿ ಹಿಂದೂ ಧರ್ಮದ ಮೌಲ್ಯಗಳನ್ನು ಕುರಿತು, ಅಧ್ಯಾತ್ಮಿಕತೆಯನ್ನು ಕುರಿತು ಪುಂಕಾನುಪುಂಕವಾಗಿ ಬರೆದಿರುವ ರಾಧಾಕೃಷ್ಣನ್, ಒಬ್ಭ ಶಿಕ್ಷಕನಾಗಿ, ಒಬ್ಬ ರಾಷ್ಟ್ರಾಧ್ಯಕ್ಷನಾಗಿ ಸಾರ್ವಜನಿಕ ಜೀವನದಲ್ಲಿ ಬೋಧಿಸುವುದೊಂದು…. ತನ್ನದೇ ವೈಯಕ್ತಿಕ ಖಾಸಗಿ ಜೀವನದಲ್ಲಿ ನಡೆದುಕೊಳ್ಳವುದು ಇನ್ನೊಂದು. ಇದು ಎಂತಹ ಆದರ್ಶ ಶಿಕ್ಷಕನ ಆದರ್ಶ ಮಾದರಿ? ಸರ್ವಪಲ್ಲಿ ಗೋಪಾಲ್ ಬರೆಯುತ್ತಾರೆ : “…But what castes a shadow is the contrast between the way he conducted his private life and what he preached in public”. ಇಂತಹ ಆಷಾಢಭೂತಿ ಮಾದರಿ ವ್ಯಕ್ತಿತ್ವವನನ್ನು ಶಿಕ್ಷಕರು ಅನುಸರಿಸಬೇಕೇನು?
ಡಾ.ಎಸ್.ರಾಧಾಕೃಷ್ಣನ್ ತನ್ನ ಐದು ಜನ ಹೆಣ್ಣುಮಕ್ಕಳ ಮದುವೆಯನ್ನು ಅಪ್ರಾಪ್ತ ವಯಸ್ಸಿನಲ್ಲಿಯೇ ಅವರ ಯಾವುದೇ ಒಪ್ಪಿಗೆ ಕೇಳದೆ ಮಕ್ಕಳ ಇಚ್ಛೆಗೆ ವಿರುದ್ಧವಾಗಿ ನೆರವೇರಿಸಿದ್ದಾರೆ. ಗೋಪಾಲ್ ಅವರು ದಾಖಲಿಸುತ್ತಾರೆ…”But his attitude also indicates that, whatever his utterances, his instinctive outlook was that women were made for men” (ಪುಟ. 49) ಮಹಿಳೆಯರು ಪುರುಷನ ಸರಕು ಎಂಬ ರೀತಿಯಲ್ಲಿ ಉಪಚರಿಸಿರುವ ರಾಧಾಕೃಷ್ಣನ್, ತನ್ನೊಬ್ಬಳು ಮಗಳನ್ನು ಮದುವೆಯಾಗುವ ವರನನ್ನು ಮದುವೆಯ ದಿನಕ್ಕಿಂತ ಮೊದಲು ನೋಡಿರಲಿಲ್ಲವೆಂದು ದಾಖಲಿಸಿದ್ದಾರೆ ಡಾ.ಸರ್ವಪಲ್ಲಿ ಗೋಪಾಲ್. ಇಂತಹ ವ್ಯಕ್ತಿಯ ಜನ್ಮ ದಿನವನ್ನು ನಮ್ಮ ವಿಚಾರವಂತ ಶಿಕ್ಷಕರು ಯಾವ ಧ್ಯೇಯಾದರ್ಶಗಳ ಪಾಲನೆಯ ಕಾರಣಗಳಿಗಾಗಿ
ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕು? ಯೋಚಿಸಿರಿ..

ಶಿಕ್ಷಕರಾದ ನಮಗೀಗ ಉಳಿದಿರುವ ಶ್ರೇಷ್ಠ ಶಿಕ್ಷಕ ಮಾದರಿ ಎಂದರೆ ನಮ್ಮೆಲ್ಲರ “ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ…. “

ಡಾ. ವಡ್ಡಗೆರೆ ನಾಗರಾಜಯ್ಯ
8722724174

About The Author

Leave a Reply

Your email address will not be published. Required fields are marked *