April 18, 2024

Chitradurga hoysala

Kannada news portal

ಹಿರಿಯೂರು ನಗರಸಭೆ ಆಯುಕ್ತ ಡಿ.ಉಮೇಶ್ ಕಾರ್ಯ ಶೈಲಿ ನಾಗರಿಕರಿಂದ ಮೆಚ್ಚುಗೆ

1 min read


ಹಿರಿಯೂರು ನಗರಸಭೆ ಆಯುಕ್ತ ಡಿ.ಉಮೇಶ್ ಕಾರ್ಯ ಶೈಲಿ ನಾಗರಿಕರಿಂದ ಮೆಚ್ಚುಗೆ

ಹಿರಿಯೂರು:      ನಗರಸಭಾ ಆಯುಕ್ತರ ಕಾರ್ಯವೈಖರಿ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಿಂದ ಗಬ್ಬೆದ್ದು ನಾರುತ್ತಿದ್ದ ಹಿರಿಯೂರು ನಗರಸಭೆಯ ಆಡಳಿತವನ್ನು ಸರಿ ದಾರಿಯತ್ತ ಕೊಂಡೊಯ್ಯಲು ಶ್ರಮಿಸುತ್ತಿರುವ ನಗರಸಭೆ ಆಯುಕ್ತ ಡಿ.ಉಮೇಶ್ ಅವರ ಕಾರ್ಯ ಶೈಲಿ ನಾಗರಿಕರಿಂದ ಮೆಚ್ಚುಗೆ ಮಾತುಗಳು ಬರುತ್ತಿವೆ.

ಜಡ್ಡುಗಟ್ಟಿದ್ದ ನಗರಸಭೆಯ ಅಧೀನ ಸಿಬ್ಬಂದಿಗೆ ಚುರುಕು ಮುಟ್ಟಿಸುತ್ತಿರುವ ಪೌರಾಯುಕ್ತರ ಕಾಯ೯ಕ್ಕೆ ಮೊದಲು ಅಭಿನಂದನೆಗಳನ್ನು ಸಲ್ಲಿಸೋಣ ಹಾಗೂ ದಕ್ಷ, ಉತ್ತಮ ಅಧಿಕಾರಿ ನಿಯೋಜಿಸಿದ ಶಾಸಕರನ್ನೂ ಅಭಿನಂದಿಸೋಣ ಎಂದು ಹಿರಿಯೂರು ನಾಮನಿದೇ೯ಶಿತ ನಗರಸಭಾ ಸದಸ್ಯ ಬಿ.ಎನ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದೆ ಉಮೇಶ್ ರವರು ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲೆ ನಗರಸಭೆಯಲ್ಲಿ ರಾಶಿ ರಾಶಿ ಬೇಕಾ ಬಿಟ್ಟಿಯಾಗಿ ಬಿದ್ದಿದ್ದ ಕಡತಗಳನ್ನು ವಿಲೇವಾರು ಮಾಡಲು ವಿಭಾಗಾವಾರು ಜೋಡಿಸಿ ದಾಖಲೆ ಕೊಠಡಿಯನ್ನು ಸ್ವಚ್ಚ ಮಾಡಿಸಿಟ್ಟಿರುವುದು ಪ್ರಶಂಸನೀಯ ಕಾಯ೯ವಾಗಿದೆ.
ಆಯುಕ್ತರು ಯಾವುದೇ ಬಿಂಕ ಬಿಗುಮಾನವಿಲ್ಲದೆ ಚುನಾಯಿತ ಸದಸ್ಯರ ಜೊತೆ ಸಾವ೯ಜನಿಕರ ಜೊತೆ ಸೌಜನ್ಯದಿಂದ ವತಿ೯ಸುತ್ತಿದ್ದು ಕುಂದು ಕೊರತೆಗಳನ್ನು ಹೇಳಿದ ಮರು ದಿನವೇ ಸ್ಥಳಕ್ಕೆ ಸಂಬಂಧಿತ ಅಧಿಕಾರಿ ಹಾಗೂ ನೌಕರರುಗಳಿಗೆ ಕಾರ್ಯ ಮಗ್ನರಾಗಲು ಸೂಚಿಸುತ್ತಿರುವುದು ಅವರ ಕತ೯ವ್ಯನಿಷ್ಠೆಗೆ ಸಾಕ್ಷಿಯಾಗುತ್ತಿದೆ.
ಅಧಿಕಾರ ವಹಿಸಿಕೊಂಡ ಸ್ವಲ್ಪ ದಿನದಲ್ಲೇ ಘನತ್ಯಾಜ್ಯ ಸ್ಥಳಕ್ಕೆ ತೆರಳಿ ಅಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯ ಮಾಡಿದರಲ್ಲದೆ ಆರೋಗ್ಯ ನಿರೀಕ್ಷಕರೊಡಗೂಡಿ ಸಕಾ೯ರದ ಮಾಗ೯ಸೂಚಿ ಪ್ರಕಾರ ಕ್ರಮ ವಹಿಸಲು ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದ್ದಾರೆ.
ಕೆಳಗಿನ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಕ್ತ ಮಾಗ೯ದಶ೯ನ ನೀಡಿ ನಿಗದಿತ ಅವಧಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಲು ಹೇಳುತ್ತಿರುವುದು ಹಾಗೂ ಸಾವ೯ಜನಿಕರನ್ನು ಅನಗತ್ಯ ಕಚೇರಿಗೆ ಅಲೆದಾಡಿಸಬಾರದೆಂದು ಎಚ್ಚರಿಕೆ ನೀಡಿ ಕೆಲಸ ತೆಗೆದುಕೊಳ್ಳುತ್ತಿರುವ ಕಾರ್ಯ ವೈಖರಿ ಜನರ ಮೆಚ್ಚಿಗೆಗೆ ಪಾತ್ರವಾಗಿದೆ.

About The Author

Leave a Reply

Your email address will not be published. Required fields are marked *