ಚಳ್ಳಕೆರೆ ರಾಜಕಾರಣಕ್ಕೆ ಬಾಳೆಮಂಡಿಯ ಮತ್ತೊಂದು ಫೈರ್ ಬ್ರಾಂಡ್
1 min readವಿಶೇಷ ವರದಿ:ಚಿತ್ರದುರ್ಗ ಜಿಲ್ಲೆಯ ರಾಜಕಾರಣದಲ್ಲಿ ಚಳ್ಳಕೆರೆ ರಾಜಕಾರಣ ಮಾತ್ರ ಹೆಚ್ಚು ಯವಕರನ್ನು ರಾಜಕೀಯಕ್ಕೆ ಕರೆ ತರುವ ಕೇಂದ್ರ ಎಂಬ ಮಾತು ಕೇಳುತ್ತಿದೆ. ಭವಿಷ್ಯ ಚಳ್ಳಕೆರೆ ನೆಲದಲ್ಲಿ ವಿಶೇಷವೆಂದರೆ ರಾಜಕಾರಣ, ಸಂಘಟನೆ, ಹೋರಟದ ಭೂಮಿ ಎಂದರೆ ತಪ್ಪಗಲಾರದು.
ಹೌದು ಅದೇ ಹಾದಿದಲ್ಲಿ ಚಳ್ಳಕೆರೆಯ ರಾಜಕಾರಣ ಎಂದ ತಕ್ಷಣ ಜನರ ಕಣ್ಣ ಮುಂದೆ ಬರುವ ಕೆಲವು ಕುಟುಂಬಳಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುವಂತ ಮತ್ತು ಇತಿಹಾಸದಲ್ಲಿ ಎಲ್ಲಾ ಸಂದರ್ಭದಲ್ಲೂ ಸಹ ಬಾಳೆಮಂಡಿ ಕುಟುಂಬದ ಪಾತ್ರ ಮತ್ತು ನಿಷ್ಠೆಗೆ ಹೆಸರಾದ ಕುಟುಂಬ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಕಳೆದ ಅನೇಕ ವರ್ಷಗಳ ರಾಜಕಾರಣದ ಇತಿಹಾಸದ ಪುಟಗಳಲ್ಲಿ ರಾಜಕೀಯ, ಚುನಾವಣೆ, ಸಮಾಜಸೇವೆ, ನಾಯಕ ಸಮಾಜದ ಸಂಘಟನೆ ಹೀಗೆ ಎಲ್ಲಾ ರಂಗದಲ್ಲಿ ಅನೇಕ ವಿಚಾರಗಳಲ್ಲಿ ಕುಟುಂಬವು ನಿರಂತರವಾಗಿ ತೊಡಗಿಕೊಂಡಿದೆ .
ಬಾಳೆಮಂಡಿ ಕುಟುಂಬದ ನಾಲ್ಕು ಜನ ಅಣ್ಣತಮ್ಮಂದಿರಲ್ಲಿ ದೊಡ್ಡಣ್ಣ ನಾಗಿರುವ ಪೊಲೀಸ್ ವೀರಣ್ಣ ಅವರ ರಾಜಕಾರಣ ಹಿನ್ನೆಲೆಯನ್ನು ನೋಡಿದಾಗ ಅವರು ಮೂಲತಃ ಕಾಂಗ್ರೆಸ್ಸಿನ ಕಟ್ಟಾಳಾಗಿ ಕಾಂಗ್ರೆಸ್ಸಿಗೆ ದುಡಿದವರು ರಾಜಕೀಯ ಬದಲಾವಣೆಗಳಲ್ಲಿ ಅವರು ಕಾಂಗ್ರೆಸ್ಸನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಅದಕ್ಕೂ ಮುನ್ನ ಅವರು ಕಾಂಗ್ರೆಸ್ ಕಟ್ಟಾಳಾಗಿ ಅನೇಕ ಚುನಾವಣೆಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಗೆದ್ದು ಬಂದರು “
ಕೋವಿಡ್ ಗೆ ಕೈಲಾದ ಸಹಾಯ ಹಸ್ತ: ಜ್ಯೋತಿ ಪ್ರಕಾಶ್ ತಮ್ಮ ಯುವ ತಂಡದೊಂದಿಗೆ ಅನೇಕ ಸ್ಥಳಗಳಿಗೆ ತೆರಳಿ ಬಡವರು, ವೃದ್ಧರು, ಶ್ರಮಿಕರಿಗೆ ತಮ್ಮ ಕೈಲಾದ ಸಹಾಯ ಹಸ್ತದಿಂದ ಆಹಾರ,ಇತರೆ ಸಾಮಾಗ್ರಿಗಳನ್ನು ಹಂಚಿ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಸೋಲಿಲ್ಲದ ಸರದಾರ” ಎನಿಸಿಕೊಂಡು “ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ” ಹಾಗೂ “ಚಳ್ಳಕೆರೆಯ ಪುರಸಭೆ ಚುನಾವಣೆ”ಯಲ್ಲಿ ಗೆದ್ದಿದ್ದರು.
ಬಿಜೆಪಿಯಲ್ಲಿ ಈ ಬಾರಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿದ್ದು ಆಯ್ಕೆಯಾಗಿದ್ದು ಸಹ ಅವರ ಸಂಘಟನೆ, ಪರಿವಾರದ ಸಂಘಟನೆಗೆ ಸಂದ ಮೊದಲನೇ ಮೆಟ್ಟಿಲು ಸಹ ಆಗಿದೆ.
ತಂದೆಯ ಚುನಾವಣಾ ಸಂಘಟನೆ ಮಾಡಿ ಜನರ ಮನ ಗೆದ್ದ ಜ್ಯೋತಿ ಪ್ರಕಾಶ್: ಸೋಲಿಲ್ಲದ ಸರದಾರ ಪೋಲಿಸ್ ವೀರಣ್ಣ ಅವರು ಕಳೆದ ವರ್ಷ ಬಿಜೆಪಿಗೆ ಬಂದು ಬಿಜೆಪಿಯಿಂದ ಚಳ್ಳಕೆರೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋತಿದ್ದರೂ ಕೂಡ ಆ ಚುನಾವಣೆಯಲ್ಲಿ ಜನರ ಗಮನಸೆಳೆದಿದ್ದು ಜ್ಯೋತಿಪ್ರಕಾಶ್ ಅವರ ಸಂಘಟನಾ ಶೈಲಿ.
ಬಾಳೆಮಂಡಿ ಪೊಲೀಸ್ ವೀರಣ್ಣನವರ ಕುಟುಂಬದ ಮತ್ತೊಂದು ಕುಡಿ ಜ್ಯೋತಿಪ್ರಕಾಶ್ ,ತಂದೆಯಂತೆಯೇ ಚಿಕ್ಕವಯಸ್ಸಿನಿಂದಲೂ ಕೂಡ ಕಾಲೇಜು ದಿನಗಳಿಂದಲೂ ಕೂಡ ಅನೇಕ ಕಾರ್ಯಕ್ರಮಗಳನ್ನು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿಕೊಂಡು ಸಂಘಟಿಸುತ್ತ ಅನೇಕ ಯುವಕರಿಗೆ ಮಾರ್ಗದರ್ಶನ ಮಾಡುತ್ತ ಅವರ ಜೊತೆಗೆ ಬೆನ್ನೆಲುಬಾಗಿ ನಿಂತಿರುವ ಜ್ಯೋತಿಪ್ರಕಾಶ್ ಈಗ ಪ್ರಸ್ತುತ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ನೇರ ರಾಜಕೀಯ ಪ್ರವೇಶ ಪಡೆದಂತೆ ಆಗಿದೆ.
ರಾಜಕಾರಣದ ಜೊತೆಗೆ ಬಿಕಾಂ ಪದವಿಧರರಾಗಿರುವ ಇವರು ತಮ್ಮದೇ ಆಗಿರುವ ಸ್ವಯಂಉದ್ಯೋಗವನ್ನು ಮಾಡಿಕೊಂಡು ನಿರಂತರವಾಗಿ ಚಳ್ಳಕೆರೆಯ ಆಗುಹೋಗುಗಳಲ್ಲಿ ತೊಡಗಿಕೊಂಡು “ಯುವ ರಾಜಕಾರಣಿ” ಎಂದು ಖ್ಯಾತರಾಗಿದ್ದಾರೆ ..
ಈ ಬಾರಿ ಮೊಟ್ಟ ಮೊದಲನೇ ವರ್ಷದ ಹಿಂದೂ ಮಹಾಗಣಪತಿ ಚಳ್ಳಕೆರೆ ಆಯೋಜಿಸಲು ಮುಂದಾದಾಗ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳ ಜೊತೆಗೂಡಿ ಅನೇಕ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಹಿಂದು ಮಹಾಗಣಪತಿ ಯಶಸ್ಸಿನ ಹಿಂದೆ ಇವರ ಹೆಸರು ಕೂಡ ಇದೆ.
ಸಂಘದ ಅನೇಕ ಕಾರ್ಯಕ್ರಮಗಳನ್ನು ಕೂಡ ಇವರೂ ಕೂಡ ಪಾಲ್ಗೊಂಡು ಅಲ್ಲಿಯೂ ಕೂಡ ಅನೇಕ ಹಿರಿಯರ ಜೊತೆಗೆ ಕೆಲಸ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮಟ್ಟದ ಸಂಘಟನ ಚತುರ ಸಂಘ ಪರಿವಾರದ ನೆಚ್ಚಿನ ನಾಯಕ ಚಿಕ್ಕಪ್ಪ ಆಗಿರುವ ರಾಮದಾಸ್ ಬಾಳೆಮಂಡಿ ಮಾರ್ಗದರ್ಶನ: ರಾಮದಾಸ್ ಇವರು ಸಹ ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ನಿರಂತರವಾಗಿ ಸಮಾಜದ ಅನೇಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಕ್ರಿಯಾಶೀಲ ವ್ಯಕ್ತಿಯಾಗಿದ್ದು ಅವರ ಸಂಘಪರಿವಾರದ ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ ಗುರುತಿಸಿಕೊಂಡವರು, ಚಿಕ್ಕಪ್ಪನಂತೆಯೇ ಜ್ಯೋತಿಪ್ರಕಾಶ್ ಅವರು ಕೂಡ ಬಿಜೆಪಿಯ ಯುವ ರಾಜಕಾರಣಿಯಾಗಿ ಮುಂದೆ ಇನ್ನಷ್ಟು ಎತ್ತರಕ್ಕೆ ಬೆಳೆದು ಜನನಾಯಕನಾಗಿ ಜನ ಧ್ವನಿಯಾಗಲಿ ಎಂದು ಬಯಸುತ್ತಿದೆ ಚಳ್ಳಕೆರೆಯ ಬಾಳೆಮಂಡಿ ಅಭಿಮಾನಿಗಳ ಬಳಗದ ಆಶಯವಾಗಿದೆ.