Recent Posts

October 16, 2021

Chitradurga hoysala

Kannada news portal

ಪತಿಯಿಂದ ಪತ್ನಿಯ ಕೊಲೆ ಚಿತ್ರದುರ್ಗದಲ್ಲಿ

1 min read

   ಪತಿ ಯಿಂದ ಪತ್ನಿಯ ಕೊಲೆ ಚಿತ್ರದುರ್ಗದಲ್ಲಿ

ಚಿತ್ರದುರ್ಗ:

ಪತ್ನಿಯನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಮೀನಾಬಾನು 35ವರ್ಷ ಕೊಲೆಯಾದ ಮಹಿಳೆ, ಆರೋಪಿ ಪತಿ ಮೆಹಬೂಬ್ ಬಾಷ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಇಬ್ಬರು 15 ವರ್ಷಗಳ ಹಿಂದೆ ಪ್ರೀತಿ ಮದುವೆಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ರವರು ಮಾಹಿತಿ ನಿಡಿದ್ದಾರೆ.

ವೆಲ್ಡಿಂಗ್ ಶಾಪನಲ್ಲಿ ಕೆಲಸ ಮಾಡುವ ಮೆಹಬೂಬ್ ಬಾಷ ಪತ್ನಿ ಆಮೀನಾಬಾನು ಅವರು ಹೊಸಪೇಟೆ ಸಮೀಪದ ಕಮಲಾಪುರ ಗ್ರಾಮದಲ್ಲಿ ವಾಸವಾಗಿದ್ದು ಕಳೆದ ಒಂದು ವಾರದ ಹಿಂದೆ ತಾಯಿ ಮನೆ ಇರುವ ಚಿತ್ರದುರ್ಗಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರಲ್ಲಿ ಸದಾ ಜಗಳ ನಡೆಯುತ್ತಿದ್ದು ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ದರ್ಗಾಕ್ಕೆ ಬೈಕಿನಲ್ಲೇ ಹೋಗಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಚಿತ್ರದುರ್ಗ ನಗರದ ಹೊರ ವಲಯದ ವೆಂಕಟೇಶ್ವರ ಬಡಾವಣೆಯಲ್ಲಿ ಸ್ಕೂಟಿ ಓಡಿಸುತ್ತಿದ್ದ ಪತ್ನಿಯನ್ನು ಹಿಂಬದಿ ಸೀಟಿನಲ್ಲಿದ್ದ ಪತಿ ಚೂರಿಯಿಂದ ಹಿರಿದು ಕೊಲೆ ಮಾಡಿದ್ದಾನೆ. ಶುಕ್ರವಾರ ರಾತ್ರಿ ಘಟನೆ ಜರುಗಿದ್ದು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

You may have missed