April 19, 2024

Chitradurga hoysala

Kannada news portal

ಭದ್ರೆಗಾಗಿ ಎಲ್ಲರೂ ಒಗ್ಗೂಡೋಣ – ನಾಲ್ಕು ಜಿಲ್ಲೆಗಳ ಸರ್ವಪಕ್ಷ ಸಭೆ ಆಯೋಜಿಸಿ: ಮಾಜಿ ಸಂಸದ ಚಂದ್ರಪ್ಪ

1 min read


ಭದ್ರೆಗಾಗಿ ಎಲ್ಲರೂ ಒಗ್ಗೂಡೋಣ
ನಾಲ್ಕು ಜಿಲ್ಲೆಗಳ ಸರ್ವಪಕ್ಷ ಸಭೆ ಆಯೋಜಿಸಿ

ಭದ್ರಾ ಮೇಲ್ದಂಡೆ ಯೋಜನೆಗೆ ಕೆಲ ರಾಜಕಾರಣಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಕೇಂದ್ರ
ಸಚಿವ ಎ.ನಾರಾಯಣಸ್ವಾಮಿ ಅವರ ಹೇಳಿಕೆ ಬಹಳ ಗಂಭೀರ

ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ದಶಕಗಳ ಕಾಲ ಬಯಲುಸೀಮೆ ಪ್ರದೇಶದ ಮಠಾಧೀಶರು,
ಎಲ್ಲ ಪಕ್ಷದ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹೋರಾಟ ನಡೆಸಿವೆ. ಅದರ ಫಲ ಯೊಜನೆ ಜಾರಿ ಆಗಿದೆ.
ಈ ವೇಳೆ ಸಂಸದನಾಗಿದ್ದ ವೇಳೆ ನನ್ನ ಕರ್ತವ್ಯ ಮಾತ್ರ ನಿರ್ವಹಿಸಿದ್ದೇನೆ. ಹೊಸದುರ್ಗ ಶಾಸಕ
ಬಿ.ಜಿ.ಗೋವಿಂದಪ್ಪ ನೀರಗಂಟೆ ರೀತಿ ಯೋಜನೆಗಾಗಿ ಕೆಲಸ ನಿರ್ವಹಿಸಿದ್ದಾರೆ. ಅದನ್ನು ಕೇಂದ್ರ ಸಚಿವರು ಸ್ಮರಿಸಿರುವುದು ಸಂತಸ ಆಗಿದೆ. ಅದರಲ್ಲಿ
ನಮ್ಮಗಳ ಹೆಚ್ಚುಗಾರಿಕೆ ಏನಿಲ್ಲ. ಅದು ಜನಪ್ರತಿನಿಧಿಗಳಾದ ನಮ್ಮಗಳ ಹೊಣೆಗಾರಿಕೆ. ಈ
ಯೋಜನೆ ಜಾರಿಗೊಳ್ಳಲು ಜಿಲ್ಲೆಯ ಜನರ ಹೋರಾಟವೇ ಮುಖ್ಯ ಕಾರಣ. ಅದರ ಕ್ರೆಡಿಟ್ ಹೋರಾಟ ಮಾಡಿದವರಿಗೆ ಸಲ್ಲಬೇಕು.

ಈ ಮಧ್ಯೆ ಯೋಜನೆಗೆ ಕೆಲ ರಾಜಕಾರಣಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಕೇಂದ್ರ ಸಚಿವರ ಹೇಳಿಕೆ ನಿಜಕ್ಕೂ ಜಿಲ್ಲೆಯ ಜನರಲ್ಲಿ ಆತಂಕ ತರುವ ವಿಷಯ ಆಗಿದೆ.

ಆದ್ದರಿಂದ ಎದುರಾಗಿರುವ ಸಮಸ್ಯೆ ಬಗೆಹರಿಸಿ ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿಸಲು ನಾವೇಲ್ಲರೂ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಗ್ಗೂಡಬೇಕು.

ಈ ನಿಟ್ಟಿನಲ್ಲಿ ಜಿಲ್ಲೆಯ ಸರ್ವಪಕ್ಷ ಪ್ರಮುಖರ ಸಭೆ ಶೀಘ್ರ ಆಯೋಜಿಸಬೇಕು.

ತರಿಕೆರೆ ನನ್ನ ಜನ್ಮಭೂಮಿ ಆಗಿರುವುದರಿಂದ ಅಲ್ಲಿನ ರಾಜಕಾರಣಿಗಳಿಂದ ಯೋಜನೆಗೆ ಅಡ್ಡಿ ಎದುರಾಗಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿತ್ತೇನಿ. ಈ ಹಿಂದೆ ಇಂತಹ ಅನೇಕ ಸಮಸ್ಯೆ ಬಗೆಹರಿಸಿದ ಅನುಭವ ಇದೆ.

ರಾಜಕೀಯ ಜನ್ಮ ನೀಡಿದ ಚಿತ್ರದುರ್ಗ ಜಿಲ್ಲೆ ಜನರ ಋಣ ನನ್ನ ಮೇಲಿದೆ. ಈಗಾಗಲೇ ಯೋಜನೆ ಪ್ರಗತಿಗೆ ಶಾಸಕ ರಘುಮೂರ್ತಿ, ಡಿ.ಸುಧಾಕರ್, ಹೆಚ್.ಆಂಜನೇಯ ಜತೆಗೂಡಿ ಶ್ರಮಿಸಿದ್ದೇವಿ. ಈಗಲೂ ಸಮಸ್ಯೆ ಪರಿಹಾರಕ್ಕೆ ನಾವೆಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಲು ಸಿದ್ಧವಿದ್ದೆವಿ.

ಆದ್ದರಿಂದ ಭದ್ರಾಮೇಲ್ದಂಡೆ ಯೋಜನೆ ಜಾರಿಗೆ ಇರುವ ಅಡ್ಡಿ ಹಾಗೂ ಯೋಜನೆ ಪ್ರಗತಿಗೆ ನಾವೇಲ್ಲರೂ ಒಗ್ಗೂಡಬೇಕು.

ಬಳಿಕ ರಾಷ್ಟ್ರೀಯ ಯೋಜನೆಯ
ಮಾನ್ಯತೆ ಪಡೆಯಲು ಪ್ರಧಾನಿ ಬಳಿ ನಿಯೋಗ ತೆರಳೋಣಾ.

ಈ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಜಿಲ್ಲಾ ಸಚಿವ ಬಿ.ಶ್ರೀರಾಮುಲು ಶ್ರಮಿಸಬೇಕು.ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು,ದಾವಣಗೆರೆ ಜಿಲ್ಲೆಗಳ ಸರ್ವಪಕ್ಷಗಳ ಪ್ರಮುಖರ ಸಭೆ ಆಯೋಜಿಸಬೇಕು. ಈ ಮೂಲಕ ಭದ್ರಾಮೇಲ್ದಂಡೆ ಯೋಜನೆಗೆ ಇರುವ ಸಮಸ್ಯೆ ಪರಿಹಾರಕ್ಕೆ ನಿರ್ಧಾರ ಕೈಗೊಳ್ಳಲು
ಸಾಧ್ಯವಾಗುತ್ತದೆ.

ಇಂತಹ ಕಾರ್ಯ ಕೈಗೊಳ್ಳುವ ಮುಲಕ ಜನರಲ್ಲಿ ಆತಂಕ ದೂರ ಮಾಡಲು ಸಾಧ್ಯವಾಗುತ್ತದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಿಗೆ ಮೊದಲ ಬಾರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ
ಸಿಕ್ಕಿದೆ. ಅ ಭಾಗ್ಯ ನಿಮ್ಮದಾಗಿದೆ. ನಿಮ್ಮಿಂದ ಜಿಲ್ಲೆಗೆ ಬಹಳ ಅಭಿವೃದ್ಧಿ ಕಾರ್ಯಗಳು ಆಗಬೇಕೆಂಬ ಮಹಾದಾಸೆ ನಮ್ಮದಾಗಿದೆ.

ಈಗಾಗಲೇ ಯೋಜನೆ ಬಹಳಷ್ಟು ಮುಂದಕ್ಕೆ ಸಾಗಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ
ಕಾಮಗಾರಿಗಳು ನಡೆದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ 12 ಸಾವಿರ
ಕೋಟಿಗೂ ಅಧಿಕ ಹಣ ನೀಡಿದ್ದರು. ಅದೇ ರೀತಿ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ,
ಧರ್ಮಸಿಂಗ್, ಬಿ.ಎಸ್.ಯಡಿಯೂರಪ್ಪ ಯೋಜನೆ ಜಾರಿಗೆ ತಮ್ಮ ಅಧಿಕಾರವಧಿಯಲ್ಲಿ ಸಹಕಾರ
ನೀಡಿದ್ದಾರೆ.

ಇಂತಹ ಜನಪರ ಯೋಜನೆಗೆ ಸಣ್ಣ ಅಡ್ಡಿಯೂ ಎದುರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿ ಆಗಿದೆ.

ಆದ್ದರಿಂದ ಮೊದಲು ಜಿಲ್ಲಾ ಮಟ್ಟದ ಸರ್ವಪಕ್ಷ ಸಭೆ, ಬಳಿಕ ನಾಲ್ಕು ಜಿಲ್ಲೆಗಳ ಸರ್ವಪಕ್ಷಗಳ ಸಭೆ ಶೀಘ್ರ ಕರೆಯಬೇಕು.
ಸಭೆ ಬಳಿಕ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ಪ್ರಧಾನಮಂತ್ರಿ ಬಳಿ ನಿಯೋಗ
ಹೋಗಲು ತಯಾರಿ ನಡೆಸಬೇಕು. ಇಂತಹ ನಡೆಯಿಂದ ಮಾತ್ರ ಬಯಲು ಸೀಮೆ ಜನರ ಬಹುದಿನಗಳ ಕಸನು
ನನಸಾಗಲಿದೆ.
ಸೈದ್ಧಾಂತಿಕ, ರಾಜಕೀಯ ಭಿನ್ನಾಭಿಪ್ರಾಯ ಮರೆತು ಯೋಜನೆ ಪ್ರಗತಿಗಾಗಿ ಹಾಗೂ ಬರಪ್ರದೇಶದ
ಜನರ ಒಳಿತಿಗಾಗಿ ಕಾಂಗ್ರೆಸ್ ಪಕ್ಷ ಶ್ರಮಿಸಲಿದೆ. ನಮಗೆ ರಾಜಕಾರಣಕ್ಕಿಂತ ಜಿಲ್ಲೆಯ
ಜನರ ಹಿತ ಮುಖ್ಯವಾಗಿದೆ.

ಆದ್ದರಿಂದ ಯೋಜನೆಗೆ ಇರುವ ಅಡ್ಡಿ ಬಹಿರಂಗಪಡಿಸಬೇಕು.
ನಾಲ್ಕು ಜಿಲ್ಲೆಗಳ ಸರ್ವಪಕ್ಷಗಳ ಪ್ರಮುಖರ ಸಭೆ ಆಯೋಜಿಸಬೇಕು. ದೆಹಲಿಗೆ ನಿಯೋಗ
ತೆರಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು, ಮಂತ್ರಿಗಳು
ಸರ್ಕಾರದೊಂದಿಗೆ ಚರ್ಚಿಸಿ, ದಿನಾಂಕ ನಿಗದಿ ಮಾಡಬೇಕು.

ಕರೋನಾ ಸೋಂಕು ಹೆಚ್ಚುತ್ತೆ ಎಂಬ ಕಾರಣಕ್ಕೆ ಜನಾರ್ಶೀವಾದದಲ್ಲಿ ಜನ ಸೇರಿಸಿದ್ದನ್ನು ಟೀಕಿಸಿದ್ದೇ. ನಮ್ಮ ಜಿಲ್ಲೆ ಸಂಸದರಿಗೆ ಸಚಿವ ಸ್ಥಾನ ಸಿಕ್ಕಿದ್ದು ನನ್ನಲ್ಲೂ ಬಹಳ ಸಂತಸ ತಂದಿದೆ. ಆದರೆ, ಅಬ್ಬರ, ಅದ್ಧೂರಿತನ ಕೋವಿಡ್ ಆತಂಕದ ವೇಳೆ ಬೇಕಿರಲಿಲ್ಲ ಎಂಬುದಷ್ಟೇ ಟೀಕಿಸಲು ಕಾರಣ ಎಂದು ಬಿ.ಎನ್.ಚಂದ್ರಪ್ಪ ಮಾಜಿ ಸಂಸದರು ವ್ಯಗವಾಡಿದ್ದಾರೆ.

About The Author

Leave a Reply

Your email address will not be published. Required fields are marked *