April 20, 2024

Chitradurga hoysala

Kannada news portal

ಶರಣ ಸಂಸ್ಕೃತಿ ಉತ್ಸವದ ಕಾರ್ಯಕರ್ತರ ಸಭೆ :ಶಿಮುಶ , ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟ ಮಾದರ ಶ್ರೀ

1 min read

ಚಿತ್ರದುರ್ಗ ಸೆ.18 – 2021ನೇ ಸಾಲಿನ ಶರಣ ಸಂಸ್ಕೃತಿ
ಉತ್ಸವದ ಕಾರ್ಯಕರ್ತರ ಪೂರ್ವಭಾವಿ ಸಭೆಯು ಡಾ. ಶಿವಮೂರ್ತಿ ಮುರುಘಾ ಶರಣರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಉತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸುವ ಹಿನ್ನೆಲೆಯಲ್ಲಿ ಶಾಲಾಕಾಲೇಜುಗಳ ಮುಖ್ಯಸ್ಥರುಗಳು ಮುತುವರ್ಜಿಯಿಂದ ಕೆಲಸಕಾರ್ಯಗಳನ್ನು ನಿರ್ವಹಿಸಬೇಕು. ಈ ಕಾರ್ಯಕ್ರಮಕ್ಕೆ ಐದುಕೋಟಿಗಿಂತ ಹೆಚ್ಚು ವೆಚ್ಚ ಮಾಡುವ ಸಂಭವವಿದ್ದು, ಈಗಾಗಲೇ ಸುವರ್ಣ ಸೌಧವನ್ನು ನಿರ್ಮಾಣ ಮಾಡಲಾಯಿತು. 25ವರ್ಷಗಳ ಸವಿನೆನಪಿಗಾಗಿ ಅನುಭವ ಮಂಟಪ, ವಸ್ತುಸಂಗ್ರಹಾಲಯ ಸ್ಥಾಪಿಸಲಾಯಿತು. ಅದೇ ರೀತಿ ತೃತೀಯ ದಶಮಾನೋತ್ಸವದ ಅಂಗವಾಗಿ ಬೃಹತ್ ಶಿಲಾಮಂಟಪ ನಿರ್ಮಿಸಲಾಗುತ್ತಿದೆ. ಮಠದ ಪ್ರತಿಯೊಂದು ಸ್ಥಳವು ತುಂಬ ಸುಂದರವಾಗಿ ನಿರ್ಮಿಸಲಾಗುತ್ತಿದೆ. ವಿದ್ಯುತ್‍ದೀಪಾಲಂಕಾರವನ್ನು ಮಾಡಲಾಗುತ್ತಿದೆ. ಈ ವರ್ಷ ಶರಣಸಂಸ್ಕøತಿ ಉತ್ಸವವನ್ನು ಅದ್ಧೂರಿಯಿಂದ ಆಚರಿಸಲು ಶ್ರಮಿಸಬೇಕೆಂದು ತಿಳಿಸಿದರು.
ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಮಾತನಾಡಿ, ದಿ. 23-09-2021ರಿಂದ 18-10-21ರವರೆಗೆ ನಡೆಯುವ ಶರಣಸಂಸ್ಕøತಿ ಉತ್ಸವದ ಕಾರ್ಯಕ್ರಮಗಳ ವಿವಿಧ ಸಮಿತಿ ಸದಸ್ಯರುಗಳ ಜವಾಬ್ದಾರಿ ನಿರ್ವಹಿಸುವುದರ ಬಗ್ಗೆ ತಿಳಿಸಿದರು.

ಡಾ.ಶಾಲಿನಿ ಮತ್ತು ಸಂತೋಷ ಗುಡಿಮಠ ಅವರು ದಿ.23-9-21ರಂದು ಉತ್ಸವದ ಅಂಗವಾಗಿ ನಡೆಯುವ ಆರೋಗ್ಯ ಮೇಳದ ಸಂಪೂರ್ಣ ಮಾಹಿತಿಯನ್ನು ನೀಡಿದರಲ್ಲದೆ, ಈ ಮೇಳದಲ್ಲಿ ಸಿ.ಪಿ.ಆರ್. (ಹೃದಯಾಘಾತವಾದಾಗ ನೀಡಬಹುದಾದ ಚಿಕಿತ್ಸೆ) ತರಬೇತಿಯನ್ನು 3 ಲಕ್ಷಕ್ಕಿಂತ ಹೆಚ್ಚು ಜನರಿಗೆ ತಲುಪಿಸಿ ವಿಶ್ವದಾಖಲೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.ಶಿಕ್ಷಣಾಧಿಕಾರಿ ಬಿ.ಸಿದ್ದಪ್ಪ, ಮಠದಲ್ಲಿ ನಡೆಯುವ ಪ್ರವಚನ ಮಾಲೆಯ ಕಮಿಟಿಯ ಸದಸ್ಯರ ಜವಾಬ್ದಾರಿ ನಿರ್ವಹಣೆ ಕುರಿತು ವಿವರವನ್ನು ನೀಡಿದರು.

ಸಾಹಸಕ್ರೀಡೆ, ವನ್ಯಜೀವಿ ಛಾಯಾಚಿತ್ರ ಪ್ರದರ್ಶನ, ನೂರು ವಿಧದ ಆಹಾರ ಮೇಳ ಹಾಗು ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಕೂಟ ಸಂಬಂಧಪಟ್ಟಂತೆ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಸವಿಸ್ತಾರವಾದ ವಿವರವನ್ನು ತಿಳಿಸಿದರು.

ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್.ನವೀನ್ ಅವರು, ಬೈಕ್‍ರ್ಯಾಲಿ, ಯೂತ್‍ಫೆಸ್ಟಿವಲ್ ಸಂಬಂಧಪಟ್ಟಂತೆ ವಿವಿಧ ರೂಪುರೇಷೆಗಳನ್ನು ಸಭೆಯ ಮುಂದೆ ಮಂಡಿಸಿದರು.
ಸಭೆಯಲ್ಲಿ ಎಸ್.ಜೆ.ಎಂ. ಸಂಸ್ಥೆಗಳ ಎಲ್ಲ ಮುಖ್ಯಸ್ಥರುಗಳು ಮತ್ತು ಸಿಬ್ಬಂದಿವರ್ಗ ಹಾಜರಿದ್ದರು.ಶಿಕ್ಷಣಾಧಿಕಾರಿ ಸಿದ್ದಪ್ಪ ಬಿ. ಸ್ವಾಗತಿಸಿದರು. ಹಾಲಪ್ಪನಾಯಕ ವಂದಿಸಿದರು.

About The Author

Leave a Reply

Your email address will not be published. Required fields are marked *