Recent Posts

October 17, 2021

Chitradurga hoysala

Kannada news portal


ಜನರ ಬವಣೆ, ನಿರುದ್ಯೋಗ, ಬಡತನ ನಿವಾರಣೆ ಮಾಡುವುದು ಕಾಂಗ್ರೆಸ್  ಮಾತ್ರ ಮಾಜಿ ಸಚಿವ ಎಚ್.ಆಂಜನೇಯ.

ಚಿತ್ರದುರ್ಗ:ಸೆ.18

ದೇಶದ ರಾಜಕೀಯ ಇತಿಹಾಸದುದ್ದಕ್ಕೂ ಕಾಂಗ್ರೆಸ್ ಪಕ್ಷ ಮತ್ತು ಅದರ ನೇತಾರರಿಗೆ ಮಾತ್ರ ಈ ದೇಶದ ಜನರ ಬವಣೆ, ನಿರುದ್ಯೋಗ, ಬಡತನ ನಿವಾರಣೆ ಮಾಡುವುದು ಹಾಗೂ ಸಾಮಾಜಿಕ ಸಾಮರಸ್ಯ ಕಾಪಾಡುವುದು, ಸಾಮಾಜಿಕ ಮತ್ತು ಆರ್ಥಿಕ ಭಧ್ರತೆಗಳನ್ನು ಜನರಿಗೆ ಕೊಡಮಾಡುವುದು ಸಾಧ್ಯವಾಗಿದೆ.ಹೀಗಾಗಿ ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಘಟಿತರಾಗಬೇಕಿದೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಗ್ರಾಮ ಪಂಚಾಯತಿ ಸಮಿತಿ ರಚನಾ ಸಭೆಯಲ್ಲಿ (ಪ್ರಾಜೆಕ್ಟ್ ಪ್ರಜಾಪ್ರತಿನಿಧಿ)ಭಾಗವಹಿಸಿ ಅವರು ಮಾತನಾಡಿದರು.

ಹಾಲಿ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಳ್ಳಿನ ಸರಮಾಲೆಯನ್ನೇ ಧರಿಸಿಕೊಂಡು ಜನರನ್ನು ಸತತ 8 ವರ್ಷಗಳಿಂದಲೂ ವಂಚಿಸುತ್ತಾ ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. ಹೀಗಾಗಿ ಮುಂಬರುವ ಜಿಪಂ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲ:
2018 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ವಾಮಮಾರ್ಗದಿಂದ ಪತನಗೊಳಿಸಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಹಾಲಿ ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ ಎಂದರು.

2020 ಹಾಗೂ 2021 ರ ಕೋವಿಡ್ ನಿರ್ವಹಣೆಯಲ್ಲಿಯೂ ನಿಸ್ಸೀಮ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ತುತ್ತಾಗಿರುವ ಬಿಜೆಪಿ ಸರ್ಕಾರ ವೆಂಟಿಲೇಟರ್ ಮಾಸ್ಕ್, ಪಿಪಿಇ ಕಿಟ್ ಹಾಗೂ ಔಷಧಿ ಖರೀದಿಗಳಲ್ಲಿ ಹಗರಣ ಮಾಡಿದ್ಧನ್ನು ಮಾಧ್ಯಮಗಳೇ ಬಿತ್ತರಿಸಿವೆ.ಈ ಕುರಿತು ಸದನದಲ್ಲಿ ತೀವ್ರ ಚರ್ಚೆಯೂ ನಡೆದಿದೆ.ಆದರೆ ಈ ಸರ್ಕಾರದಿಂದ ಯಾವುದೇ ಆರೋಪಕ್ಕೂ ಉತ್ತರವಿಲ್ಲದಂತಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಡೀ ದೇಶಕ್ಕೆ ಶಾಪವಾಗಿ ಪರಿಣಮಿಸಿದ್ದು,ಮೋದಿಯವರಿಗೆ ಎರಡೆರಡು ಸಲ ಬಹುಮತ ಕೊಟ್ಟ ತಪ್ಪಿಗೆ ಜನರೇ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.ಇತ್ತು ರಾಜ್ಯದಲ್ಲಿಯೂ ಒಳಜಗಳ,ನಾಯಕತ್ವ ದಮನ ಮಾಡುವ ಕುತಂತ್ರದ ರಾಜಕಾರಣ ಮಾಡುತ್ತಲೇ ಬಂದ ಬಿಜೆಪಿ ಹೈಕಮಾಂಡ್ ಕರ್ನಾಟಕ್ಕೆ ತೀವ್ರ ಅನ್ಯಾಯವೆಸಗಿದ್ದರೂ ಅದರ ವಿರುದ್ಧ ದನಿಯೆತ್ತುವ ಶಕ್ತಿ ಈಗ ಯಾವ ನಾಯಕರಲ್ಲೂ ಉಳಿದಿಲ್ಲದಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಕೊಡು-ಕೊಳ್ಳುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದಂತಾಗಿದ್ದು,ಹಾಲಿ ಬಿಜೆಪಿ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಲು ನೇರವಾಗಿ ಕೇಂದ್ರದ ಮೋದಿ ಸರ್ಕಾರವೇ ನೇರ ಕಾರಣವೆಂಬುದು ಈಗ ಗುಟ್ಟಾಗಿ ಉಳಿದಿಲ್ಲವೆಂದರು.ದುಮ್ಮಿ ಕಾಂಗ್ರೆಸ್ ಗ್ರಾಮ ಪಂಚಾಯತಿ ಸಮಿತಿಗೆ ಅಧ್ಯಕ್ಷರಾಗಿ ಡಿ.ಎಚ್.ಅಣ್ಣಪ್ಪ (ದುಮ್ಮಿ), ಉಪಾಧ್ಯಕ್ಷರುಗಳಾಗಿ ಈ.ಮಂಜಪ್ಪ (ಕಾಲ್ಕೆರೆ), ಟಿ.ಗೋವಿಂದಪ್ಪ (ದೊಗ್ಗನಾಳ್), ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್ (ಕಾಲ್ಕೆರೆ), ೀವೇಂದ್ರ ನಾಯ್ಕ್ (ಕಾಲ್ಕೆರೆ), ಕಾರ್ಯದರ್ಶಿಗಳಾಗಿ ದೇವರಾಜ್ ( ಅಂಜನಾಪುರ),
ತಿಮ್ಮಪ್ಪ (ದುಮ್ಮಿ ಗೊಲ್ಲರಹಟ್ಟಿ) ಇವರುಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಯ್ಕೆಯಾದ ಪದಾಧಿಕಾರಿಗಳಿಗೆ ಮಾಜಿ ಸಚಿವ ಎಚ್.ಆಂಜನೇಯ ಇವರು ಶಾಲು, ಹಾರ ಹಾಕಿ ಅಭಿನಂದಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಎ.ವಿ.ಉಮಾಪತಿ, ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ರಂಗಸ್ವಾಮಿ, ದುಮ್ಮಿ ಗ್ರಾಪಂ ಅಧ್ಯಕ್ಷಕ್ಷೆ ಸುಜಾತ ಲಕ್ಷ್ಮಣ್ ನಾಯ್ಕ್, ಉಪಾಧ್ಯಕ್ಷ ಸುರೇಶ್ ಗೌಡ್ರು, ಮಾಜಿ ಅಧ್ಯಕ್ಷ ರಾಜಣ್ಣ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

More Stories

Leave a Reply

Your email address will not be published. Required fields are marked *

You may have missed