Recent Posts

October 17, 2021

Chitradurga hoysala

Kannada news portal

ಕಾಲರಾ ಕಾಲದಿಂದ ಕೊರೋನಾ ಕಾಲದವರೆಗೆ ಸಲ್ಲಿಸಿದ ವಿಶೇಷ ಸೇವೆಗೆ ಫ್ಲಾರೆನ್ಸ್ ನೈಟಿಂಗೇಲ್ ರಾಷ್ಟ್ರೀಯ ಪ್ರಶಸ್ತಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಕೆ .ಗಾಯಿತ್ರಿ ದೇವಿ ಅವರ ೩೪ ವರ್ಷಗಳ ಸುಧೀರ್ಘ ಸೇವೆಗೆ ಸಂದ ಗೌರವ

1 min read

ಕಾಲರಾ ಕಾಲದಿಂದ ಕೊರೋನಾ ಕಾಲದವರೆಗೆ ಸಲ್ಲಿಸಿದ ವಿಶೇಷ ಸೇವೆಗೆ ಫ್ಲಾರೆನ್ಸ್ ನೈಟಿಂಗೇಲ್ ರಾಷ್ಟ್ರೀಯ ಪ್ರಶಸ್ತಿ.

ಹಿರಿಯ ಮಹಿಳಾ ಆರೋಗ್ಯ ಸಹಾಯಕಿ     ಕೆ .ಗಾಯಿತ್ರಿ ದೇವಿ ಅವರ ೩೪ ವರ್ಷಗಳ ಸುಧೀರ್ಘ ಸೇವೆಗೆ ಸಂದ ಗೌರವ.

ದಾವಣಗೆರೆ : ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷಯರೋಗ ನಿರ್ಮೂಲನಾ ಕೇಂದ್ರದ ಹಿರಿಯ ಆರೋಗ್ಯ ಮಹಿಳಾ ಸಹಾಯಕಿಯಾದ ಕೆ. ಗಾಯತ್ರಿ ದೇವಿ ಅವರಿಗೆ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ನವರು ಇವರ ೩೪ ವರ್ಷಗಳ ಸುಧೀರ್ಘ ಸೇವೆಯನ್ನು ಪರಿಗಣಿಸಿ ೨೦೨೦ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಈ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರು ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ೧೫ ಪ್ರಧಾನ ಮಾಡಿದ್ದಾರೆ. ಕಾಲರಾ ಬಂದ ಕಾಲದಿಂದ ಹಿಡಿದು ಪ್ರಸ್ತುತ ಕೊರೋನಾ ಕಾಲದವರೆಗೂ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸಿದ ಶ್ರೀಮತಿ ಕೆ ಗಾಯಿತ್ರಿದೇವಿಯವರು ದಲಿತ ಚಳುವಳಿಯ ನೇತಾರ ಪ್ರೊ.ಬಿ. ಕೃಷ್ಣಪ್ಪನವರ ಶಿಷ್ಯ ಹಾಗೂ ರಾಜ್ಯ ದಲಿತ ಕಲಾ ಮಂಡಳಿಯ ಮಾಜಿ ಸಂಚಾಲಕ ಕಂಪಾಲಿ ತಿಪ್ಪೆಸ್ವಾಮಿಯವರ ಪತ್ನಿಯಾಗಿದ್ದಾರೆ. ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮದಕರಿ ಪುರದವರಾಗಿದ್ದು,ಈ ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ಮಾದಿಗ ಜನಾಂಗದ ಪ್ರಥಮ ಮಹಿಳೆ ಎನಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ತಳುಕು ಪ್ರಾಥಮಿಕ ಆರೋಗ್ಯ ಕೇಂದ್ರ, ನಾಯಕನಹಟ್ಟಿ, ಮುಂತಾದ ಕಡೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ತಾಯಿ ಮಕ್ಕಳ ಆರೋಗ್ಯ, ಗರ್ಭಿಣಿ ಆರೈಕೆ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ,ಶಾಲಾ ಮತ್ತು ಅಂಗನವಾಡಿ ಕಾರ್ಯಕ್ರಮ ಹಾಗೂ ಟಿಬಿ ರೋಗಿಗಳ ನೋಂದಣಿ ಮತ್ತು ಚಿಕಿತ್ಸೆ, ಕಾಲರಾ ಇನ್ಕ್ಯುಬೇಷನ್ ಕಾರ್ಯಕ್ರಮ, ಮಲೇರಿಯಾ ರೋಗಗಳ ಸಮೀಕ್ಷೆ ಮತ್ತು ಆರೈಕೆ, ಜಂತುಹುಳ ನಿವಾರಣಾ ಕಾರ್ಯಕ್ರಮ, ಗ್ರಾಮೀಣ ಮತ್ತು ಕೊಳಚೆ ಪ್ರದೇಶಗಳ ಜನರ ಆರೋಗ್ಯ ಸುಧಾರಣಾ ಕಾರ್ಯಕ್ರಮ , ಆರೋಗ್ಯ ಸಂಬಂಧಿ ಸಭೆ ಹಾಗೂ ಸಂವಾದ ಕಾರ್ಯಕ್ರಮಗಳ ನಿರ್ವಹಣೆ ಮಾಡಿದ ಶ್ರೇಯಸ್ಸು ಶ್ರೀಮತಿ ಗಾಯತ್ರಿ ದೇವಿ ಅವರಿಗೆ ಸಲ್ಲುತ್ತದೆ.
೨೦೦೬ ರಲ್ಲಿ ಚಳ್ಳಕೆರೆ ರೋಟರಿ ಕ್ಲಬ್ ಇವರನ್ನು ಸನ್ಮಾನಿಸಿದೆ ೨೦೧೯ ರಲ್ಲಿ ಬೆಂಗಳೂರಿನ ನ್ಯಾಷನಲ್ ಪ್ರೆಸ್ ಕೌನ್ಸಿಲ್ ನವರು ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿದ್ದಾರೆ.೨೦೨೦ ರಲ್ಲಿ ಜಿಲ್ಲಾಡಾಳಿತವು ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

More Stories

Leave a Reply

Your email address will not be published. Required fields are marked *

You may have missed