April 19, 2024

Chitradurga hoysala

Kannada news portal

ಪುರಸಭೆಯ ಪೌರಕಾರ್ಮಿಕರು – ಇನ್ನಿತರೆ ಸಿಬ್ಬಂದಿಗಳಿಗೆ ಸನ್ಮಾನ. ಪೌರಕಾರ್ಮಿಕರ ಸ್ವಚ್ಛತಾ ಸೇವೆ ಶ್ಲಾಘನಿಯ ಬ್ರಹ್ಮಕುಮಾರಿ ಸುಮಿತ್ರಕ್ಕ

1 min read

ಪುರಸಭೆಯ ಪೌರಕಾರ್ಮಿಕರು – ಇನ್ನಿತರೆ ಸಿಬ್ಬಂದಿಗಳಿಗೆ ಸನ್ಮಾನ. ಪೌರಕಾರ್ಮಿಕರ ಸ್ವಚ್ಛತಾ ಸೇವೆ ಶ್ಲಾಘನಿಯ
ಬ್ರಹ್ಮಕುಮಾರಿ ಸುಮಿತ್ರಕ್ಕ

ಹೊಳಲ್ಕೆರೆ:೨೩
ಹೊಳಲ್ಕೆರೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ, ಇವರು ಪೌರಕಾರ್ಮಿಕ ದಿನಾಚರಣೆ,ಪ್ರಯುಕ್ತ ಹೊಳಲ್ಕೆರೆ ಪುರಸಭೆ ಪೌರಕಾರ್ಮಿಕರಿಗೆ ಸನ್ಮಾನ ಮಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ, ಹೊಳಲ್ಕೆರೆ ಇವರ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಆಯೋಜಿಸಲಾಗಿತ್ತು. ಬ್ರಹ್ಮಕುಮಾರಿ ಸುಮಿತ್ರಕ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಳಲ್ಕೆರೆ ಪೌರಕಾರ್ಮಿಕರ ಸೇವೆಯನ್ನು ಅಭಿನಂದಿಸಿ ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷವೂ ಪೌರಕಾರ್ಮಿಕ ದಿನಾಚರಣೆಯನ್ನು ಕೈಗೊಂಡು ಪೌರಕಾರ್ಮಿಕರಿಗೆ ಸನ್ಮಾನ ಮಾಡುತ್ತಿದ್ದಾರೆ. ಈ ಬಾರಿ ಸರ್ಕಾರ ನಿಗದಿಪಡಿಸಿದ ದಿನಾಂಕ: 23/09/2021ರಂದೇ ಪೌರಕಾರ್ಮಿಕರ ದಿನಾಚರಣೆ ಕೈಗೊಂಡಿದ್ದು ವಿಶೇಷವಾಗಿತ್ತು. ಎಂದು ಹೇಳಿದರು.

ಹೊಳಲ್ಕೆರೆ ಪುರಸಭೆಯ ಅಧ್ಯಕ್ಷ ಆರ್ ಎ ಅಶೋಕ್, ಉಪಾಧ್ಯಕ್ಷ ಕೆ ಸಿ ರಮೇಶ್,ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ,ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ಪುರಸಭೆ ಸದಸ್ಯರುಗಳಾದ ಬಿ ಎಸ್ ರುದ್ರಪ್ಪ, ಸೈಯದ್ ಸಜೀಲ್, ಹೆಚ್ ಆರ್ ನಾಗರತ್ನವೇದಮೂರ್ತಿ, ಸವಿತಾ ನರಸಿಂಹ ಖಾಟ್ರೋತ್, ಶ್ರೀಮತಿ ಮಮತ ಜಯಸಿಂಹ ಖಾಟ್ರೋತ್, ವಸಂತ ಆರ್ ರಾಜಪ್ಪ, ಶಬೀನ ಅಶ್ರಫುಲ್ಲಾ, ಎಲ್ ವಿಜಯಸಿಂಹ ಖಾಟ್ರೋತ್, ಸೈಯದ್ ಮನ್ಸೂರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *