Recent Posts

October 17, 2021

Chitradurga hoysala

Kannada news portal

ನಾಗರಿಕರು ಸ್ವಚ್ಛ ಸಾಕ್ಷರರಾಗಿ ಕೈಜೋಡಿಸಿದರೆ ಹೊಳಲ್ಕೆರೆ ಪಟ್ಟಣವು ಮಾದರಿ ಸ್ವಚ್ಛ ಪಟ್ಟಣವಾಗಬಲ್ಲದು ಎಂದು ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ಅಭಿಪ್ರಾಯ ಪಟ್ಟರು.

1 min read

ನಾಗರಿಕರು ಸ್ವಚ್ಛ ಸಾಕ್ಷರರಾಗಿ ಕೈಜೋಡಿಸಿದರೆ ಹೊಳಲ್ಕೆರೆ ಪಟ್ಟಣವು ಮಾದರಿ ಸ್ವಚ್ಛ ಪಟ್ಟಣವಾಗಬಲ್ಲದು ಎಂದು ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ಅಭಿಪ್ರಾಯ ಪಟ್ಟರು.

 

ಹೊಳಲ್ಕೆರೆ:

“ಸ್ವಾತಂತ್ರ್ಯದ ಅಮೃತ ಮಹೋತ್ಸವ” ಹಾಗೂ “ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ”ಯ ಅಂಗವಾಗಿ ಪುರಸಭೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹೊಳಲ್ಕೆರೆ ಪಟ್ಟಣದಲ್ಲಿ ಹಮ್ಮಿಕೊಳ್ಳುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.

ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷ ಪೂರೈಸಿರುವ ಸುಸಂದರ್ಭದಲ್ಲಿ “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯ ಭಾರತ ಸರ್ಕಾರ ಹಾಗೂ ಮಾನ್ಯ ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು, ಮಾನ್ಯ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ರವರ ಸೂಚನೆ ಮೇರೆಗೆ ಹೊಳಲ್ಕೆರೆ ಪುರಸಭೆ ದಿನಾಂಕ: 29.09.2021ರಿಂದ ದಿನಾಂಕ: 02.10.2021ರವರೆಗೆ ವಿವಿಧ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಿನಾಂಕ: 29.09.2021ರಂದು ತ್ಯಾಜ್ಯ ವಿಂಗಡಣೆ ಅಮೃತ ದಿವಸ ಎಂಬ ಕಾರ್ಯಕ್ರಮದಡಿ ಹೊಸದುರ್ಗ ರಸ್ತೆಯಲ್ಲಿ ತ್ಯಾಜ್ಯ ವಿಂಗಡಣೆಯ ಅಮೃತ ದಿವಸ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಸ್ವಚ್ಛತೆಯ ಹಾಗೂ ತ್ಯಾಜ್ಯ ವಿಂಗಡಣೆಯ ಮಹತ್ವವನ್ನು ತಿಳಿಸಲಾಯಿತು. ದಿನಾಂಕ: 30.09.2021ರಂದು ಜನರ ಪಾಲುದಾರಿಕೆಯೊಂದಿಗೆ ಸ್ವಚ್ಛ ಸಾರ್ವಜನಿಕ ಶೌಚಾಲಯಗಳ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕ ಶೌಚಾಲಯಗಳ ಸದ್ಬಳಕೆಯ ಬಗ್ಗೆ ಹಾಗೂ ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವದ ಬಗ್ಗೆ ಅರಿವು ಮೂಡಿಸಲಾಯಿತು. ದಿನಾಂಕ: 01.10.2021ರಂದು ಹೊಳಲ್ಕೆರೆ ಪುರಸಭೆಯ ಪೌರಕಾರ್ಮಿಕರ ಸೇವೆಯನ್ನು ಅಭಿನಂದಿಸುವ ಸಲುವಾಗಿ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ದಿನಾಂಕ: 02.10.2021ರಂದು ಮಹಾತ್ಮ ಗಾಂಧೀಜಿಯವರ ಜನ್ಮ ದಿನಚಾಚರಣೆ ಸಂದರ್ಭದಲ್ಲಿ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಹಕರಿಸಿದ ವರ್ತಕರುಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು ಮತ್ತು ಪಟ್ಟಣದ ಸಿದ್ದಪ್ಪ ಬಡಾವಣೆಯ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಸಹ ನೆರವೇರಿಸಲಾಯಿತು.

ಹೊಳಲ್ಕೆರೆ ಪುರಸಭೆಯ ಪುರಸಭೆಯ ಅಧ್ಯಕ್ಷ ಆರ್. ಎ. ಅಶೋಕ್, ಉಪಾಧ್ಯಕ್ಷ ಕೆ. ಸಿ ರಮೇಶ್, ಪುರಸಭೆಯ ಎಲ್ಲಾ ಸದಸ್ಯರುಗಳು, ಪುರಸಭೆಯ ನಾಗರಿಕರು, ವರ್ತಕರು, ಶಾಲಾ ಕಾಲೇಜು ಸಂಘ ಸಂಸ್ಥೆಗಳು, ಮುಖ್ಯವಾಗಿ ಪೌರಕಾರ್ಮಿಕರು ಮತ್ತು ಇತರೆ ಸಿಬ್ಬಂದಿ ಇವರೆಲ್ಲರೂ ಸ್ವಚ್ಛತೆಯ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಹೊಳಲ್ಕೆರೆ ಪಟ್ಟಣವು ಹಂತ ಹಂತವಾಗಿ ಸ್ವಚ್ಛತೆಯ, ತ್ಯಾಜ್ಯ ಸಂಸ್ಕರಣೆಯಲ್ಲಿ ಪ್ರಗತಿ ಕಾಣುತ್ತಿದ್ದು ಮುಂಬರುವ ದಿನಗಳಲ್ಲಿ ಪಟ್ಟಣದ ಎಲ್ಲಾ ನಾಗರಿಕರು ಸ್ವಚ್ಛ ಸಾಕ್ಷರರಾಗಿ ತಮ್ಮ ಕೈಜೋಡಿಸಿದಲ್ಲಿ ಹೊಳಲ್ಕೆರೆ ಪಟ್ಟಣವು ಮಾದರಿ ಸ್ವಚ್ಛ ಪಟ್ಟಣವಾಗಬಲ್ಲದು ಎಂದು ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

More Stories

Leave a Reply

Your email address will not be published. Required fields are marked *

You may have missed