Recent Posts

October 16, 2021

Chitradurga hoysala

Kannada news portal

ಏಳುನೂರು ಕಲಾವಿದರ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದೇನೆ. ಹಾಡು, ನೃತ್ಯ, ಕುಣಿತ ಇವುಗಳಷ್ಟೆ ಜಾನಪದವಲ್ಲ. ಪರಂಪರೆಯ ಜ್ಞಾನ, ಹಿರಿಯರ ಜ್ಞಾನ, ದೇಶೀಜ್ಞಾನವೂ ಆಗಿರುವ ಜಾನಪದ ಕಲೆ ದಾಖಲೀಕರಣವಾಗಬೇಕು ಡಾ.ಜೆ.ಕರಿಯಪ್ಪ ಮಾಳಿಗೆ

1 min read

ಏಳುನೂರು ಕಲಾವಿದರ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದೇನೆ. ಹಾಡು, ನೃತ್ಯ, ಕುಣಿತ ಇವುಗಳಷ್ಟೆ ಜಾನಪದವಲ್ಲ. ಪರಂಪರೆಯ ಜ್ಞಾನ, ಹಿರಿಯರ ಜ್ಞಾನ, ದೇಶೀಜ್ಞಾನವೂ ಆಗಿರುವ ಜಾನಪದ ಕಲೆ ದಾಖಲೀಕರಣವಾಗಬೇಕು ಡಾ.ಜೆ.ಕರಿಯಪ್ಪ ಮಾಳಿಗೆ

ಚಿತ್ರದುರ್ಗ:

ಪಾರಂಪರಿಕವಾದ ಜ್ಞಾನ ಸಂಪತ್ತು ಜನಪದ ಕಲೆ, ಸಂಗೀತ, ಸಾಹಿತ್ಯ ಉಳಿಯಬೇಕಾದರೆ ಸರ್ಕಾರ ಸಂಘ ಸಂಸ್ಥೆಗಳ ಸಹಕಾರ ಅತಿ ಮುಖ್ಯ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.
ಮದಕರಿನಾಯಕ ಸಾಂಸ್ಕೃತಿಕ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಶಾಖೆ ಇವುಗಳ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‌ನಲ್ಲಿ ನಡೆದ ನೃತ್ಯ ಸಂಗೀತೋತ್ಸವವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೊರೋನಾ ಸಂಕಷ್ಟದಲ್ಲಿ ಕಳೆದ ಎರಡು ವರ್ಷಗಳಿಂದಲೂ ಕಲಾವಿದರು, ತತ್ವಪದಕಾರರು, ತೊಂದರೆಯಲ್ಲಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಕಲೆಗಳು ಸ್ಥಬ್ದವಾಗಿವೆ. ದೇಶ ಸುತ್ತುವುದು, ಜ್ಞಾನ ಸಂಪಾದಿಸುವುದು ಎರಡು ಜನಪದ ಕಲೆ, ಸಂಗೀತ, ಸಾಹಿತ್ಯದಲ್ಲಿದೆ. ಮೌಖಿಕ ಪರಂಪರೆಯಲ್ಲಿದ್ದ ಜನಪದ ಕಲೆ ಈಗ ಪುಸ್ತಕ ರೂಪದಲ್ಲಿದೆ. ಆಧುನಿಕರಣ, ಜಾಗತೀಕರಣದಲ್ಲಿ ಜನಪದ ಕಲೆ ನಾಶವಾಗುತ್ತದೆ ಎನ್ನುವ ಭಯ ಬೇಡ. ಏಳುನೂರು ಕಲಾವಿದರ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದೇನೆ. ಹಾಡು, ನೃತ್ಯ, ಕುಣಿತ ಇವುಗಳಷ್ಟೆ ಜಾನಪದವಲ್ಲ. ಪರಂಪರೆಯ ಜ್ಞಾನ, ಹಿರಿಯರ ಜ್ಞಾನ, ದೇಶೀಜ್ಞಾನವೂ ಆಗಿರುವ ಜಾನಪದ ಕಲೆ ದಾಖಲೀಕರಣವಾಗಬೇಕು ಎಂದು ಹೇಳಿದರು.
ಕಲೆ, ಸಾಹಿತ್ಯ, ಜನಪದಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ದಾಖಲೆಯಾಗುತ್ತಿರುವುದು ಸಂತೋಷದ ಸಂಗತಿ. ಮೊದಲು ತಾತ್ಸಾರಕ್ಕೊಳಪಟ್ಟಿದ್ದ ಜಾನಪದ ಕ್ಷೇತ್ರ ಈಗ ಸಂಶೋಧನೆಗೆ ಮುಕ್ತ ವೇದಿಕೆಯನ್ನು ಒದಗಿಸಿದೆ. ಆಧುನಿಕತೆಗೆ ತಕ್ಕಂತೆ ಕಲೆ, ಸಾಹಿತ್ಯ, ಜನಪದ ಹೊಸ ರೂಪ ಪಡೆದುಕೊಂಡು ಗಟ್ಟಿಯಾಗುತ್ತಿದೆ. ಆಧುನಿಕತೆ ಒದಗಿಸಿಕೊಂಡು ಜನಪದ ಮರು ಹುಟ್ಟು ಪಡೆದುಕೊಳ್ಳುತ್ತಿದೆ. ಇಂತಹ ಕಲೆಗಳು ಉಳಿಯಬೇಕಾದರೆ ಒಳ್ಳೆಯ ಮನಸ್ಸುಗಳು ಬೇಕು. ಕಲೆ, ಕಲಾವಿದರನ್ನು ಯಾರು ಗೌರವಿಸುತ್ತಾರೋ ಅಂತಹವರು ಜ್ಞಾನ ವೃದ್ದಿಸಿಕೊಳ್ಳುತ್ತಾರೆ ಎಂದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಎ.ನಾಗರಾಜ್ ಮಾತನಾಡಿ ಸಂಗೀತ, ಸಾಹಿತ್ಯ, ನೃತ್ಯ, ಜಾನಪದ ಇಲ್ಲದಿದ್ದರೆ ಬದುಕು ಜಡವಾಗಿಬಿಡುತ್ತದೆ. ವೈಜ್ಞಾನಿಕ ಯುಗದಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿರುವುದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಕಲೆ, ಸಾಹಿತ್ಯ, ಸಂಗೀತ, ಜನಪದ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನಿಟ್ಟುಕೊಂಡಿವೆ. ಮಾನಸಿಕ, ದೈಹಿಕ ಆಯಾಸ ನಿವಾರಿಸಿಕೊಳ್ಳಲು ಕಲೆ ಮನುಷ್ಯನಿಗೆ ಅತ್ಯವಶ್ಯಕವಾಗಿ ಬೇಕು. ಈಗಿನ ಹಾಗೂ ಮುಂದಿನ ಪೀಳಿಗೆಗೆ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ತಿಪ್ಪೇಸ್ವಾಮಿ, ಹಿರಿಯ ಕಲಾವಿದ ಮೂರ್ತಪ್ಪ, ಬ್ಯಾರಮಡಗು ವಾಲ್ಮೀಕಿ ನಗರ ಹಿರಿಯೂರಿನ ಶನೈಶ್ವರಸ್ವಾಮಿ ದೇವಸ್ಥಾನದ ಅರ್ಚಕ ರಾಮಣ್ಣಸ್ವಾಮಿ, ರಂಗಭೂಮಿ ಕಲಾವಿದ ವೀರಾಚಾರಿ ಬಡಿಗೇರು, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ವೇದಿಕೆಯಲ್ಲಿದ್ದರು.
ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ತತ್ವಪದಗಳು, ಭರತನಾಟ್ಯ, ರಂಗಗೀತೆಗಳನ್ನು ಏರ್ಪಡಿಸಲಾಗಿತ್ತು.

More Stories

Leave a Reply

Your email address will not be published. Required fields are marked *

You may have missed