April 24, 2024

Chitradurga hoysala

Kannada news portal

ಕಾಂಗ್ರೆಸ್ ಪಕ್ಷದವರೇ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿದ್ದಾರೆ ಎನ್ನುವ ಆರೋಪಗಳಿಗೆ ಈ ಘಟನೆ ಮುನ್ನುಡಿಯಾಗಿದೆ. ಇಬ್ಬರು ಉತ್ತಮ ಸ್ನೇಹಿತರು

1 min read

ಕಾಂಗ್ರೆಸ್ ಪಕ್ಷದವರೇ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿದ್ದಾರೆ ಎನ್ನುವ ಆರೋಪಗಳಿಗೆ ಈ ಘಟನೆ ಮುನ್ನುಡಿಯಾಗಿದೆ.

ಚಿತ್ರದುರ್ಗ :

ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸೀಗರೇ ಕಾರಣ ಎನ್ನುವ ನುಡಿಗೆ ಹಿರೆಗುಂಟನೂರು ಘಟನೆ ಸಾಕ್ಷಿಯಾದಂತೆ ಆಗಿದೆ.ಇಷ್ಟು ದಿನ ಸುಮ್ಮನಿದ್ದು ಚುನಾವಣೆ ಹತ್ತಿರ ಬರುತ್ತಿಂದಂತೆಯೇ, ಏಕೆ ಈ ತರಹದ ತಗಾದೆ ನುಸುಳಿತು ಎನ್ನುವುದನ್ನು ಸ್ವತಃ ಜಿ.ಎಸ್.ಮಂಜುನಾಥ್ ಮತ್ತು ಆಂಜನೇಯ ಅವರು ಹೇಳಬೇಕಾಗುತ್ತದೆ?. ಈ ತರಹದ ಕಾರಣಗಳಿಂದಲೇ ಕಾಂಗ್ರೆಸ್ ಪಕ್ಷದವರೇ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿದ್ದಾರೆ ಎನ್ನುವ ಆರೋಪಗಳಿಗೆ ಈ ಘಟನೆ ಮುನ್ನುಡಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಇಬ್ಬರು ನಾಯಕರು ಆತ್ಮಾವಲೋಕನ ಮಾಡಿಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆಯೂ ಜರೂರಿದೆ.

ಪವರ್ ಪುಲ್ ಆಂಜನೇಯ:

ಇನ್ನೂ ಮಾಜಿ ಸಚಿವ ಹೆಚ್ ಆಂಜನೇಯ ನವರು ರಾಜ್ಯದ ದೊಡ್ಡ ಮಟ್ಟದ ಸಂಘಟನಾ ಚತುರ, ಅವರಿಗೆ ಅವರದೇ ಆದ ಶಕ್ತಿ ಇದೆ ,ಅದು ರಾಜ್ಯ ಕಾಂಗ್ರೆಸ್ ವರಿಷ್ಠರಿಗೆ ತಿಳಿದಿದೆಯೋ ಇಲ್ಲವೋ ದೇವರೇ ಕಾಣ!, ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ತನ್ನದೇ ಆದ ಪ್ರಭಾವ,ಹಾಗೂ ಸೋಲು, ಗೆಲುವಿನ ಲೆಕ್ಕಾಚಾರ ಗಳನ್ನು ಅರಿತಿರುವ ಮತ್ತು ಲೆಕ್ಕಾಚಾರಗಳನ್ನು ತಿರುಗುಮುರುಗು ಮಾಡುವ ಸಾಮರ್ಥ್ಯದ ಜ್ಞಾನ ಮತ್ತು ಶಕ್ತಿಯನ್ನು ಹೊಂದಿರುವ ನಾಯಕ ಆಂಜನೇಯ. ಇವತ್ತಿನ ಎಷ್ಟೋ “ಪವರ್” ಪುಲ್ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಆಂಜನೇಯರವರ “ಪವರ್” ತಿಳಿದೇ ಇದೆ.ಆದರೂ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು, ಸೇರಿದಂತೆ ಅನೇಕರು ಅವರನ್ನ ವ್ಯವಸ್ಥಿತವಾಗಿ ಮೂಲೆ ಗುಂಪು ಮಾಡುವ ಕನಸು ಕಾಣುತ್ತಿದ್ದಾರೆ.ಅದು ಅವರು ಕನಸು ಕಂಡಷ್ಟು ಸುಲಭವಲ್ಲ…..!

ಇಬ್ಬರು ಉತ್ತಮ ಸ್ನೇಹಿತರು

ಹಿರೆಗುಂಟನೂರು ಘಟನೆಯ ಕೇಂದ್ರ ಬಿಂದುಗಳಾದ ಮಾಜಿ ಸಚಿವ ಹೆಚ್, ಆಂಜನೇಯ ಮತ್ತು ಭೀಮಸಮುದ್ರದ ಜಿ ಎಸ್ ಮಂಜುನಾಥ್ ಅವರಿಬ್ಬರ ಉತ್ತಮ ಸ್ನೇಹಿತರೇ, ಅವರನ್ನು ಬಲ್ಲ ಅನೇಕರಿಗೆ ಈ ಘಟನೆ ದಿಗ್ಬ್ರಮೆಯುಂಟು ಮಾಡುತ್ತದೆ.ಕಾರಣ ಅವರಿರ್ವರೂ ಬಹುದಿನದ ಗೆಳೆಯರು,ಮಾತ್ರವಲ್ಲದೆ ಮಂಜಣ್ಣ ನವರ ತಂದೆಯ ಕಾಲದಿಂದಲೂ ಅವರಿಗೆ ಪ್ರೀತಿ ಪಾತ್ರರಾಗಿದ್ದರು.ಆದರೂ ಈ ರಾಜಕೀಯ ವಾಗ್ವಾದವೂ ಪ್ರಾಜೆಕ್ಟ್ ಪ್ರತಿನಿಧಿ ಆಯ್ಕೆ ಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಮಂಜುನಾಥ್ ತಮ್ಮ ಅಸಮಾಧಾನವನ್ನು ಗೆಳೆಯ ಆಂಜನೇಯ ಅವರನ್ನು ತೆಗಳುವ ಮೂಲಕ ಹೊರಹಾಕಿದ್ದಾರೆ, ಅದೇನೆ ಇರಲಿ ಈ ಘಟನೆಗೆ ಮೂಲ ಕಾರಣ ಸಿಗುವುದು ೨೦೧೮ ರಲ್ಲಿ ಆಂಜನೇಯ ನನ್ನ ಪರವಾಗಿ ನಿಲ್ಲಲಿಲ್ಲ ಎಂಬುದು ರಾಜಕಾರಣ ಬಲ್ಲವರಿಗೆ ತಿಳಿಯುತ್ತದೆ. ಮಂಜುನಾಥ್ ಅವರ ವಾದ ಇದನ್ನು ಬಿಟ್ಟರೆ ಬೆರೇನೂ ಇಲ್ಲ,ಮತ್ತು ಅವರಿಬ್ಬರು ಗೆಳೆಯರು ಎಂಬುದನ್ನು ಮರೆಯುವಂತೆಯೂ ಇಲ್ಲ.

About The Author

Leave a Reply

Your email address will not be published. Required fields are marked *