March 28, 2024

Chitradurga hoysala

Kannada news portal

ಜನಪದ ಕಲೆ ಗ್ರಾಮೀಣರ ಬದುಕಲ್ಲಿ ಹಾಸುಹೊಕ್ಕಾಗಿ ಜನರ ಜೀವನಾಡಿಯಾಗಿದೆ ಎಂದು ಹಿರಿಯ ರಂಗ ಕಲಾವಿದ ಹಾಗೂ ನಾಟಕಕಾರ ಟಿ.ಎಸ್. ತಿಪ್ಪೇಸ್ವಾಮಿ ಅಭಿಪ್ರಾಯ

1 min read

ಜನಪದ ಕಲೆ ಗ್ರಾಮೀಣರ ಬದುಕಲ್ಲಿ ಹಾಸುಹೊಕ್ಕಾಗಿ ಜನರ ಜೀವನಾಡಿಯಾಗಿದೆ ಎಂದು ಹಿರಿಯ ರಂಗ ಕಲಾವಿದ ಹಾಗೂ ನಾಟಕಕಾರ ಟಿ.ಎಸ್. ತಿಪ್ಪೇಸ್ವಾಮಿ ಅಭಿಪ್ರಾಯ

ಮೊಳಕಾಲ್ಮೂರು –
ಜನಪದ ಕಲೆ ಗ್ರಾಮೀಣರ ಬದುಕಲ್ಲಿ ಹಾಸುಹೊಕ್ಕಾಗಿ ಜನರ ಜೀವನಾಡಿಯಾಗಿದೆ ಎಂದು ಹಿರಿಯ ರಂಗ ಕಲಾವಿದ ಹಾಗೂ ನಾಟಕಕಾರ ಟಿ.ಎಸ್. ತಿಪ್ಪೇಸ್ವಾಮಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಕುವೆಂಪು ಕಲಾ ಮಂದಿರದಲ್ಲಿ ಸೋಮವಾರ ಸಂಜೆ ಮಾಯವತಿ ಮಹಿಳಾ ಸಾಂಸ್ಕೃತಿಕ ಸಂಘ ಚಿಕ್ಕೋಬನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನಪದ ಕಲೆ ಜೀವಂತಿಕೆಯನ್ನು ಉಳಿಸಿಕೊಂಡಿರುವವರು ನಮ್ಮ ಹಳ್ಳಿಗಾಡಿನ ಅಕ್ಷರದ ಅರಿವು ಇಲ್ಲದವರು ಆದರೆ ಇವರಲ್ಲಿನ ಬದುಕಿನ ಜ್ಞಾನ ಅನುಭವದ‌ ರೀತಿ ನೀತಿ ಯಾವ ವಿಶ್ವ ವಿದ್ಯಾಲಯದಲ್ಲಿ ಸಿಗದ ಉತ್ಕೃಷ್ಟ ಮೌಖಿಕ ಜ್ಞಾನ ಪರಂಪರೆ ನಮ್ಮ ಜನಪದರಲ್ಲಿ ಅಡಕವಾಗಿತ್ತು ಇಂತಹ ಸಮೃದ್ಧ ಸಂಸ್ಕೃತಿ ನಿಧಾನವಾಗಿ ನಮ್ಮಿಂದ ದೂರ ಸರಿಯುತ್ತಿದೆ ಯುವಜನರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ದೇಸಿ ಕಲೆಯನ್ನು ಕಡೆಗಣಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಮಾಯವತಿ ಮಹಿಳಾ ಸಾಂಸ್ಕೃತಿಕ ಸಂಘ ಜಾನಪದ ಉತ್ಸವ ನಡೆಸುವ ಮೂಲಕ ಜನಪದ ಕಲೆಯನ್ನು ಉಳಿಸುವ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.
ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಓ.ಮುರಾರ್ಜಿ ಮಾತನಾಡಿ ಕಲಾವಿದರು ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಆತ್ಮವಿಶ್ವಾಸ ಬೆಳಸಿಕೊಳ್ಳಬೇಕೆಂದರು.
ಕಲಾಸೇವೆಯಲ್ಲಿ ತೊಡಗಿರುವ ಹಿರಿಯ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎರಡು ಸಾವಿರ ರೂಗಳ ಮಾಶಾಸನ ನೀಡುತ್ತಿದ್ದು ಕಲಾವಿದರು ತಮ್ಮ ಕಲಾ ಸೇವೆಯ ಪೋಟೋ, ಕರಪತ್ರ ಹಾಗೂ ಪತ್ರಿಕಾ ವರದಿಗಳ ದಾಖಲೆಗಳನ್ನು ಸಂಗ್ರಹಿಸಿಕೊಂಡು ಮಾಶಾಸನದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಮಲ್ಲೇಶ್ ಮತ್ತು ತಂಡ ಕೋಲಾಟ, ಜಗಲೂರಯ್ಯ ಮತ್ತು ತಂಡ ಭಜನೆ, ಮಾರಕ್ಕ ಮತ್ತು ತಂಡ ತತ್ವಪದ, ಬಸಕ್ಕ ಮತ್ತು ತಂಡ ಸೋಬಾನೆ ಪದ, ಕೋನಸಾಗರ ಶಿವು ಮತ್ತು ತಂಡ ಜನಪದ ಗೀತೆಗಳು, ಯರ್ರೇನಹಳ್ಳಿ ಕಲ್ಲೇಶ್ ಮತ್ತು ತಂಡ ರಂಗ ಗೀತೆಗಳು, ಎಂ.ಎನ್. ಮಹೇಶ್ ಮತ್ತು ತಂಡ ವಚನ ಸಂಗೀತ, ಡಿ.ಗಂಗಪ್ಪ ಮತ್ತು ತಂಡ ಜಾಗೃತಿ ಗೀತೆಗಳು, ಎನ್. ಎಸ್. ಮಹಂತೇಶ್ ಮತ್ತು ತಂಡ ಸುಗ್ಗಿಯ ಪದಗಳು ಕಾರ್ಯಕ್ರಮ ನಡೆಸಿಕೊಟ್ಟರು.
ಗ್ರಾ.ಪಂ.ಸದಸ್ಯರಾದ ಗೊಂಚಿಗಾರ್ ಹೇಮಣ್ಣ, ಓ.ಕರಿಬಸಪ್ಪ, ಜಿ.ಪಂ.ಮಾಜಿ ಸದಸ್ಯೆ ಮಾರಕ್ಕ, ದಳಪತಿ ಸೂರಯ್ಯ, ಶಿಕ್ಷಕ ಓ.ವಸಂತ ಕುಮಾರ್, ಮುಖಂಡರಾದ ಪಿ.ವಿ.ಶರಣಪ್ಪ, ಕೆ.ಟಿ.ಶಿವಕುಮಾರ್, ಎಂ.ಆರ್.ರಾಜಣ್ಣ, ಹೆಚ್.ಎಂ.ರವಿಕುಮಾರ್, ಕೆ.ಬಿ.ಮಲ್ಲಿಕಾರ್ಜುನ, ಜಿ.ಮೇಘರಾಜ, ಮತ್ತಿತರರು ಉಪಸ್ಥಿತರಿದ್ದರು.
ಕೀಬೋರ್ಡ್ ಹೊಸಹಳ್ಳಿ ಬೋರಪ್ಪ, ತಬಲಾ ಡಿ.ಬಿ.ಓಬಯ್ಯ, ರಿದಂ ಪ್ಯಾಡ್ ಬಿ.ಗುರುಮೂರ್ತಿ ಸಂಗೀತ ಬಳಗದಲ್ಲಿದ್ದರು.
ಕಲಾವಿದ ಡಿ.ಬಸಪ್ಪ ಸ್ವಾಗತಿಸಿ, ಶಾಂತಕುಮಾರ್ ವಂದಿಸಿದರು

About The Author

Leave a Reply

Your email address will not be published. Required fields are marked *