April 25, 2024

Chitradurga hoysala

Kannada news portal

ಪ್ರಧಾನಮಂತ್ರಿಗಳಿಗೆ ಮುಂದಿನ ದಿನಮಾನಗಳಲ್ಲಿ ಮತ್ತೆ ತನ್ನ ಹಳೆಯ ಟೀ ಅಂಗಡಿ ತೆರೆಯಬೇಕಾಗಿ ಬರಬಹುದು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಕಾರ್ಯಕ್ರಮದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಜಿಲ್ಲಾ ಕಾಂಗ್ರಸ್ ನ ಮಾಜಿ ಅಧ್ಯಕ್ಷ ಜಿ. ಎಸ್. ಮಂಜುನಾಥ್

1 min read


ಪ್ರಧಾನಮಂತ್ರಿಗಳಿಗೆ ಮುಂದಿನ ದಿನಮಾನಗಳಲ್ಲಿ ಮತ್ತೆ ತನ್ನ ಹಳೆಯ ಟೀ ಅಂಗಡಿ ತೆರೆಯಬೇಕಾಗಿ ಬರಬಹುದು ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಜಿಲ್ಲಾ ಕಾಂಗ್ರಸ್ ನ ಮಾಜಿ ಅಧ್ಯಕ್ಷ ಜಿ.ಎಸ್.ಮಂಜುನಾಥ್

ನಗರದ 20-19ನೇ ವಾರ್ಡ್‌ಗಳಲ್ಲಿ ಮಂಗಳವಾರ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಕಾರ್ಯಕ್ರಮದಲ್ಲಿ ಪ್ರಜಾ ಪ್ರತಿನಿಧಿ ಸಭೆ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವ ಬಗ್ಗೆ ವಿಸ್ತಾರವಾಗಿ ಸ್ಥಳೀಯ ಜನರೊಂದಿಗೆ ಚರ್ಚಿಸಲಾಯಿತು.

ಜಿಲ್ಲಾ ಕಾಂಗ್ರಸ್ನ ಮಾಜಿ ಅಧ್ಯಕ್ಷ ಜಿ. ಎಸ್. ಮಂಜುನಾಥ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂತಹ ಕಾಂಗ್ರೆಸ್ ಪಕ್ಷದ ಇತಿಹಾಸದ ಮುಂದೆ ಮಂಕಾಗುತ್ತಿರುವ ಬಿಜೆಪಿ ಪಕ್ಷ ಪ್ರಧಾನಮಂತ್ರಿಗಳಿಗೆ ಮುಂದಿನ ದಿನಮಾನಗಳಲ್ಲಿ ಮತ್ತೆ ತನ್ನ ಹಳೆಯ ಟೀ ಅಂಗಡಿ ತೆರೆಯಬೇಕಾಗಿ ಬರಬಹುದಾದ ಪರಿಸ್ಥಿತಿಯನ್ನು ಜನರು ಪಾಠ ಕಲಿಸುತ್ತಾರೆ ಎಂದು ಹೇಳಿದರು. ಗಾಂಧಿ ಜೀ ರವರನ್ನ ಗುಂಡಿಕ್ಕಿ ಕೊಂದಿದ್ದು ಗಾಡ್ಸೆಗೆ ಸಪೋರ್ಟ್ ಮಾಡಿದ್ದು ಸಂಘ ಪರಿವಾರದವರು, ಇಂದಿರಾಗಾಂಧಿ ರವರ ಕಾಲದಲ್ಲಿ ಹಲವಾರು ಜನ ಉಗ್ರಗಾಮಿಗಳನ್ನು ಹಿಡಿದು ಬಂಧಿಸಿದ್ದರು.
ಹನುಮಲಿ ಷಣ್ಮುಖಪ್ಪ ಸಭೆಯಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ಹಲವಾರು ನೂತನ ಯೋಜನೆಗಳನ್ನು ರೂಪಿಸಲಾಗುವುದು, ಈ ಎಲ್ಲಾ ಯೋಜನೆಗಳನ್ನು ನಿಮ್ಮ ವಾರ್ಡ್ ಕಮಿಟಿಗಳ ಮುಖೇನ ಮುಂದಿನ ದಿನಗಳಲ್ಲಿ ಜನರಿಗೆ ತಲುಪಿಸುವ ಕೆಲಸಗಳನ್ನು ನಡೆಸಲಾಗುವುದು, ಈ ಎಲ್ಲಾ ಯೋಜನೆಗಳು, ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕೊಟ್ಟಿದೆ, ಇನ್ನೂ ಹೇಲಲಾಗದಷ್ಟು ಕಾರ್ಯಕ್ರಮಗಳನ್ನು ನೀಡಿರುವ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುವ ಬಿಜೆಪಿಗರು ನೆನ್ನೆ ಮೊನ್ನೆ ಬಂದ ಕೂಸುಗಳು, ಅವರಿಗೇನು ಗೊತ್ತು ಇತಿಹಾಸ, ರಾಷ್ಟ್ರೀಯ, ರಾಜ್ಯ, ಜಿಲ್ಲಾ, ಬ್ಲಾಕ್ ಹಾಗೂ ವಾರ್ಡ್ ಮಟ್ಟದಲ್ಲಿ ಕಾಂಗ್ರೆಸ್ ಸಮಿತಿಗಳನ್ನು ನೇಮಕ ಲೀಡರ್ ಬೇಸ್ಡ್ ಪಾರ್ಟಿಯಿಂದ ಕ್ಯಾಡರ್ ಬೇಸ್ಡ್ ಪಾರ್ಟಿಯನ್ನಾಗಿ ಅಭಿವೃದ್ಧಿಯಾಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಆಯಾ ಬೂತ್ ಮಟ್ಟದ ಸಮಿತಿಗಳನ್ನು ರಚನೆ ಮಾಡಿ, ಸದರಿ ಸಮಿತಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಸದಸ್ಯರನ್ನು ನೇಮಕ ಮಾಡಿ ಅವರಿಗೆ ಪಕ್ಷದ ಜವಾಬ್ದಾರಿಯನ್ನು ನೀಡಿ ಸ್ಥಳೀಯ ವಾರ್ಡ್ ಮಟ್ಟದಲ್ಲಿ ಲೀಡರ್‌ಗಳನ್ನು ಹುಟ್ಟಿಹಾಕಿ ಪಕ್ಷ ಸಂಘಟನೆ ಮಾಡುವುದು ಕಾಂಗ್ರೆಸ್ ಮೂಲ ಮಂತ್ರವಾಗಿದೆ ಎಂದು ಹೇಳಿದರು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಕೆ. ತಾಜ್‌ಪೀರ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಿದ ಅನುದಾನದಡಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಬಿಜೆಪಿ ತನ್ನ ಅಧಿಕಾರದಲ್ಲಿ ಬಿಡುಗಡೆ ಮಾಡಿ ರಸ್ತೆಗಳನ್ನು ನಿರ್ಮಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ, ಚಿತ್ರದುರ್ಗ ನಗರದಲ್ಲಿ ಸಿಸಿ ರಸ್ತೆಗಳು, ವಾಲ್ಮೀಕಿ ಭವನ, ಸೈನ್ಸ್ ಕಾಲೇಜ್, ಆರ್‍ಟ್ಸ್ ಕಾಲೇಜ್, ಸ್ಟೇಡಿಯಂ, ನೂತನ ಡಿಸಿ ಕಛೇರಿ ನಿರ್ಮಿಸಲು ಸ್ಥಳ ಮತ್ತು ಅನುದಾನ ಮಂಜೂರು, ಕೆರೆಗಳಿಗೆ ನೀರುಣಿಸುವಿಕೆ, ಭದ್ರಾ ಮೇಲ್ದಂಡೆ, ಚಿತ್ರದುರ್ಗ ಜಿಲ್ಲೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸಲು ಸಹ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಂಜೂರು ಮಾಡಿದ ಕಾರ್ಯಕ್ರಮಗಳಾಗಿವೆ, ಬಿಜೆಪಿ ಏನು ಮಾಡಿದೆ ಎಂದು ಒಂದು ಪಟ್ಟಿ ನೀಡಲಿ ನೋಡೋಣ ಎಂದು ಆಗ್ರಹ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಪಿ. ಸಂಪತ್ ಕುಮಾರ್,ಸೇರಿದಂತೆ ಕಾಂಗ್ರಸ್ ನ ಕಾರ್ಯಕರ್ತರು ಮುಖಂಡರು ಹಾಜರಿಂದರು.

About The Author

Leave a Reply

Your email address will not be published. Required fields are marked *