Recent Posts

October 16, 2021

Chitradurga hoysala

Kannada news portal

ಕ್ರೀಡೆ ಮಾನವನ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಬುನಾದಿಯಾಗಿ ಕ್ರೀಡೆಯಿದೆ. ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು

1 min read

ಚಿತ್ರದುರ್ಗ:                                                           ಕ್ರೀಡೆ ಮಾನವನ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಬುನಾದಿಯಾಗಿ ಕ್ರೀಡೆಯಿದೆ.
ವಿವಿಧ ಪಾತ್ರಗಳನ್ನು ನಿರ್ಮಿಸುವ ಧೃಡವಾದ ಮತ್ತು ವೈವಿಧ್ಯಮಯವಾದ ಅವಕಾಶಗಳನ್ನು ನೀಡಲು ಕ್ರೀಡೆಗಳು ಪ್ರೇರಣೆ ನೀಡುತ್ತವೆ. ನಾಯಕತ್ವ, ಸಹಭಾಗಿತ್ವ, ಕ್ಷೇಮ, ಮತ್ತು ಸ್ಥಿತಿ ಸ್ಥಾಪಕತ್ವದ ಮಹತ್ವ ಕ್ರೀಡೆಯು ಉಂಟುಮಾಡುತ್ತದೆ. ಕ್ರೀಡೆ ಸ್ನೇಹಪರ ಭಾವನೆ, ಸ್ಪರ್ಧಾತ್ಮಕ

ಭಾವನೆ ಹಾಗೂ ಸಹಕಾರ ಮನೋಭಾವವನ್ನು ಅದು ಕಲಿಸಿಕೊಡುತ್ತದೆ. ಶಾರೀರಿಕ ಸಂಪತ್ತು ಭೌದ್ಧಿಕ ವಿಕಸನದ ಅಡಿಪಾಯವಾಗಿದೆ. ಎಂದು  ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಚಿತ್ರದುರ್ಗ ಹೊರವಲಯದಲ್ಲಿ ಜರುಗಿದ ದಿವಂಗತ ಪರಮಶಿವಯ್ಯ ಹಾಗೂ ದಿವಂಗತ ತಿಪ್ಪೇಸ್ವಾಮಿ
ಸ್ಮರಣಾರ್ಥ ಎಂ.ಕೆ.ಎಂ ಕ್ರಿಕೆಟ್ ಕ್ರೀಡಾಕೂಡದಲ್ಲಿ ಅರ್ಸಲನ್ ಕ್ರಿಕೆಟರ್ಸ್, ರಾಘವ ಕ್ರಿಕೆಟರ್ಸ್, ಪಾಟೀಲ್ ಕ್ರಿಕೆಟರ್ಸ್, ಎಸ್.ಆರ್.ಕ್ರಿಕೆಟರ್ಸ್, ಆರ್.ಸಿ.ಬಿ ಕ್ರಿಕೆಟರ್ಸ್, ಆರ್.ಸಿ.ಕೆ ಕ್ರಿಕೆಟರ್ಸ್, ಪಿ.ಎಂ.ಕ್ರಿಕೆಟರ್ಸ್, ಹೊಯ್ಸಳ ಕ್ರಿಕೆಟರ್ಸ್ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ರನ್ನರ್ ತಂಡವಾಗಿ ಆರ್.ಸಿ.ಕೆ ಕ್ರಿಕೆಟರ್ಸ್  ಹಾಗೂ ವಿಜೇತ ತಂಡವಾಗಿ ಎಸ್.ಆರ್.ಕ್ರಿಕೆಟರ್ಸ್ ಹೊರಹೊಮ್ಮಿದವು. ಸರಣಿ ಶ್ರೇಷ್ಠ ಆರ್.ಸಿ.ಕೆ ಕ್ರಿಕೆಟರ್ಸ್ ತಂಡದ ಪ್ರದೀಪ್

ಎರಡು ದಿನಗಳ ಕ್ರೀಡಾಕೂಡದಲ್ಲಿ ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಕಾಂಗ್ರೆಸ್ ನಾಯಕರಾದ ಹನುಮಲಿ ಷಣ್ಮುಖಪ್ಪ. ಕಾಂಗ್ರೆಸ್ ಜಿಲ್ಲಾಧ್ಯಕ್ಷ  ತಾಜ್ ಫೀರ್, ಕಾರ್ಯದರ್ಶಿ ಹಾಲೇಶ್, ಸಿದ್ಧಾರ್ಥ ತಿಪ್ಪಾರೆಡ್ಡಿ, ವಿ.ಆರ್.ನಾಗರಾಜ್,  ಆಯೋಜಕರಾದ  ಮಾರುತಿ ಕೆ.ಎಸ್, ಸಾದಿಕ್ ಬಾಷ ಎಂ.ಎಸ್, ನಾಗರಾಜು ಎಸ್, ನಿರಂಜನ ಸಿ.ಎಚ್.ಎಮ್. ಮಲ್ಲೇಶ್ ಜಿ. ಹಾಗೂ ಇನ್ನಿತರರು ಭಾಗವಹಿಸಿದ್ದರು.

More Stories

Leave a Reply

Your email address will not be published. Required fields are marked *

You may have missed