March 29, 2024

Chitradurga hoysala

Kannada news portal

ರಾಜ್ಯಮಟ್ಟದ ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ

1 min read

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ದಾವಣಗೆರೆ ಜಿಲ್ಲಾ ಘಟಕದಿಂದ ಹೊರ ತರುತ್ತಿರುವ ರಾಜ್ಯಮಟ್ಟದ ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮಂಜುನಾಥ

 

ಚಿತ್ರದುರ್ಗ:                                              ಚಿತ್ರದುರ್ಗ ಜಿಲ್ಲೆಯ ಸಮಸ್ತ ರಾಜ್ಯ ಸರ್ಕಾರಿ ನೌಕರರೇ ಅಕ್ಟೋಬರ್ ತಿಂಗಳ 21 ರಿಂದ 23 ರವರೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು  ಕ್ರೀಡಾಕೂಟಗಳನ್ನು ದಾವಣಗೆರೆಯಲ್ಲಿ ಆಯೋಜಿಸಿದ್ದು ಈ ಕಾರ್ಯಕ್ರಮದ ಸವಿನೆನಪಿಗಾಗಿ

ಸ್ಮರಣ ಸಂಚಿಕೆ

ಯನ್ನು ಹೊರ ತರುವ ಉದ್ದೇಶ ಹೊಂದಲಾಗಿದ್ದು, ಎಲ್ಲ ಜಿಲ್ಲೆಗಳಿಂದ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಅತ್ಯಮೂಲ್ಯ ಪರಿಕಲ್ಪನೆಗಳನ್ನು ಹೊಂದಿರುವ ಗುಣಾತ್ಮಕ ಲೇಖನಗಳನ್ನು ಆಹ್ವಾನಿಸಿದ್ದರೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಸಕ್ತ ರಾಜ್ಯ ಸರ್ಕಾರಿ ನೌಕರರು – ರಾಷ್ಟ್ರೀಯ ಶಿಕ್ಷಣ ನೀತಿ, ಕ್ರೀಡೆ, ಆರೋಗ್ಯ, ಮಾನವೀಯ ಮೌಲ್ಯಗಳು, ತಮ್ಮ ಜಿಲ್ಲೆಯ ವಿಶಿಷ್ಠತೆಗಳು, ಐತಿಹಾಸಿಕ  ಸ್ಥಳಗಳು,ಸಾಂಸ್ಕೃತಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿನ ಸಾಧನೆಗಳು ಹಾಗೂ ಇತರೆ ಸಾರ್ವಜನಿಕರ ಗಮನ ಸೆಳೆಯುವ ಸಮಾಜ ಪೂರಕವಾದ ಯಾವುದೇ ಪ್ರಕಾರದ ಬರಹಗಳನ್ನು ನುಡಿ 4.0 ತಂತ್ರಾಂಶದಲ್ಲಿ ಟೈಪ್ ಮಾಡಿ, ದಿನಾಂಕ-10/10/2021 ರ ಸಂಜೆ 5-30 ರೊಳಗೆ ಒಂದು ಪುಟದ ಮಿತಿಯಲ್ಲಿ  ಇಮೇಲ್ ವಿಳಾಸ _ksgeadvg@gmail.com_ ಕ್ಕೆ ತಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ಮೊಬೈಲ್ ನಂಬರ್ ನೊಂದಿಗೆ ಕಳುಹಿಸಿ ಕೊಡಬೇಕೆಂದು ಸಂಚಿಕೆಯ ಪ್ರಧಾನ ಸಂಪಾದಕ ಹೆಚ್.ಕೆ. ಲಿಂಗರಾಜು  ಡಯಟ್ ಪ್ರಾಂಶುಪಾಲರು,  ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ದಾವಣಗೆರೆ ಇವರು ಕೋರಿರುತ್ತಾರೆ.
ಆದ್ದರಿಂದ ಚಿತ್ರದುರ್ಗ ಜಿಲ್ಲೆಯ ನಮ್ಮ ನೌಕರರು ಈ ಕಾರ್ಯಕ್ರಮ ದಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ ವಿನಂತಿಸಿದ್ದರೆ.

ಆತ್ಮೀಯ ಚಿತ್ರದುರ್ಗ ಜಿಲ್ಲೆಯ ಸಮಸ್ತ ರಾಜ್ಯ ಸರ್ಕಾರಿ ನೌಕರರಲ್ಲಿ ಕೋರುವುದೇನೆಂದರೆ, ಅಕ್ಟೋಬರ್ ತಿಂಗಳ 21 ರಿಂದ 23 ರವರೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು  ಕ್ರೀಡಾಕೂಟಗಳನ್ನು ದಾವಣಗೆರೆಯಲ್ಲಿ ಆಯೋಜಿಸಿರುವುದರಿಂದ ಈ ಕಾರ್ಯಕ್ರಮದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಯನ್ನು ಹೊರ ತರುವ ಉದ್ದೇಶ ಹೊಂದಲಾಗಿದ್ದು, ಎಲ್ಲ ಜಿಲ್ಲೆಗಳಿಂದ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಅತ್ಯಮೂಲ್ಯ ಪರಿಕಲ್ಪನೆಗಳನ್ನು ಹೊಂದಿರುವ ಗುಣಾತ್ಮಕ ಲೇಖನಗಳನ್ನು ಆಹ್ವಾನಿಸಿದ್ದರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಸಕ್ತ ರಾಜ್ಯ ಸರ್ಕಾರಿ ನೌಕರರು – ರಾಷ್ಟ್ರೀಯ ಶಿಕ್ಷಣ ನೀತಿ, ಕ್ರೀಡೆ, ಆರೋಗ್ಯ, ಮಾನವೀಯ ಮೌಲ್ಯಗಳು, ತಮ್ಮ ಜಿಲ್ಲೆಯ ವಿಶಿಷ್ಠತೆಗಳು, ಐತಿಹಾಸಿಕ  ಸ್ಥಳಗಳು, ಸಾಂಸ್ಕೃತಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿನ ಸಾಧನೆಗಳು ಹಾಗೂ ಇತರೆ ಸಾರ್ವಜನಿಕರ ಗಮನ ಸೆಳೆಯುವ ಸಮಾಜ ಪೂರಕವಾದ ಯಾವುದೇ ಪ್ರಕಾರದ ಬರಹಗಳನ್ನು ನುಡಿ 4.0 ತಂತ್ರಾಂಶದಲ್ಲಿ ಟೈಪ್ ಮಾಡಿ, ದಿನಾಂಕ-10/10/2021 ರ ಸಂಜೆ 5-30 ರೊಳಗೆ ಒಂದು ಪುಟದ ಮಿತಿಯಲ್ಲಿ  ಇಮೇಲ್ ವಿಳಾಸ _ksgeadvg@gmail.com_ ಕ್ಕೆ ತಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ಮೊಬೈಲ್ ನಂಬರ್ ನೊಂದಿಗೆ ಕಳುಹಿಸಿಕೊಡಬೇಕೆಂದು ಸಂಚಿಕೆಯ ಪ್ರಧಾನ ಸಂಪಾದಕ ಹೆಚ್. ಕೆ. ಲಿಂಗರಾಜು  ಡಯಟ್ ಪ್ರಾಂಶುಪಾಲರು,  ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ದಾವಣಗೆರೆ ಇವರು ಕೋರಿರುತ್ತಾರೆ.ಆದ್ದರಿಂದ ಚಿತ್ರದುರ್ಗ ಜಿಲ್ಲೆಯ ನಮ್ಮ ನೌಕರರು ಈ ಕಾರ್ಯಕ್ರಮ ದಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕು ಎಂದು ನೌಕರರ ಸಂಘ ದ ಅಧ್ಯಕ್ಷ ಕೆ.ಮಂಜುನಾಥ ವಿನಂತಿಸಿದ್ದರೆ.

About The Author

Leave a Reply

Your email address will not be published. Required fields are marked *