April 19, 2024

Chitradurga hoysala

Kannada news portal

ಎಂ.ಹನೀಫ್ ಕೋಟೆ ಜೆ.ಡಿ.ಎಸ್ ಸೇರ್ಪಡೆ : ಕಾಂಗ್ರೆಸ್ ಪಕ್ಷ ಮುಸಲ್ಮಾನರನ್ನು ಕೇವಲ ಮತ ಬಳಕೆಗಷ್ಟೆ ಬಳಸಿಕೊಂಡಿದೆ ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ : ದೇಶದಲ್ಲಿ ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಇಲ್ಲಿಯವರೆಗೂ ಮುಸ್ಲಿಂರನ್ನು ಕೇವಲ ಮತಕ್ಕಾಗಿ ಬಳಸಿಕೊಂಡಿದೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್

1 min read

.

ಕಾಂಗ್ರೆಸ್ ಪಕ್ಷ ಮುಸಲ್ಮಾನರನ್ನು ಕೇವಲ ಮತ ಬಳಕೆಗಷ್ಟೆ ಬಳಸಿಕೊಂಡಿದೆ ಜಿಲ್ಲಾಧ್ಯಕ್ಷ ಡಿ.ಯಶೋಧರ

ದೇಶದಲ್ಲಿ ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಇಲ್ಲಿಯವರೆಗೂ ಮುಸ್ಲಿಂರನ್ನು ಕೇವಲ ಮತಕ್ಕಾಗಿ ಬಳಸಿಕೊಂಡಿದೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್

ಚಿತ್ರದುರ್ಗ: ಎಪ್ಪತ್ತು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಮುಸಲ್ಮಾನರನ್ನು ಕೇವಲ ಮತ ಬಳಕೆಗಷ್ಟೆ ಬಳಸಿಕೊಂಡಿದೆ. ಇನ್ನು ಕೋಮುವಾದಿ ಬಿಜೆಪಿ.ಮುಸ್ಲಿಂರನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿದೆ. ಇವೆರಡು ಪಕ್ಷಗಳು ನಿಮಗೆ ದ್ರೋಹ ಎಸಗುತ್ತಿರುವುದರ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಮುಸಲ್ಮಾನರಿಗೆ ಕರೆ ನೀಡಿದರು.ಎಂ.ಹನೀಫ್ ಮತ್ತು ನಜೀರ್ ಅಹಮದ್ ಹಾಗೂ ಅವರ ಅಪಾರ ಬೆಂಬಲಿಗರನ್ನು ಮಂಗಳವಾರ ಜೆಡಿಎಸ್.ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಡಿ.ಯಶೋಧರ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವ ಈ ಸಂದರ್ಭದಲ್ಲಿ ನೀವುಗಳು ಪ್ರಾದೇಶಿಕ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಜೆಡಿಎಸ್.ಗೆ ಸೇರ್ಪಡೆಗೊಳ್ಳುತ್ತಿರುವುದು ಸಂತೋಷದ ಸಂಗತಿ.

ರಾಷ್ಟಿçÃಯ ಪಕ್ಷಗಳ ಅಬ್ಬರ ಆರ್ಭಟದಿಂದ ರಾಜ್ಯದ ಜನ ಬೇಸತ್ತು ಜೆಡಿಎಸ್.ಗೆ ಒಲವು ತೋರುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಕಾಂಗ್ರೆಸ್ ದೇಶದಲ್ಲಿ ನಾಶವಾಗುತ್ತಿದೆ. ಮುಸಲ್ಮಾನರಿಗೆ ಭವಿಷ್ಯವಿಲ್ಲ. ದೇಶಕ್ಕೆ ಸಮರ್ಥ ನಾಯಕತ್ವ ನೀಡಿದವರು ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಎನ್ನುವುದನ್ನು ಯಾರು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪ್ರಾದೇಶಿಕ ಪಕ್ಷ ಜೆಡಿಎಸ್.ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಪಕ್ಷಕ್ಕೆ ಸೇರ್ಪಡೆಯಾದವರಲ್ಲಿ ವಿನಂತಿಸಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯನ್ನು ಬಗೆಹರಿಸಿದವರು ಹೆಚ್.ಡಿ.ದೇವೇಗೌಡರು. ಪ್ರತಿ ವರ್ಷವೂ ಇಲ್ಲಿ ಗೋಲಿಬಾರ್ ನಡೆದು ಅನೇಕ ಸಾವು-ನೋವುಗಳು ಸಂಭವಿಸುತ್ತಿತ್ತು. ಆದರೆ ಕಾಂಗ್ರೆಸ್‌ನವರು ಕಣ್ಣಾಯಿಸಲಿಲ್ಲ. ಮುಸ್ಲಿಂರಿಗೆ ಶೇ.೪ ರಷ್ಟು ಮೀಸಲಾತಿ ಕೊಟ್ಟಿದ್ದು, ದೇವೇಗೌಡರು. ಮುರಾರ್ಜಿ ವಸತಿ ಶಾಲೆಗಳನ್ನು ತೆರೆದು ಹತ್ತು ಹಲವಾರು ಸಮಸ್ಯೆಗಳನ್ನು ನಿವಾರಿಸಿದರು. ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ.ಹಾಗೂ ಮುಸಲ್ಮಾನರನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿರುವ ಕಾಂಗ್ರೆಸ್‌ನಿAದ ನಿಮ್ಮ ಬದುಕು ಭವಿಷ್ಯ ಬದಲಾವಣೆಯಾಗುವುದಿಲ್ಲ.

ಕಾಂಗ್ರೆಸ್‌ಗೆ ಮತ ನೀಡುವುದನ್ನು ಇನ್ನಾದರೂ ನಿಲ್ಲಿಸಿ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಜೆಡಿಎಸ್.ಗೆಲ್ಲಬೇಕು. ಇದಕ್ಕೆ ನಿಮ್ಮ ಶಕ್ತಿ ಪ್ರದರ್ಶನ ಮುಖ್ಯ ಎಂದು ಹೇಳಿದರು.
ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡುತ್ತ ಪ್ರಾದೇಶಿಕ ಪಕ್ಷಗಳಿಗೆ ಎಲ್ಲಿ ಮಾನ್ಯತೆ ಸಿಗುತ್ತದೋ ಆ ರಾಜ್ಯ ಅಭಿವೃದ್ದಿಯಾಗುವುದರಲ್ಲಿ ಅನುಮಾನವಿಲ್ಲ. ಆಂಧ್ರ, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳಿವೆ, ದೇಶದಲ್ಲಿ ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಇಲ್ಲಿಯವರೆಗೂ ಮುಸ್ಲಿಂರನ್ನು ಕೇವಲ ಮತಕ್ಕಾಗಿ ಬಳಸಿಕೊಂಡಿದೆ. ಪ್ರತಿ ಚುನಾವಣೆಯಲ್ಲಿಯೂ ನೀವುಗಳು ತಪ್ಪುಗಳನ್ನು ಮಾಡಿಕೊಂಡು ಬರುತ್ತಿರುವುದರಿಂದ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬAತೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ. ಅಧಿಕಾರಕ್ಕೆ ಬರಲು ಕಾರಣವಾಯಿತು. ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಮತ್ತೆ ಇಂತಹ ತಪ್ಪು ಮರುಕಳಿಸುವುದು ಬೇಡ. ಚಿತ್ರದುರ್ಗದಲ್ಲಿ ರಾಜಕಾರಣ ಕಲುಷಿತಗೊಂಡಿದ್ದು, ಸ್ಥಳೀಯವಾಗಿ ಸಂಘಟಿತರಾಗಿ ಜೆಡಿಎಸ್.ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಪಕ್ಷಕ್ಕೆ ಸೇರ್ಪಡೆಯಾದವರಲ್ಲಿ ಮನವಿ ಮಾಡಿದರು.

ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಎಂ.ಹನೀಫ್ ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಾವುಗಳು ಮತ ನೀಡಿಕೊಂಡು ಬರುತ್ತಿದ್ದರೂ ರಾಜಕೀಯವಾಗಿ ನಮ್ಮ ಜನಾಂಗಕ್ಕೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಮುಸ್ಲಿಂ ಜನಾಂಗಕ್ಕೆ ಮೊಟ್ಟ ಮೊದಲ ಬಾರಿಗೆ ಗೃಹ ಖಾತೆ ನೀಡಿದ್ದು, ಹೆಚ್.ಡಿ.ದೇವೇಗೌಡರು, ಅದೇ ರೀತಿ ಕೇಂದ್ರ ವಿಮಾನಯಾನ ಖಾತೆಯನ್ನು ಸಿ.ಎಂ.ಇಬ್ರಾಹಿAಗೆ ನೀಡಿದ್ದು, ಕೂಡ ಜೆಡಿಎಸ್.ಎನ್ನುವುದನ್ನು ನಾವುಗಳು ಮರೆತಿಲ್ಲ. ಕಾಂಗ್ರೆಸ್ ಮುಸ್ಲಿಂರನ್ನು ಕೇವಲ ಮತಕ್ಕಷ್ಟೆ ಸೀಮಿತಗೊಳಿಸಿದೆ. ಹಾಗಾಗಿ ಜೆಡಿಎಸ್.ತತ್ವ ಸಿದ್ದಾಂತವನ್ನು ಮೆಚ್ಚಿ ಪಕ್ಷಕ್ಕೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಜೆಡಿಎಸ್.ರಾಜ್ಯ ಕಾರ್ಯದರ್ಶಿ ವೀರಣ್ಣ, ತಾಲ್ಲೂಕು ಅಧ್ಯಕ್ಷ ತಿಮ್ಮಣ್ಣ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಯುವ ಘಟಕದ ಅಧ್ಯಕ್ಷ ನ್ಯಾಯವಾದಿ ಪ್ರತಾಪ್‌ಜೋಗಿ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.

 

About The Author

Leave a Reply

Your email address will not be published. Required fields are marked *