April 25, 2024

Chitradurga hoysala

Kannada news portal

ಶರಣ ಸಂಸ್ಕøತಿಯ ಒಂದು ಅವಿಭಾಜ್ಯ ಅಂಗ ಮಹಿಳಾ ಗೋಷ್ಠಿ ಡಾ.ಶಿವಮೂರ್ತಿ ಮುರುಘಾ ಶರಣರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ.ಶಾಂತಾಹೊಸಮನಿ ಪುರುಷೋತ್ತಮ್ಮ ಇವರನ್ನು ಸನ್ಮಾನಿಸಲಾಯಿತು.

1 min read

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ.ಶಾಂತಾಹೊಸಮನಿ ಪುರುಷೋತ್ತಮ್ಮ ಇವರನ್ನು ಸನ್ಮಾನಿಸಲಾಯಿತು.

ಶರಣ ಸಂಸ್ಕøತಿಯ ಒಂದು ಅವಿಭಾಜ್ಯ ಅಂಗ ಮಹಿಳಾ ಗೋಷ್ಠಿ ಡಾ.ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ:

ಶರಣಸಂಸ್ಕøತಿ ಉತ್ಸವ
ಲಿಂಗ ತಾರತಮ್ಯ ನಿವಾರಣೆ:ಮುರುಘಾ ಶರಣರ ವಿಧಾಯಕ ಚಿಂತನೆ- ವಿಷಯಾಧಾರಿತ ಮಹಿಳಾ ಗೋಷ್ಠಿ ಶರಣ ಸಂಸ್ಕøತಿಯ ಒಂದು ಅವಿಭಾಜ್ಯ ಅಂಗ ಮಹಿಳಾ ಗೋಷ್ಠಿ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಶ್ರೀಗಳು ಶರಣ ಸಂಸ್ಕøತಿ ಉತ್ಸವ-2021ರ ಅಂಗವಾಗಿ ದಿನಾಂಕ:14.10.2021ರಂದು ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಲಿಂಗ ತಾರತಮ್ಯ ನಿವಾರಣೆ: ಮುರುಘಾ ಶರಣರ ವಿಧಾಯಕ ಚಿಂತನೆ- ವಿಷಂiÀi ಕುರಿತಾದ ಮಹಿಳಾ ಗೋಷ್ಠಿಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಶರಣ ಸಂಸ್ಕøತಿ ಉತ್ಸವದಲ್ಲಿ ಮಹಿಳಾ ಕ್ರೀಡಾಕೂಟಗಳು ವಿಶೇಷವಾಗಿ ನಡೆಯುತ್ತವೆ. ಮಾನವ ಶರೀರದಲ್ಲಿ ಎಡಭಾಗ ಕನಿಷ್ಠ ಹಾಗು ಬಲಭಾಗ ಶ್ರೇಷ್ಠ ಎಂದು ದೇಹದಲ್ಲಿ ಎರಡು ಭಾಗ ಎಂದು ಭಾವಿಸುತ್ತಾರೆ. ಆದರೆ ಹೃದಯ ಇರುವುದು ನಮ್ಮ ಎಡಭಾಗದಲ್ಲಿ. ಹೀಗಿರುವಾಗ ಎಡ ಹೇಗೆ ಕನಿಷ್ಠವಾಗಲು ಸಾಧ್ಯ. ಶರಣ ಪರಂಪರೆಯಲ್ಲಿ ಶಿವಯೋಗ ಮಾಡುವಾಗ ಲಿಂಗವನ್ನು ಎಡಕೈಯಲ್ಲಿ ಪ್ರತಿಷ್ಠಾಪನೆ ಮಾಡುವುದರ ಮೂಲಕ ಎಡ ಮತ್ತು ಬಲ ನಡುವೆಯಿದ್ದ ಶ್ರೇಷ್ಠ ಕನಿಷ್ಠಗಳ ತಾರತಮ್ಯ ನಿವಾರಣೆ ಮಾಡಿದರು. ಹಾಗಾಗಿ ಎಡ ಸ್ತ್ರೀಯೆಂದು, ಬಲ ಪುರುಷಯೆಂದು ಭಾವಿಸುವುದು ಸರಿಯಲ್ಲ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಪ್ರಮಥರು ನೂರಕ್ಕೆ ನೂರರಷ್ಟು ಮಹಿಳಾ ಸ್ವಾತಂತ್ರ್ಯವನ್ನು ನೀಡಿದ್ದು, ಪತ್ನಿಯೇ ಪತಿಗೆ ನಿರ್ದೇಶನ ಮಾಡಿದ್ದು, ಸ್ಫೂರ್ತಿಯನ್ನು ನೀಡುತ್ತದೆ. ಮಹಿಳಾ ಮಸೂದೆಯನ್ನು ಸಂಸತ್ತಿನಲ್ಲಿ ಪಾಸ್ ಮಾಡಲು ಇನ್ನು ಸಾಧ್ಯವಾಗಿಲ್ಲದಿರುವುದು ವಿಷಾದದ ಸಂಗತಿ ಎಂದು ನುಡಿದರು.
ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಮುರುಘಾ ಶ್ರೀಗಳ ಪೀಠಾರೋಹಣದ ತೃತೀಯ ದಶಮಾನೋತ್ಸವದ ಸಲುವಾಗಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಆದರೆ ಅದು ಮಳೆಯ ಕಾರಣ ರದ್ದಾಗಿದ್ದು, ಮುಂದಿನ ದಿನಗಳಲ್ಲಿ ಆ ಪಂದ್ಯಾವಳಿಯನ್ನು ನಡೆಸಿಕೊಟ್ಟು ಪೂಜ್ಯರಿಗೆ ಗೌರವವನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಶುಭಾ ಮರವಂತೆ ಮಾತನಾಡಿ, ಹೆಣ್ಣನ್ನು ನಾವೆಲ್ಲ ಶಕ್ತಿಯ ರೂಪದಲ್ಲಿ ಆರಾಧಿಸುತ್ತೇವೆ. 12ನೇ ಶತಮಾನದಲ್ಲಿ ಹೆಣ್ಣನ್ನು ಅತ್ಯಂತ ಗೌರವದಿಂದ ನೋಡಿದ ಕಾಲ. ಶರಣರು ಮಹಿಳೆಯನ್ನು ಕುರಿತಾದ ವಿವರಣೆ ಯಾವ ಸ್ತ್ರೀ ವಾದದಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಶ್ನಿಸುವುದನ್ನು ಮೊದಲು ಹೇಳಿಕೊಟ್ಟವರು ಬಸವಣ್ಣನವರು. ಹೆಣ್ಣಿನ ಬಗ್ಗೆ ಅನೇಕ ಮಾಧ್ಯಮಗಳಲ್ಲಿ ನಾವು ನೋಡುತ್ತೇವೆ. ಆದರೆ ವಿಧವೆಯರನ್ನು ತಿರಸ್ಕರಿಸುವ ಕಾಲದಲ್ಲಿ ಅವರಿಗೆ ಒಂದು ಘನತೆಯನ್ನು ನೀಡಿದ್ದು, ಮುರುಘಾ ಶರಣರು. ಶತ ಶತಮಾನಗಳಿಂದಲೂ ಹೆಣ್ಣನ್ನು ಕೀಳಾಗಿ ಸಮಾಜಕ್ಕೆ ವೈಚಾರಿಕ ಸ್ಪರ್ಶ ನೀಡಿದವರು ಶ್ರೀಗಳು. ಇಂದು ಹೆಣ್ಣು ಮಕ್ಕಳನ್ನು ಧಾರಾವಾಹಿಗಳು, ಜ್ಯೋತಿಷಿಗಳು ನಿಯಂತ್ರಿಸುವ ಮಟ್ಟಕ್ಕೆ ಬೆಳದಿದ್ದಾರೆ. ಬದಲಾವಣೆಗಳು ನಮ್ಮ ನಡೆ-ನುಡಿಗಳಿಂದಲೇ ಆರಂಭವಾಗಬೇಕು. ಸಮಾಜ ಇಂದು ದಾರಿ ತಪ್ಪುವುದು ಪರಸ್ಪರರ ಸಮಾನತೆಯ ಕೊರತೆಯಿಂದ. ಶರಣರು- ಸತಿಪತಿಗಳ ದಾಂಪತ್ಯ ಜೀವನವನ್ನು ಎತ್ತಿ ಹಿಡಿದರು. ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ಸಮಾಜ ಬೆಳಗುವ ಕೆಲಸ ಮಾಡಿದರು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಕೆ.ನಂದಿನಿದೇವಿ ಮಾತನಾಡಿ, ದಸರಾ ಉತ್ಸವದ ಸಂದರ್ಭದಲ್ಲಿ ಮುರುಘಾ ಶರಣರು ಶರಣಸಂಸ್ಕøತಿ ಉತ್ಸವದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ. 40-50 ವರ್ಷಷಗಳಿಗೆ ಹೋಲಿಸಿದಲ್ಲಿ ಇಂದಿನ ಕಾಲದಲ್ಲಿ ಮಹಿಳೆಯರ ಸ್ಥಾನಮಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಹಿಳೆಯರು ಹಿಂದೆ ಅಡುಗೆ ಮನೆಗಷ್ಟೇ ಸೀಮಿತವಾಗಿದ್ದರು. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆ ಬೆಳೆಯುತ್ತಿದ್ದಾಳೆ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ ಮಾತನಾಡಿ, ನವರಾತ್ರಿ ಉತ್ಸವದ ನವದುರ್ಗೆಯರನ್ನು ಪೂಜಿಸುವ ಹೊತ್ತಿನಲ್ಲಿ ನಾವು ಶ್ರೀಮಠದಲ್ಲಿ ಮಹಿಳಾ ಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ಇಂದು ಮಹಿಳೆ ತನ್ನ ವ್ಯಕ್ತಿತ್ವದಿಂದ, ಆಂತರಿಕ ಸಾಮಥ್ರ್ಯದಿಂದಲೇ ಮೇಲೆ ಬರಬೇಕಿದೆ. ಹೆಣ್ಣನ್ನು ನದಿಗಳಿಗೆ ಭೂಮಿಗೆ ಹೋಲಿಸುತ್ತಾರೆ. ತಾಯಿಯನ್ನು ಮೊದಲ ಗುರುವಾಗಿ ಕಾಣುತ್ತಾರೆ. ಸ್ತ್ರೀ ಹೆಚ್ಚಿನ ಜವಾಬ್ದಾರಿಗಳನ್ನು ಹೊರುವಂತವಳು. ಅಗಾಧ ಶಕ್ತಿಯುಳ್ಳವಳು. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಅನ್ಯ ಸಂದೇಶ ನೀಡುವ ಧಾರಾವಾಹಿಗಳಿಂದ ದೂರವಿದ್ದು, ಸತ್ಪರುಷರ, ಸಾಧಕರ ವಿಚಾರಗಳ ಕಡೆ ಗಮನ ಹರಿಸಬೇಕಿದೆ. ಆ ಮೂಲಕ ತನ್ನ ಸಾಮಥ್ರ್ಯವನ್ನು ಸರಿಯಾಗಿ ಬಳಸಿಕೊಂಡು ತನ್ನ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಡಾ.ಶಾಂತಾ ಹೊಸಮನಿ ಹಾಗು ರಾಷ್ಟ್ರೀಯ ಪ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕøತೆ ದಾವಣಗೆರೆ ಸಿ.ಜೆ.ಆಸ್ಪತ್ರೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಕೆ.ಗಾಯತ್ರಿದೇವಿಯವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶರಣ ಸಂಸ್ಕøತಿ ಉತ್ಸವ-2021ರ ಕಾರ್ಯಾಧ್ಯಕ್ಷರಾದ ಶ್ರೀ ಕೆ ಎಸ್ ನವೀನ್, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಶ್ರೀ ಎ.ಜೆ.ಪರಮಶಿವಯ್ಯ, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು. ಶ್ರೀ ಮುರುಘಾಮಠದ ಬಸವ ಮಕ್ಕಳಿಂದ ನೃತ್ಯ ಪ್ರದರ್ಶನ ನೀಡಿದರು.

About The Author

Leave a Reply

Your email address will not be published. Required fields are marked *