April 25, 2024

Chitradurga hoysala

Kannada news portal

ಡಾ:ಬಿ.ಎಂ.ತಿಪ್ಪೇಸ್ವಾಮಿ ಹಿರೇಹಳ್ಳಿ ಕಣ್ಣೀನ ತಜ್ಞನರು ನೆನಪು ಮಾತ್ರ ಆದರೆ ಅವರ ಆದರ್ಶ ಗಳು ಜೀವಂತ…. ತಿಪ್ಪೇಸ್ವಾಮಿ ನಾನು ಬಲ್ಲ ಅತ್ಯಂತ ಆರೋಗ್ಯವಂತ ಮನಸ್ಸಿನ ವ್ಯಕ್ತಿ. -ಪಿ‌. ಲಂಕೇಶ್

1 min read


ಡಾ:ಬಿ.ಎಂ.ತಿಪ್ಪೇಸ್ವಾಮಿ ಹಿರೇಹಳ್ಳಿಮಾಜಿ ಶಾಸಕರು    ನೆನಪು ಮಾತ್ರ                      ಆದರೆ ಅವರ ಆದರ್ಶ ಗಳು ಜೀವಂತ….

ನಗೆ ಮತ್ತು ಪ್ರೀತಿ…

“ಭಾರತದಂತಹ ಬಹುಮುಖದ, ಬಹುಸ್ತರದ ದೇಶದಲ್ಲಿ ತಿಪ್ಪೇಸ್ವಾಮಿಯಂಥವರು ಬದುಕಿದ್ದೇ ಒಂದು ಕುತೂಹಲಕರ ವಿಷಯವಾಗಬಲ್ಲದು; ಅವರು ಅಕ್ಷರದಿಂದ ವಂಚಿತರಾದ, ಜಾತಿಪದ್ಧತಿಗೂ ಕ್ರೂರವ್ಯವಸ್ಥೆಯ ಹೊರಗೇ ಉಳಿದಿದ್ದ ಪಂಚಮ ಸಮುದಾಯದಿಂದ ಬಂದವರು. ಅಂಥವರು ತಮ್ಮ ಹುಟ್ಟೂರನ್ನು ಬಿಟ್ಟು ಅಕ್ಕನ ಊರಿಗೆ ಹೋಗಿ ಶಾಲೆಗೆ ಸೇರದಿದ್ದರೆ, ಅಲ್ಲಿ ಕೂಡಾ ಜನರ ಅಸೂಯೆ, ಅವಮಾನಗಳನ್ನು ಸಹಿಸಿಕೊಂಡು ವಿದ್ಯೆಗಳಿಸಲೇಬೇಕೆಂಬ ನಿಶ್ಚಲ ಗುರಿಯಿಂದ ಮುಂದುವರೆಯದಿದ್ದರೆ ತಿಪ್ಪೇಸ್ವಾಮಿ ತಮ್ಮ ಹುಟ್ಟಿದೂರಾದ ಹಿರೇಹಳ್ಳಿಯಲ್ಲಿ ದನ ಕಾಯುತ್ತಾ ಜೀವನ ಸಾಗಿಸಬೇಕಾಗುತ್ತಿತ್ತು.

20ನೇ ಶತಮಾನದ ಭಾರತದ ಅಲ್ಲೋಲಕಲ್ಲೋಲ ಸಾಮಾಜಿಕ ವಾತಾವರಣದಲ್ಲಿ ತಿಪ್ಪೇಸ್ವಾಮಿಯವರು ಅನ್ಯಜಾತಿಯವರಿಂದ ಪಡೆದ ಸಹಕಾರ, ಪ್ರೀತಿ, ನಿರ್ಲಕ್ಷ್ಯ, ಅವಮಾನ ಇತ್ಯಾದಿ ದಾಖಲೆಯೇ ಒಂದು ಬೃಹತ್ ಕೃತಿಗೆ ವಸ್ತುವಾಗಬಲ್ಲದು. ಯಾಕೆಂದರೆ ತಿಪ್ಪೇಸ್ವಾಮಿ ಜಟಿಲ ಪರಿಸರದಲ್ಲಿ ವಿಶಿಷ್ಟ ಜೀವನಶೈಲಿ, ಸಾಮಾಜಿಕ ಕಾಳಜಿಯನ್ನು ಆರಿಸಿಕೊಂಡವರು…

ತಿಪ್ಪೇಸ್ವಾಮಿ ನಾನು ಬಲ್ಲ ಅತ್ಯಂತ ಆರೋಗ್ಯವಂತ ಮನಸ್ಸಿನ ವ್ಯಕ್ತಿ. ಅವರು ಎಲ್ಲರಂತೆಯೇ ಇದ್ದರು. ಅವರು ನಗಬಲ್ಲವರಾಗಿದ್ದರು. ಜಾತಿ, ವರ್ಗ ಯಾವುದನ್ನೂ ಪರಿಗಣಿಸದೆ ತಮ್ಮ ಪ್ರೀತಿಯನ್ನು ನೀಡಬಲ್ಲವರಾಗಿದ್ದರು. ನಗೆ ಮತ್ತು ಪ್ರೀತಿ ಅವರ ವ್ಯಕ್ತಿತ್ವದ main springs ಎಂದು ನನಗೆ ಅನ್ನಿಸುತ್ತದೆ.”

-ಪಿ‌. ಲಂಕೇಶ್

ಕೃಪೆ: -‘ಮುಟ್ಟಿಸಿಕೊಂಡವರು: ಡಾ. ಬಿ.ಎಂ. ತಿಪ್ಪೇಸ್ವಾಮಿ ನೆನಪಿನ ಪುಸ್ತಕ’ (1998)
ಸಂಪಾದಕರು: -ಬಿ.ವಿ. ವೀರಭದ್ರಪ್ಪ, ಬಿ.ಟಿ. ಜಾಹ್ನವಿ

About The Author

Leave a Reply

Your email address will not be published. Required fields are marked *