ಅಮಿತ್ ಷ್ ಮತ್ತು ಯಡಿಯೂರಪ್ಪ ಕೊರೋನದಿಂದ ಗುಣಮುಖವಾಗಲಿ ಎಂದು ವಿಶೇಷ ಪೂಜೆ: ಜ್ಯೋತಿ ಪ್ರಕಾಶ್.
1 min readಚಳ್ಳಕೆರೆ: ರಾಷ್ಟ್ರದ ಗೃಹ ಮಂತ್ರಿ ಅಮಿತ್ ಷಾ ಮತ್ತು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಷ್ಟು ಬೇಗ ಗುಣಮುಖರಾಗಲೆಂದು ಚಳ್ಳಕೆರೆ ಶ್ರೀ ವೀರಭದ್ರಸ್ವಾಮಿಗೆ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಸಿ ಮಾತನಾಡಿದ ಜ್ಯೋಡಿ ಪ್ರಕಾಶ್ ನಮ್ಮ ರಾಷ್ಟ್ರದ ಬಲಿಷ್ಠ ಗೃಹ ಮಂತ್ರಿ ಶ್ರೀ ಅಮಿತ್ ಶಾ ಜೀ ಹಾಗೂ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ , ಸದಾ ಕೋವಿಡ್ ವಿರುದ್ದ ಹೋರಟದಲ್ಲಿ ಭಾಗಿಯಾಗಿ ಕೋವಿಡ್ ತಡೆಗಟ್ಟಲು ಶ್ರಮಿಸುತ್ತಿದ್ದ ಬಿಎಸ್ ಯಡಿಯೂರಪ್ಪ ಜೀ ಅವರಿಗೆ ಕೊರೋನ ಪಾಸಿಟಿವ್ ಬಂದಿದ್ದು ತುಂಬಾ ನೋವಾಗಿದೆ.ಕೋವಿಡ್ ಮಹಾಮಾರಿ ಯಾರಿಗೆ ಬರುತ್ತದೆ ಹೇಗೆ ಬರುತ್ತದೆ ಎಂದು ಯಾರಿಗೂ ಸಹ ತಿಳಿಯುವುದಿಲ್ಲ.ಆದ್ದರಿಂದ ಎಲ್ಲಾರೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಲಸಿ ಎಂದು ಮನವಿ ಮಾಡಿದರು.ಹಾಗೂ ನಮ್ಮ ಗೃಹ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಅದಷ್ಟು ಬೇಗ ಗುಣಮುಖರಾಗಬೇಕು. ಇಬ್ಬರು ನಾಯಕರು ಸಹ ಈ ದೇಶದ ಮತ್ತು ರಾಜ್ಯದ ಆಸ್ತಿ, ಜನರ ಆಶೀರ್ವಾದ ಅವರ ಮೇಲಿದ್ದು ಅವರ ಸೇವೆ ನಮ್ಮ ರಾಷ್ಟ್ರ ಮತ್ತು ರಾಜ್ಯಕ್ಕೆ ಅವಶ್ಯಕತೆ ಇದ್ದು, ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ ಎಂದು ಹೇಳಿದರು. ಜೆ.ಪಿ.ಸ್ನೇಹಿತರಾದ ಶಿವರಾಜ್, ಜಗದೀಶ್, ಹರೀಶ್, ರವಿಕುಮಾರ್, ಅಜಯ್ ರೆಡ್ಡಿ ಇದ್ದರು.