April 25, 2024

Chitradurga hoysala

Kannada news portal

ಕಾಂಗ್ರೆಸ್ ಪಕ್ಷದಿಂದ ಮಾತ್ರ ದಲಿತ, ಮಾದಿಗ ಸಮುದಾಯದ ಉದ್ಧಾರ: ಮಾಜಿ‌ ಸಚಿವ

1 min read


ಕಾಂಗ್ರೆಸ್ ಪಕ್ಷದಿಂದ ಮಾತ್ರ ದಲಿತ, ಮಾದಿಗ ಸಮುದಾಯದ ಉದ್ಧಾರ: ಮಾಜಿ‌ ಸಚಿವ ಆಂಜನೇಯ

ಹಾನಗಲ್:

ಕಾಂಗ್ರೆಸ್ ಪಕ್ಷವು ದಲಿತ ಹಾಗೂ ಮಾದಿಗ ಸಮುದಾಯದ ಅಭ್ಯುದಯಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಹಾನಗಲ್ ಪಟ್ಟಣದಲ್ಲಿ ಮಂಗಳವಾರ ವಿಧಾನಸಭಾ ಉಪಚುನಾವಣೆಯಲ್ಲಿ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ಆಯೋಜಿಸಿದ್ದ ಮಾದಿಗ ಸಮುದಾಯದ ಮುಖಂಡರ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷವು ದೀನ‌ದಲಿತರ ಬಡವರ ಪರ ಕೆಲಸ ಮಾಡಿದರೆ ಬಿಜೆಪಿಯು ಬಂಡವಾಳಶಾಹಿ ಪರ ಕೆಲಸ ಮಾಡುತ್ತಿದೆ. ಈಗಾಗಲೇ ದೇಶದಲ್ಲಿ ಪೆಟ್ರೊಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ದಿನ ನಿತ್ಯ ಬಳಕೆ ಎಲ್ಲ ವಸ್ತುಗಳ ದುಪ್ಪಟವಾಗಿವೆ‌. ಇದರಿಂದ ಜನಸಾಮಾನ್ಯರು ಬದುಕು ದುಸ್ತರವಾಗಿದೆ. ಆದರೆ, ಬಿಜೆಪಿ ಸರ್ಕಾರ ಮಾತ್ರ ಬಂಡವಾಳಶಾಯಿಗಳ ಪರ ಸದಾ ಬ್ಯಾಟಿಂಗ್ ಬೀಸುತ್ತಿದೆ. ಹೀಗಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರ ಸುವರ್ಣಯುಗವೆಂದು ಹೇಳಬಹುದು. ಈ ಸಮಯದಲ್ಲಿ ಲಕ್ಷಾಂತರ ಬಡವರಿಗೆ ನಿವೇಶನ, ವಸತಿ, ಮೀಸಲಾತಿ,ಮಧ್ಯಾಹ್ನದ ಬಿಸಿಯೂಟ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಹಾಲು ವಿತರಣೆ, ಶಾಲಾ ಮಕ್ಕಳಿಗೆ ಶೂ ಭಾಗ್ಯ, ಎಸಿಪಿ ಟಿಎಸ್ಪಿ ಕಾಯ್ದೆ ಜಾರಿ ಮಾಡಿದೆ.ಮುಂದಿನ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಪಕ್ಷದ ನಾಯಕರಲ್ಲಿ ಮನವರಿಕೆ ಮಾಡಿಕೊಡಲಾಗುವುದು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆಯವರನ್ನು ಅತ್ಯಧಿಕ ಮತಗಳಿಂದ ಜಯಗಳಿಸಲು ಶ್ರಮಿಸುವಂತೆ ಸಮುದಾಯದ ಮುಖಂಡರಿಗೆ ಕರೆ ನೀಡಿದರು.

ಶ್ರೀನಿವಾಸ್ ಮಾನೆಯವರು ಕೋವಿಡ್ 19, ಲಾಕ್ಡೌನ್ ಇದ್ದ ಸಮಯದಲ್ಲಿ ಎಲ್ಲಾ ಜನರನ್ನು ಪ್ರಾಣ ತೆಗೆಯುವ ಹಂತದಲ್ಲಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಬೇರೆ ಜನರ ಪ್ರಾಣವನ್ನು ಕಾಪಾಡಿದ ಪುಣ್ಯಾತ್ಮರಾಗಿದ್ದಾರೆ. ಬಹಳಷ್ಟು ಜನರು ರಾಜಕೀಯ ಮಾಡುತ್ತಾರೆ. ಸಮಾಜದಲ್ಲಿ ಹುಟ್ಟಿದ್ದೇನೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಹಾಗೂ ಕಾಂಗ್ರೆಸ್ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂಬ ನಂಬಿಕೆಯಿಂದ ಕಳೆದ ಮೂರು ವರ್ಷಗಳಿಂದಲೂ ಹಾನಗಲ್ ಕ್ಷೇತ್ರದಲ್ಲಿ ಬಡಜನತೆಗೆ ಆಹಾರ ಕಿಟ್ ವಿತರಣೆ, ನೊಂದ ಜನರಿಗೆ, ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗೆಯೇ ಹಣಕಾಸಿನ ನೆರವನ್ನು ಸಹ ನೀಡಿದ್ದಾರೆ. ದಿನದ 24 ತಾಸು ಸಾರ್ವಜನಿಕ ಸೇವೆಗೆ ಅವರ ಜೀವನ ಮುಡಿಪಾಗಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾರ್ವಜನಿಕ ಕೆಲಸ ನಿರ್ವಹಿಸಲು ಈ ಉಪ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ ಶಕ್ತಿ ತುಂಬುವಂತೆ ಮನವಿ ಮಾಡಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಸೇರಿದಂತೆ ಅನೇಕ‌ ಮುಖಂಡರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *