April 25, 2024

Chitradurga hoysala

Kannada news portal

ಶಿವಸಂಚಾರ ಮತ್ತು ನಾಟಕೋತ್ಸವ ನಿರಂತರವಾಗಿ 24 ವರ್ಷಗಳ ಯಶಸ್ವಿಯಾನ ಮುಗಿಸಿ 25ಕ್ಕೆ ಕಾಲಿಟ್ಟಿರುವುದೇ ಒಂದು ದಾಖಲೆ : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

1 min read

ಶಿವಸಂಚಾರ ಮತ್ತು ನಾಟಕೋತ್ಸವ ನಿರಂತರವಾಗಿ 24 ವರ್ಷಗಳ ಯಶಸ್ವಿಯಾನ ಮುಗಿಸಿ 25ಕ್ಕೆ ಕಾಲಿಟ್ಟಿರುವುದೇ ಒಂದು ದಾಖಲೆ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

 

ಸಾಣೇಹಳ್ಳಿ, ನವೆಂಬರ್ 2;
ಶ್ರೀ ಶಿವಕುಮಾರ ಕಲಾಸಂಘ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಲೋಕಕ್ಕೆ ಅನ್ನವನ್ನು ಕೊಡುವ ಶಕ್ತಿ ಇರುವುದು ಕೃಷಿಕನಿಗೆ ಮಾತ್ರ. ಆದರೆ ಕೃಷಿಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಪ್ರಮಾಣಿಕ ಪ್ರಯತ್ನದ ಕೊರತೆ ಎದ್ದು ಕಾಣುತ್ತಿದೆ. ನೀರು, ವಿದ್ಯುತ್, ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡಬೇಕಾಗಿದೆ. ಕೃಷಿಕರು ಸೋಮಾರಿಗಳಲ್ಲ. ಕಾಯಕವೇ ಕೈಲಾಸವೆಂದು ದುಡಿಯುವವರು. ಕೃಷಿಕರನ್ನು ಉಪೇಕ್ಷಿ ಮಾಡಿದರೆ ಸರಕಾರಗಳು ಉಳಿಯಲು ಸಾಧ್ಯವಿಲ್ಲ. ಶಿವಸಂಚಾರ ಮತ್ತು ನಾಟಕೋತ್ಸವ ನಿರಂತರವಾಗಿ 24 ವರ್ಷಗಳ ಯಶಸ್ವಿಯಾನ ಮುಗಿಸಿ 25ಕ್ಕೆ ಕಾಲಿಟ್ಟಿರುವುದೇ ಒಂದು ದಾಖಲೆ. ರಂಗಭೂಮಿಯ ಮೂಲಕ ಜನಜಾಗೃತಿಯನ್ನುಂಟುಮಾಡುವುದು ನಮ್ಮ ಸದಾಶಯ. ಒಂದು ನಾಡಿನ ನಿಜವಾದ ಸಂಪತ್ತು ಕಲೆ, ಸಾಹಿತ್ಯ, ಸಂಗೀತ. ಕಲಾವಿದರು ನಾಡಿನ ಅನಭಿಷಕ್ತ ದೊರೆಗಳು. ಕೆಲವರು ಶಿವಸಂಚಾರದ ಕನಸು ನನಸಾಗಿದೆಯೇ ಎಂದು ಕೇಳುವರು. ಶಿವಸಂಚಾರ ಭೌತಿಕ ಕಟ್ಟಡದಂತೆ ಒಮ್ಮೆಲೆ ಕಟ್ಟಿ ಮುಗಿಸುವಂತಹುದಲ್ಲ. ಅದು ಕಣ್ಣಿಗೆ ಕಾಣದ ಆಂತರಿಕ ಬದಲಾವಣೆ. ಉತ್ತಮ ಬೀಜ ಬಿತ್ತಿದರೂ ಅದು ಮೊಳೆತು, ಚಿಗಿತು, ಫಲ ಕೊಡಲು ಸಾಕಷ್ಟು ಸಮಯ ಕಾಯಬೇಕು. ಹಾಗಿರುವಾಗ ಶಿವಸಂಚಾರ ಫಲ ಕೊಟ್ಟಿದೆಯೇ, ಫಲ ಕೊಟ್ಟಿಲ್ಲವೇ ಎಂದು ಹೇಳುವುದು ಕಷ್ಟಸಾಧ್ಯ. ಏಕೆಂದರೆ ಅದು ಕಣ್ಣಿಗೆ ಕಾಣದ ಪರಿವರ್ತನೆ.
ಸರ್ಕಾರ ರಂಗಭೂಮಿಗೆ ಹೆಚ್ಚು ಆದ್ಯತೆ ನೀಡಿ ಆರ್ಥಿಕ ನೆರವನ್ನು ನೀಡಬೇಕು. ಕನ್ನಡ ನಾಡಿನಲ್ಲಿ ಕನ್ನಡ ಉಳಿದರೆ ಮಾತ್ರ ಕನ್ನಡ ನೆಲ, ಜಲ, ಸಂಸ್ಕøತಿ, ಕನ್ನಡಿಗರನ್ನು ಉಳಿಸಿಕೊಳ್ಳಲು ಸಾಧ್ಯ. ಇವತ್ತು ಕನ್ನಡ ಪ್ರಾಥಮಿಕ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಕಾರಣ ಆಂಗ್ಲಭಾಷೆಗೆ ಒತ್ತು ಕೊಟ್ಟಿರುವುದು. ಪ್ರಾಥಮಿಕ ಹಂತದಿಂದಲೇ ಕನ್ನಡವನ್ನು ಒಂದು ಭಾಷೆಯನ್ನಾಗಿಯಾದರೂ ಕಡ್ಡಾಯವಾಗಿ ಕಲಿಸುವ ಬಿಗಿಯಾದ ಕಾನೂನು ಜಾರಿಯಲ್ಲಿ ಬರಬೇಕು. ಕನ್ನಡ ಸಾಹಿತ್ಯ, ಸಂಸ್ಕøತಿ, ಪರಂಪರೆ ಕೇವಲ ಇತಿಹಾಸವಾಗದೆ ವರ್ತಮಾನ, ಮತ್ತು ಭವಿಷ್ಯವೂ ಆಗಬೇಕು. ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವ ದಿಟ್ಟ ನಿಲವನ್ನು ಸರಕಾರ ತೆಗೆದುಕೊಳ್ಳಬೇಕಾಗಿದೆ. ನಾಡನ್ನು ಕಟ್ಟುವವರು ಕಲಾವಿದರು, ಸಾಹಿತಿಗಳು, ಸಂಸ್ಕøತಿಯ ವಾರಸುದಾರರು, ಕೃಷಿಕರು.
ಈ ವರ್ಷ ಕೊರೊನಾ ಕರುಣೆ ತೋರಿರುವ ಕಾರಣಕ್ಕಾಗಿ ಈ ಹಿಂದಿನಂತೆ ನಮ್ಮ ಬಯಲು ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ನಾಟಕೋತ್ಸವ ನಡೆಯುತ್ತಿದೆ. ಈ ವರ್ಷದ ನಮ್ಮ ನಾಟಕೋತ್ಸವದ ಧ್ಯೇಯವಾಕ್ಯ `ಒಕ್ಕಲಿಗ ಒಕ್ಕದಿರೆ ಜಗವೆಲ್ಲ ಬಿಕ್ಕುವುದು’ ಎನ್ನುವುದು. ಕೃಷಿಕ ಈ ದೇಶದ ಬೆನ್ನೆಲಬು ಎಂದು ಬಾಯಲ್ಲಿ ಹೇಳಿದರೆ ಸಾಲದು. ಸರ್ಕಾರ ಕೃಷಿಕರಿಗೆ ಬೇಕಾದ ನೀರು, ವಿದ್ಯುತ್, ಗೊಬ್ಬರ, ಬೀಜ ಹಾಗೂ ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವ ಸಂಕಲ್ಪ ಮಾಡಿದಾಗ ಕೃಷಿಕ ನಾಡಿಗೆ ಬೇಕಾದ ಆಹಾರಪದಾರ್ಥಗಳನ್ನು ಬೆಳೆದುಕೊಡಬಲ್ಲ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಸಿಜಿಕೆ ನುಡಿಚಿತ್ರ ಟಂಕಸಾಲೆ ಟನೆ ಮಾಡಿದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಮಾತನಾಡಿ ಸುದೈವ ರಾಜ್ಯದ ಉದ್ದಗಲಕ್ಕೆ ಮಳೆಯಾಗಿ ಕೆರೆಕೆಟ್ಟಿಗಳು ತುಂಬಿ ಒಳ್ಳೆಯ ಬೆಳೆ ಬರುವ ನಿರೀಕ್ಷೆಯಿದೆ. ಕೋವಿಡ್ ಕಾರಣಕ್ಕಾಗಿ ಇಂಥ ಭವ್ಯ ಕಾರ್ಯಕ್ರಮಗಳು ಆಗಿರಲಿಲ್ಲ. ಸುದೈವದಿಂದ ಇದೂ ಸಾಧ್ಯವಾಗಿದೆ. ಸಾಣೇಹಳ್ಳಿಯಲ್ಲಿ ಸಾಂಸ್ಕøತಿಕ ವಿಶ್ವವಿದ್ಯಾಲಯದ ಆರಂಭದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಿದ್ದರೆ ಇಲ್ಲಿಯೇ ಅನುಮತಿಯ ಆದೇಶವನ್ನು ನೀಡುತ್ತಿದ್ದೆ. ಬಸವರಾಜಬೊಮ್ಮಾಯಿಯವರಿಗೂ ಈ ಮಾತನ್ನು ಹೇಳುವೆ. ಅಧಿಕಾರ ಇರಲಿ, ಇಲ್ಲದಿರಲಿ ನಾನು ಸಾಣೇಹಳ್ಳಿಯ ನಾಟಕೋತ್ಸವಕ್ಕೆ ಬರುವುದು ಸಂಪ್ರದಾಯವೇ ಆಗಿದೆ. ತರಳಬಾಳು ಮಠ ನಾಡಿನ ಅಧ್ಯಾತ್ಮಿ, ಸಾಂಸ್ಕøತಿಕ, ಶೈಕ್ಷಣಿಕವಲಯದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದೆ. ಸಾಣೇಹಳ್ಳಿಯ ಶಾಖಾಮಠವೂ ಮೂಲ ಮಠದ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದೆ. ಸಾಣೇಹಳ್ಳಿಯ ಕುಗ್ರಾಮ ಸಾಂಸ್ಕøತಿಕ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಪಂಡಿತಾತರಾಧ್ಯ ಶ್ರೀಗಳ ಶ್ರಮ ಮತ್ತು ಬದ್ಧತೆ ಇದೆ.  ಉತ್ಸವದ ಉದ್ಘಾಟನೆಯ್ನನು ದೀಪಹಚ್ಚುವ ಮೂಲಕ ನೆರವೇರಿಸಿ ಮಾತನಾಡಿದ ಖ್ಯಾತ ಕವಿ ಡಾ. ದೊಡ್ಡರಂಗೇಗೌಡ ಕನ್ನಡ ಭಾಷೆ, ಸಂಸ್ಕøತಿಯ ಬೇರುಗಳು ಆಳವಾಗಿ ಬೇರೂರಿವೆ. ಇದನ್ನು ಯಾರೂ ನಾಶಪಡಿಸಲು ಸಾಧ್ಯವಿಲ್ಲ. ಕನ್ನಡಿಗರು ಒಳ್ಳೆಯವರಿಗೆ ಒಳ್ಳೆಯವರು, ಕೆಟ್ಟವರಿಗೆ ಕೆಟ್ಟವರು. ಕನ್ನಡಿಗರ ಶೌರ್ಯ ಪರಂಪರೆಯನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಪಂಪ, ರನ್ನ, ಪೊನ್ನ, ಜನ್ನ ಮುಂತಾದ ಕವಿಗಳ ಕಾವ್ಯಗಳು ರೋಮಾಂಚನವನ್ನುಂಟು ಮಾಡುತ್ತವೆ. 12 ನೆಯ ಶತಮಾನದ ವಚನಕಾರರ ವಚನಗಳು ವಿಶ್ವದಲ್ಲಿ ಹೊಸಬಗೆಯ ಜಾಗರೂಕತೆ, ಎಚ್ಚರವನ್ನುಂಟು ಮಾಡಿವೆ. ಬಸವಣ್ಣ ಸಮಾಜವಿಜ್ಞಾನಿ. ಅವರಷ್ಟು ಸುಧಾರಣೆ ಮಾಡಿದ ಸುಧಾರಕ ಇನ್ನೊಬ್ಬರಿಲ್ಲ. ಇಂಗ್ಲೀಷ್ ಶ್ರೇಷ್ಠ ಎನ್ನುವವರಿಗೆ ಚಾಜರ್ ಇಂಗ್ಲಿಷ್ ಸಾಹಿತ್ಯದ ಮೊದಲ ಕವಿ. ಈತ 12ನೆಯ ಶತಮಾನದಲ್ಲಿ ಹುಟ್ಟಿದ. ಅಷ್ಟೊತ್ತಿಗೆ ಕನ್ನಡದಲ್ಲಿ ಅನೇಕ ಕವಿಗಳು ತಮ್ಮ ಶ್ರೇಷ್ಠತೆಯನ್ನು ಮೆರೆದಿದ್ದರು ಎನ್ನುವುದನ್ನು ಅರಿಯಬೇಕು. ಸೂರ್ಯ, ಚಂದ್ರರಿರುವವರೆಗೆ ಕನ್ನಡ ಇರುತ್ತೆ ಎನ್ನುವಲ್ಲಿ ಯಾವ ಅನುಮಾನವೂ ಬೇಡ. ಆಧುನಿಕ ಕನ್ನಡ ಸಾಹಿತ್ಯವೂ ಕೂಡ ಜಗತ್ತಿನ ಉತ್ಕøಷ್ಟ ಸಾಹಿತ್ಯವೇ ಆಗಿದೆ. ಸರ್ವಜ್ಞ ತನ್ನ ತ್ರಿಪದಿಯಲ್ಲಿ ಅನುಭವದ ಜ್ಞಾನದ ಬೆಳಕನ್ನು ಪಸರಿಸಿದ್ದಾನೆ. ಕನ್ನಡ ಹಿಂಜರಿಕೆ ಬೇಡ. ನಾನು ನನ್ನ ಹೆಂಡತಿ ಮಕ್ಕಳು ಓದಿರುವುದೇ ಕನ್ನಡದಲ್ಲಿ. ಕನ್ನಡಿಗರಲ್ಲಿ ಪ್ರತಿಭೆ, ಶೌರ್ಯ ದಟ್ಟವಾಗಿವೆ. ಸಾಣೇಹಳ್ಳಿಯಲ್ಲಿ `ಸಾಂಸ್ಕøತಿಕ ವಿಶ್ವವಿದ್ಯಾಲಯ’ ತೆರೆಯುವಂತಾಗಲಿ, ಶ್ರೀಮಠ ಮತ್ತೊಂದು ಸಿದ್ಧಗಂಗ ಮಠದಂತೆ ಬೆಳೆಯಲಿ ಎಂದರು.

ನಾಟಕೋತ್ಸವದ ಉದ್ಘಾಟನೆಯನ್ನು ವಚನವನ್ನು ಓದುವುದರ ಮೂಲಕ ನೆರವೇರಿಸಿ ಮಾತನಾಡಿದ ರಂಗಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣ ಸಿಜಿಕೆಯವರಿಂದಾಗಿ ಶಿವಸಂಚಾರ ಮತ್ತು ಗ್ರೀಕ್ ಮಾದರಿಯ ರಂಗಮಂದಿರ ಸಾಣೇಹಳ್ಳಿಯಲ್ಲಿ ಮೈದಳೆಯುವಂತಾಯಿತು. ರಾಜ್ಯದ ಪ್ರಮುಖ ನಾಯಕರು ನಾಟಕೋತ್ಸವಕ್ಕೆ ಬರಲೇ ಬೇಕು ಎನ್ನುವಷ್ಟರ ಮಟ್ಟಿಗೆ ಅಲಿಖಿತ ನಿಯಮವೇ ಆಗಿರುವುದು ಇಲ್ಲಿನ ಚಟುವಟಿಕೆಗಳಿಗೆ ಹಿಡಿದ ಸಾಕ್ಷಿಯಾಗಿದೆ. ಬಸವಸಂಚಾರ, ಮತ್ತೆ ಕಲ್ಯಾಣ ಅಭಿಯಾನದಲ್ಲಿ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಂಡಿರುವುದು ದಾಖಲೆಯಾಗಿದೆ. ಸ್ವಾಮಿಜಿಗಳಿಗೆ ನಾಟಕ ಅಡಿಸುವುದು, ಬರೆಯುವುದು, ಸಂಘಟಿಸುವುದನ್ನು ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಯಡಿಯೂರಪ್ಪನವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರವಾದುದು. ಅವರು ಇದೇ ವೇದಿಕೆಯ ಮೇಲೆ ಪ್ರಸ್ತಾಪ ಮಾಡಿದಾಗ ತೆರಿಗೆಯನ್ನು ತೆಗೆದು ಹಾಕಿದರು. ಬಸವಣ್ಣನವರ ಸುತ್ತ ಇರುವ ಪ್ರಸಿದ್ಧ ನಾಲ್ಕು ಕನ್ನಡ ನಾಟಕಗಳನ್ನು ಹಿಂದಿಯಲ್ಲಿ ಅನುವಾದಗೊಳಿಸಿ ರಾಷ್ಟ್ರಾದ್ಯಂತ ಪ್ರದರ್ಶನ ಮಾಡಿರುವ ಭಾರತ ರಂಗ ಸಂಚಾರಕ್ಕೂ ಯಡಿಯೂರಪ್ಪನವರ ಕೊಡುಗೆ ಇದೆ.

ನೀನಲ್ಲದೆ ಮತ್ತಾರೂ ಇಲ್ಲವಯ್ಯ ಎನ್ನುವ ವಚನ ನೃತ್ಯ ರೂಪಕಗಳನ್ನು ಅನ್ಯ ರಾಜ್ಯಗಳಲ್ಲಿ ಪ್ರದರ್ಶನ ಮಾಡುವಲ್ಲಿಯೂ ಯಡಿಯೂರಪ್ಪನವರ ಕೊಡುಗೆ ಇದೆ. ಸಾಣೇಹಳ್ಳಿ ರಂಗಭೂಮಿಯ ಕೂಡಲಸಂಗಮವಾಗಿದೆ ಎಂದರು.
ಶಿವಸಂಚಾರ ನಾಟಕಗಳ ಪಾತ್ರಧಾರಿಗಳಿಗೆ ಬಣ್ಣಹಚ್ಚುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬೆಂಗಳೂರಿನ ರಾಷ್ಟ್ರೀಯ ರಂಗಶಾಲಾ ಶಾಖೆಯ ನಿರ್ದೇಶಕಿ ವೀಣಾ ಶರ್ಮಾ ಭೂಸನೂರಮಠ ಸ್ವಚ್ಛ, ಸಮೃದ್ಧ ದೇಶ ನಿರ್ಮಾಣದಲ್ಲಿ ಕಲಾವಿದರ ಪಾತ್ರ ಬಹುಮಹತ್ವದ್ದು. ಸಾಣೇಹಳ್ಳಿಯಲ್ಲಿರುವ ರಂಗಚಟುವಟಿಕೆಗಳು, ರಂಗಮಂದಿರಗಳು, À್ಕøತಿ, ಸಂಸ್ಕಾರ ನನಗೆ ಬದುಕು ಕಟ್ಟಿಕೊಟ್ಟಿದೆ. ಕರ್ನಾಟಕದ ಶೈಕ್ಷಣಿಕ, ಸಾಂಸ್ಕøತಿಕ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಬಹಳ ಮುಖ್ಯವಾದುದು ಎಂದರು.
ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್ ಲಿಂಗಮೂರ್ತಿ ಶಿವಸಂಚಾರ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿ ಶಿವಸಂಚಾರ ಜ್ಞಾನದ, ವಿಜ್ಞಾನದ, ವಿಕಾಸದ, ವಿಶಾಲತೆಯ, ಜೀವನಾಡಿಯ ಸಂಚಾರ. ಸಾಣೇಹಳ್ಳಿಯ ರಂಗಚಟುವಟಿಕೆಗಳು ಕನ್ನಡನಾಡಿಗೇ ಹೆಮ್ಮೆ. ಪೂಜ್ಯರ ದರ್ಶನವೇ ಸೌಭಾಗ್ಯದ ಸಂಗತಿ. ನಾನೂ ಒಬ್ಬ ಶಿವಕುಮಾರದ ಕಲಾಸಂಘದ ಕಾರ್ಯಕರ್ತ. ಪೂಜ್ಯರು ಮತ್ತು ಯಡಿಯೂರಪ್ಪನವರು ನನ್ನನ್ನು ಗುರುತಿಸಿ ಉನ್ನತ ಹುದ್ದೆಯನ್ನು ಕೊಟ್ಟಿರುವುದು ಹೆಮ್ಮೆಯ ಸಂಗತಿ. ಅಧಿಕಾರ ಇರಲಿ ಇಲ್ಲದಿರಲಿ ಪ್ರತಿವರ್ಷ ನಾಟಕೋತ್ಸವಕ್ಕೆ ಯಡಿಯೂರಪ್ಪನವರು ಬರುತ್ತಿದ್ದಾರೆ. ಅವರೊಂದು ಕರ್ನಾಟಕದ ಶಕ್ತಿ. ಅಧಿಕಾರದಿಂದ ಇಳಿದರೂ ಜನಪರವಾಗಿ ಕೆಲಸ ಮಾಡುವಂಥ ಕೆಲಸ ಮಾಡುತ್ತಿದ್ದಾರೆ. ಇದೊಂದು ಇತಿಹಾಸ ಎಂದರು.
ಅತಿಥಿಗಳಾದ ವಿಧಾನ ಪರಿಷತ್ ಸದಸ್ಯ ಎಸ್ ರುದ್ರೇಗೌಡ ಪಂಡಿತಾರಾಧ್ಯ ಶ್ರೀಗಳು ಸಂಪಾದಿಸಿದ `ಸಮಾಧಾನ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ ನನ್ನನ್ನು ಕೈಗಾರಿಕ ಕ್ಷೇತ್ರದಿಂದ ಸಾಮಾಜಿಕ ಕ್ಷೇತ್ರಕ್ಕೆ ಕರೆತಂದವರು, ನನ್ನ ರಾಜಕೀಯ ಗುರುಗಳು ಯಡಿಯೂರಪ್ಪನವರು. ಮಹಾ ಶಕ್ತಿಗಳ ಸಂಗಮ ಇಂದಿನ ವೇದಿಕೆ. ಪಂಡಿತಾರಾಧ್ಯ ಶ್ರೀಗಳ ಸಾಮಾಜಿಕ, ಸಾಂಸ್ಕøತಿಕ ಕಳಕಳಿ ಅನನ್ಯವಾದುದು. ನಾಟಕಪ್ರದರ್ಶನ ನೋಡುವದಕ್ಕಷ್ಟೇ ಸೀಮಿತವಾಗದೆ ಜೀವನವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಮಂದಡಿಯಿಡೋಣ ಎಂದರು.
ಚನ್ನಗಿರಿ ಶಾಸಕ, ಕೆ ಎಸ್ ಡಿ ಎಲ್ ಅಧ್ಯಕ್ಷ ಪಂಡಿತಾರಾಧ್ಯ ಶ್ರೀಗಳು ಸಂಪಾದಿಸಿದ `ಹಿಂದಣ ಹೆಜ್ಜೆಯ ನೋಡಿ..’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಮಾಡಾಳು ವಿರೂಪಾಕ್ಷಪ್ಪ ಯಡಿಯೂರಪ್ಪನವರಿಗೆ ಯಡಿಯೂರಪ್ಪನವರೇ ಸಾಟಿ. ಕರ್ನಾಟಕದ ಅಭಿವೃದ್ಧಿಯೇ ಅವರ ಮಂತ್ರ. ಉಚಿತ ಲಸಿಕೆ ಕೊಡಿಸಿದ್ದರ ಫಲವಾಗಿ ಕರೋನಾ ಹಿಮ್ಮೆಟ್ಟಿದೆ. ಶಿವಸಂಚಾರದ, ನಾಟಕೋತ್ಸವದ 25 ವರ್ಷಗಳ ಸಾಧನೆ ಅನುಪಮವಾದುದು. ಕನ್ನಡ ಭಾಷೆ ಬೆಂಗಳೂರಿನಲ್ಲಿ ನಶಿಸುತ್ತಿದ್ದರೂ ಮಧ್ಯ ಕರ್ನಾಟಕದಲ್ಲಿ ಬೆಳಗುತ್ತಿದೆ. ಬಸವರಾಜ ಬೊಮ್ಮಾಯಿ ಯಡಿಯೂರಪ್ಪನವರ ಮಾನಸ ಪುತ್ರರು. ಇವರು ಮನಸ್ಸು ಮಾಡಿದರೆ ಸಾಣೇಹಳ್ಳಿಯಲ್ಲಿ ಸಾಂಸ್ಕøತಿಕ ವಿಶ್ವವಿದ್ಯಾಲಯ ಸ್ಥಾಪನೆಯಾಗುವುದರಲ್ಲಿ ಅಸಾಧ್ಯವಾದುದೇನಲ್ಲ. ಒಕ್ಕಲಿಗ ಮುದ್ದಣ್ಣ ಅಪ್ಪಟ ಕೃಷಿ ಕಾಯಕದ ಶರಣನಾಗಿದ್ದ. ಪಂಡಿತಾರಾಧ್ಯ ಶ್ರೀಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಕ್ರಾಂತಿಯನ್ನು ಮಾಡಿದ್ದಾರೆ. ಏತ ನೀರಾವರಿಯ ಮೂಲಕ ಕೆರೆಗಳನ್ನು ತುಂಬಿಸಬಹುದು ಎನ್ನುವುದನ್ನು ಮಾಡಿ ತೋರಿಸಿದವರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳವರು. ಇದಕ್ಕೆ ಒತ್ತಾಸೆಯಾಗಿ ನಿಂತವರು ಯಡಿಯೂರಪ್ಪನವರು.

ಆರಂಭದಲ್ಲಿ ಶಿವಸಂಚಾರದ ಸಿದ್ಧರಾಮಕೇಸಾಪುರ, ಕೆ ಜ್ಯೋತಿ, ಕೆ ದಾಕ್ಷಾಯಣಿ, ಹೆಚ್ ಎಸ್ ನಾಗರಾಜ್ ಮತ್ತು ತಬಲ ಸಾಥಿ ಶರಣ್ ತಂಡ ವಚನಗೀತೆ, ಭಾವಗೀತೆ, ಜನಪದಗೀತೆ, ಕನ್ನಡಗೀತೆಗಳನ್ನು ಹಾಡಿ ಪ್ರೇಕ್ಷಕರ ಗಮನಸೆಳೆದರು. ನಾಡು ನುಡಿಗಾಗಿ ಸೇವೆ ಸಲ್ಲಿಸಿ ನಿಧನರಾದ ಕಲಾವಿದರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು. ಸಾಣೇಹಳ್ಳಿಯ ಶ್ರೀ ಗುರಪಾದೇಶ್ವರ ಪ್ರೌಢಶಾಲೆ ಮತ್ತು ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡ ನಾಡು ನುಡಿ ಕುರಿತಗೀತೆ, ವಚನಗೀತೆಗೆ ಆಕರ್ಷಕ ನೃತ್ಯರೂಪಕಗಳನ್ನು ನೀಡಿದರು. ಸಿಜಿಕೆ ಅಂಚೆ ಲಕೋಟೆಯನ್ನು ಜಯಲಕ್ಷ್ಮೀ ಸಿಜಿಕೆಯವರು ಪೂಜ್ಯರಿಗೆ ಸಮರ್ಪಿಸಿದರು. ಲಿಂಗಾಯತ ದಿನದರ್ಶಿಕೆ ಲೋಕಾರ್ಪಗೊಂಡಿತು. ಶಿವಸಂಚಾರ-21ರ ಕೈಪಿಡಿ ಮತ್ತು ಪಂಡಿತಾರಾಧ್ಯ ಶ್ರೀಗಳು ಸಂಪಾದಿಸಿದ ಹಿಂದಣಹೆಜ್ಜೆಯ ನೋಡಿ ಮತ್ತು ಸಮಾಧನ ಕೃತಿಗಳು ಲೋಕಾರ್ಪಣೆಗೊಂಡವು. ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.
ಹೆಚ್ ಎಸ್ ದ್ಯಾಮೇಶ್

About The Author

Leave a Reply

Your email address will not be published. Required fields are marked *