ರಾಮ ಮಂದಿರ ಭೂಮಿ ಪೂಜೆಗೆ ಆಹ್ವಾನ ನೀಡಿರುವುದು ಹರ್ಷ ತಂದಿದೆ: ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ
1 min readಚಿತ್ರದುರ್ಗ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆಗೆ ನನ್ನನ್ನು ಆಹ್ವಾನ ನೀಡಿದ್ದಾರೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು
ನಗರದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀಗಳು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿರುವುದು ತುಂಭಾ ಸಂತೋಷವಾಗಿದೆ.ಕರ್ನಾಟಕದಿಂದ ಹಲವು ಮಠಾಧೀಶರ ಜೊತೆ ನನಗೂ ಆಹ್ವಾನಿಸಿದ್ದಾರೆ ಎಂದರು.
ಇಂದು ಸಂಜೆ ಅಯೋಧ್ಯೆಗೆ ತೆರಳಲು ತಯಾರಿ ಮಾಡಿದ್ದೇವೆ. ನಮಗೆ ಅದೊಂದು ಐತಿಹಾಸಿಕ ಕ್ಷಣ. ಸಮಸ್ತ ಭಾರತೀಯರ ಪ್ರತಿಕವಾಗಿ ಶಂಕುಸ್ಥಾಪನೆ ಸಮಾರಂಭ ಸಾಕ್ಷಿಕರಿಸಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ.ಇಂಥ ಸುವರ್ಣ ಸಮಯಕ್ಕೆ ಕಾತರರಾಗಿದ್ದೇವೆ.
ರಾಜ್ಯದಿಂದ ಎಂಟು ಮಂದಿ ಮಠಾಧೀಶರಿಗೆ ಆಹ್ವಾನ ಮಾಡಿರುವ ಮಾಹಿತಿ ಇದೆ.ಅಯೋಧ್ಯೆ ಹೋರಾಟ ಹುಟ್ಟಿದಾಗ ನಾನು ಹುಟ್ಟಿರಲಿಲ್ಲ, ಇಂಥ ಐತಿಹಾಸಿಕವಾಗಿ ಸಾಕ್ಷಿಕರಿಸುವ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುತ್ತಿದ್ದೇವೆ.
ನಂಬಿಕೆಗಳ ಆಧಾರದ ಮೇಲೆ ದೇಶದಲ್ಲಿ ಬಹಳಷ್ಟು ಆಚರಣೆ ನಡೆಯುತ್ತವೆ. ಇಂಥ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಗೌರವಯುತವಾಗಿ ನಾವು ಭಾಗವಹಿಸುತ್ತೇವೆ ಎಂದು ಹೇಳಿದರು.