March 29, 2024

Chitradurga hoysala

Kannada news portal

ಪಾರಿಜಾತ ಇದು ಬಹುಕಾಲ ಬದುಕುವ ಒಂದು ಪುಟ್ಟಮರ

1 min read



ಪಾರಿಜಾತ

ಇದು ಬಹುಕಾಲ ಬದುಕುವ ಒಂದು ಪುಟ್ಟಮರ. ಸಂಜೆಯಲ್ಲಿ ಅರಳಿ, ರಾತ್ರಿಯಿಡೀ ಸುಗಂಧ ಬೀರುವ ಪುಟ್ಟ ಬಿಳಿಯ ಹೂಗಳನ್ನು ಬಿಡುವ ಮತ್ತು ಮುಂಜಾನೆ ಹೂಗಳೆಲ್ಲ ತಾನಾಗೆ ಉದುರುವಂತೆ ಮಾಡುವ, ಈ ಗಿಡ ಮನೆಯಂಗಳಕ್ಕೆ ಒಂದು ಶೋಭೆ, ಪುರಾಣ, ಇತಿಹಾಸಗಳಲ್ಲಿ ಬಹು ಪ್ರಸಿದ್ಧಕೂಡ. ಬೀಜ ನೆಟ್ಟ ಒಂದು ವರ್ಷದ ನಂತರ ಔಷಧಕ್ಕಾಗಿ ಬಳಸಲು ಯೋಗ್ಯವಾದ ಎಲೆಗಳನ್ನು ಪಡೆಯಬಹುದು. ಔಷಧೀಯ ಗುಣಗಳು ಅನೇಕ. ಬಳಕೆಯಾಗುವ ಭಾಗಗಳೆಂದರೆ ಎಲೆ, ಹೂವು ಮತ್ತು ತೊಗಟೆ,ಉಪಯೋಗಗಳು ೧. ಮಲೇರಿಯಾ ಜ್ವರದಲ್ಲಿ – ೬-೭ ಚಿಗುರು ಎಲೆಗಳಿಗೆ ಸ್ವಲ್ಪ ನೀರನ್ನು ಸೇರಿಸಿ ಅರೆದು ಬರುವ ರಸದೊಂದಿಗೆ, ಅರ್ಧ ಟೀ ಚಮಚ ಹಸಿಶುಂಠಿ ರಸವನ್ನು ಸೇರಿಸಿ ದಿನಕ್ಕೆ ೨-೩ ಬಾರಿ ಕೊಡುವುದರಿಂದ, ಹತೋಟಿಯಲ್ಲಿಡಬಹುದು, ಅಂತೆಯೇ ಬಿಟ್ಟು ಬಿಟ್ಟು ಬರುವ ಜ್ವರ ಕಡಿಮೆಯಾಗುತ್ತದೆ.

೨. ಅಥವಾ ಎಲೆಯರಸ ೧ -೨ ಟೀ ಚಮಚ ರಸಕ್ಕೆ ಸಮಪ್ರಮಾಣ ಜೇನು ಸೇರಿಸಿ, ಸ್ವಲ್ಪ (ಅರ್ಧ ಚಿಟಿಕೆ) ಉಪ್ಪು ಸೇರಿಸಿ ದಿನದಲ್ಲಿ ೩ ಬಾರಿ ಆಹಾರಕ್ಕೆ ಮೊದಲು ಸೇವಿಸುವುದರಿಂದ ಮಲೇರಿಯಾ ಜ್ವರ ನಿಯಂತ್ರಣಕ್ಕೆ ಬರುತ್ತದೆ.

೩. ೧ ಚಮಚ ಎಲೆಯ ರಸಕ್ಕೆ ಸ್ವಲ್ಪ ಜೇನು ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಕ್ಕಳಿಗೆ ದಿನದಲ್ಲಿ ಒಂದು ಬಾರಿ ಆಹಾರಕ್ಕೆ ಮೊದಲು ಕೊಡುವುದರಿಂದ ಜಂತು ಹುಳುಗಳ ತೊಂದರೆ ನಿವಾರಣೆಯಾಗುತ್ತದೆ.

೪. ೩-೪ ಚಮಚ ಎಲೆಯ ರಸಕ್ಕೆ ಒಂದೂವರೆ ಅಥವಾ ಎರಡು ಚಮಚ ಜೇನು ಸೇರಿಸಿ ದಿನದಲ್ಲಿ ೨ ಬಾರಿ ಆಹಾರಕ್ಕೆ ಮೊದಲು ಸೇವಿಸುವುದರಿಂದ ಸಂಧಿವಾತ, ಗೃಧ್ರಸಿ (Sciatica) ವಾತರೋಗ ಕಡಿಮೆಯಾಗುತ್ತದೆ.

೫. ಬೀಜಗಳನ್ನು ಚೆನ್ನಾಗಿ ಅರೆದು, ತಲೆಗೆ ಲೇಪಿಸಿ, ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದಿಂದ ತಲೆಯಲ್ಲಿ ಹೊಟ್ಟು ಬರುವುದು ನಿಲ್ಲುತ್ತದೆ.

೬. ೧ ಗುಲಗಂಜಿ ಗಾತ್ರದ ಮರದ ತೊಗಟೆಯ ಪುಡಿಯನ್ನು ವಿಳ್ಯದೆಲೆ-ಅಡಿಕೆ ಜೊತೆಗೆ ಸೇರಿಸಿ ತಿನ್ನುವುದರಿಂದ ಕಫವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಡಾ: ವೀರಣ್ಣ, ಹಾವೇರಿ

About The Author

Leave a Reply

Your email address will not be published. Required fields are marked *