March 29, 2024

Chitradurga hoysala

Kannada news portal

ಸರಕಾರಿ ಶಾಲೆ ಉಳುವಿಗೆ ಅಭಿಯಾನ ಶಿವಕುಮಾರ ಕಾಗನೂರು ಹೊಸ ಕ್ರಾಂತಿ : ಎಸ್.ಎನ್.ಹಳ್ಳಿಗುಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಂಸೆ

1 min read



ಸರಕಾರಿ ಶಾಲೆ ಉಳುವಿಗೆ ಅಭಿಯಾನ ಶಿವಕುಮಾರ ಕಾಗನೂರು ಹೊಸ ಕ್ರಾಂತಿ :

ಎಸ್.ಎನ್.ಹಳ್ಳಿಗುಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಂಸೆ.

ಹೂವಿನಹಡಗಲಿ:
ತಾಲೂಕಿನ ಪುರ ಗ್ರಾಮದಲ್ಲಿ ಸರಕಾರಿ ಶಾಲೆ ಉಳುವಿಗೆ ಅಭಿಯಾನ ಶಿವಕುಮಾರ ಕಾಗನೂರು ಹೊಸ ಕ್ರಾಂತಿ ಎಂದು ಎಸ್.ಎನ್.ಹಳ್ಳಿಗುಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅಪ್ಪು ಅಭಿಮಾನಿ ಶಿವಕುಮಾರ್ ಕಾಗನೂರು ಇವರ ಸರ್ಕಾರಿ ಶಾಲೆ ಉಳಿಸಿ ಸರ್ಕಾರಿ ಶಾಲೆ ಬೆಳೆಸಿ ಅಭಿಯಾನದ ಆರನೇ ಕಾರ್ಯಕ್ರಮವನ್ನು ಪುರ ಗ್ರಾಮದ ಸರಕಾರಿ ಶಾಲೆಯಲ್ಲಿ ನಡೆಯಿತು. ಗಣ್ಯರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇನ್ನೂ ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಕುಮಾರ ಕಾಗನೂರು ಪಾಲಕ ಹಾಗೂ ಪೋಷಕರಿಗೆ ಶಾಲೆಯ ಬಗ್ಗೆ ಶಿಕ್ಷಕರ ಬಗ್ಗೆ ಮಕ್ಕಳಿಗೆ ಶಿಕ್ಷಕರ ಮೇಲೆ ಇರುವ ಗೌರವದ ಬಗ್ಗೆ ಹಾಗೂ ಮಕ್ಕಳಿಗಿರುವ ಕಲಿಕೆಯನ್ನು ಗುರುತಿಸಿ ಶಾಲೆಯಲ್ಲಿ ಹಾಕಿಕೊಟ್ಟ ಹೋಮ್ ವಕ್೯ ಸರಿಯಾಗಿ ಪಾಲಿಸುವಂತೆ ಪಾಲಕ-ಪೋಷಕರಿಗೆ ತಿಳಿಸಿದರು. ಶಾಲೆ ಆವರಣದಲ್ಲಿ ಸ್ವಚ್ಛತೆ ಇಲ್ಲದೆ ಇರೋದು ಹಾಗೂ ಗಲೀಜು ಮಾಡುವುದು ಇವೆಲ್ಲವನ್ನು ಮಾಡಬಾರದು ಎಂದು ಗ್ರಾಮಸ್ಥರಿಗೆ ತಿಳಿಸಿದರು.ಪುರ ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಹಾಗೂ ಶಾಲೆಯ ಆವರಣದಲ್ಲಿ ವಿದ್ಯುತ್ ಕಂಬ ಶಾಲೆಯ ಮಧ್ಯ ಭಾಗದಲ್ಲಿದೆ.ಮರದ ಕೊಂಬೆಗಳಿಗೆ ಕೇಬಲ್ ತಗುಲಿ ನಿಂತಿದೆ ಇದನ್ನು ಆದಷ್ಟು ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಕಂಬವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ತಿಳಿಸಿದರು. ಇದರ ನಡುವೆ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಿ ಅಭಿಯಾನದ ಜೊತೆಗೆ, ಕಾಡು ಬೆಳೆಸಿ ನಾಡು ಉಳಿಸಿ,ಪುಸ್ತಕ ಓದು ಅಭಿಯಾನ, ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವನ್ನು ಸಹ ಈ ದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಎನ್.ಹಳ್ಳಿಗುಡಿ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು “ಶಿವಕುಮಾರ್ ಅವರ ಕಾರ್ಯಗಳು ಬಹಳಷ್ಟು ಮೆಚ್ಚಿಗೆ ಆಗಿದ್ದು ಜನಮೆಚ್ಚುವ ಕೆಲಸವನ್ನೂ ಮಾಡುತ್ತಿದ್ದಾರೆ, ಇದರ ಜೊತೆಗೆ ಅವರ ಧರ್ಮಪತ್ನಿ ಹಾಲಮ್ಮ ಇವರು ಕೂಡ ಜೊತೆಗೂಡಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಹಾಗೂ ಇತರೆ ಅಭಿಯಾನವನ್ನು ಮಾಡುತ್ತಿರುವುದು ಬಹಳ ಸಂತೋಷದಾಯಕವಾಗಿದೆ. ಇದಲ್ಲದೆ ಇವರು ಸರ್ಕಾರಿ ಶಾಲೆಯ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಿ ಸ್ವಚ್ಚಭಾರತ
ಅಭಿಯಾನವನ್ನು ಸಹ ಇಂದಿನಿಂದ ಪ್ರಾರಂಭಿಸಿದ್ದಾರೆ ಇವರ ಈ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು. ನೆರೆದಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಎಸ್ಡಿಎಂಸಿ ಅಧ್ಯಕ್ಷರು ಶಾಲಾ ಶಿಕ್ಷಕರು ಮುಖ್ಯ ಗುರುಗಳು ಊರಿನ ಗ್ರಾಮಸ್ಥರು ಮುದ್ದು ಮಕ್ಕಳು ಇವರ ಸಮ್ಮುಖದಲ್ಲಿ ಗಿಡವನ್ನು ನೀಡುವುದರ ಜೊತೆಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಉದ್ಘಾಟಿಸಿ ಪ್ರತಿಯೊಂದು ಶಾಲೆಯಲ್ಲೂ ಕೂಡ ಕೊಳ್ಳಬೇಕೆಂದು ಬಿಇಓ ಎಸ್ಎಂ ಹಳ್ಳಿಗುಡಿ ತಿಳಿಸಿದರು. ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳಾದ ವಿಶ್ವನಂದ ಸ್ವಾಮಿಗಳು ಮಾತನಾಡಿ ‘ನಮ್ಮ ಪಕ್ಕದ ಹಳ್ಳಿಯ ಯುವ ಪ್ರತಿಭೆ ಶಿವಕುಮಾರ್ ಇವರ ಕಾರ್ಯಸಾಧನೆಯ ಬಹಳ ಮೆಚ್ಚುವಂತದ್ದು. ಇಂತಹ ಯುವಕರು ಶಿಕ್ಷಣ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಮಾಡುತ್ತಿರುವುದು ಬಹಳ ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು. ನಂತರ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು.ಹುಸೇನ್ ಸಾಬ್ ಬಿ.ಆರ್.ಪಿ.ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *