April 18, 2024

Chitradurga hoysala

Kannada news portal

ಬಿಜೆಪಿ ನಿರ್ಗಮನಕ್ಕೆ ಫಲಿತಾಂಶ ಮುನ್ಸೂಚನೆ, ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲುವು, ರಾಜ್ಯ, ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಕಾಂಗ್ರೆಸ್ ಪಕ್ಷ: ಮಾಜಿ ಸಚಿವ ಹೆಚ್.ಆಂಜನೇಯ ಅಭಿಮತ

1 min read


ಬಿಜೆಪಿ ನಿರ್ಗಮನಕ್ಕೆ ಫಲಿತಾಂಶ ಮುನ್ಸೂಚನೆ,
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲುವು,

ರಾಜ್ಯ, ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಕಾಂಗ್ರೆಸ್ ಪಕ್ಷ:

ಮಾಜಿ ಸಚಿವ ಹೆಚ್.ಆಂಜನೇಯ ಅಭಿಮತ

ಚಿತ್ರದುರ್ಗ: ಡಿ.30
ರಾಜ್ಯದಲ್ಲಿ ವಿವಿಧ ಕಾರಣಕ್ಕೆ ತೆರವಾಗಿದ್ದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ        ಕಾಂಗ್ರೆಸ್ ಪಕ್ಷ

ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿರುವುದು, ಬಿಜೆಪಿ ಪಕ್ಷ ಆಡಳಿತದಿಂದ ನಿರ್ಗಮನದ ಸೂಚನೆ ಆಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳಿಗೆ ಒಂದು ಬಾವುಟ,
ಬಿ.ಫಾರಂ ಮಾತ್ರ ಕೊಟ್ಟಿದ್ದು, ಕನಿಷ್ಠಮಟ್ಟದ ಚುನಾವಣೆ ವೆಚ್ಚವನ್ನು ನೀಡಿಲ್ಲ. ಆದರೆ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದ ಜನಪರ ಆಡಳಿತವನ್ನು ಜನರಿಗೆ ನೆನಪು ಮಾಡಿಕೊಟ್ಟು
ಗೆಲುವು ಸಾಧಿಸಿರುವುದು ಅಚ್ಚರಿ ಹಾಗೂ ಜನ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸ ತೋರುತ್ತದೆ.

ಸುಳ್ಳು ಭರವಸೆ, ಮೋಡಿ ಭಾಷಣ, ಧರ್ಮ-ಜಾತಿ ಮಧ್ಯೆ ಕಂದ ಸೃಷ್ಟಿಸಿ ಪರಸ್ಪರ ಜನರಲ್ಲಿ
ಅಪನಂಬಿಕೆ ಸೃಷ್ಟಿಸಿ ಅಧಿಕಾರಕ್ಕೆ ಬಂದು ಬಿಜೆಪಿ ದೇಶವನ್ನು ಆರ್ಥಿಕವಾಗಿ ದಿವಾಳಿಯನ್ನಾಗಿಸಿದೆ. ಸಿಲಿಂಡರ್, ಇಂಧನ, ಅಡುಗೆ ಎಣ್ಣೆ, ಬೇಳೆ ಸೇರಿದಂತೆ ಜನ ಬಳಸುವ ನಿತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಸಿದೆ. ಅವೈಜ್ಞಾನಿಕ, ದೂರದೃಷ್ಟಿ ಕೊರತೆಯಿಂದ ನೋಟ್ ಬ್ಯಾನ್, ಜಿಎಸ್‍ಟಿ ಜಾರಿಗೆ ತರುವ ಮೂಲಕ ದೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕೈಗಾರಿಕೆಗಳು ಮುಚ್ಚಿವೆ. ನಿರುದ್ಯೋಗ ದಿನದಿಂದ ದಿನಕ್ಕೆ ಏರುತ್ತಿದೆ. ಉದ್ಯೋಗಸ್ಥರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ, ಇದ್ಯಾವುದರ ಪರಿವೇ ಇಲ್ಲದಂತೆ ಜನರ ಭಾವನೆ ಕೆರಳಿಸಿ ಅಧಿಕಾರ ಉಳಿಸಿಕೊಳ್ಳಲು ಹವಣ ಸುತ್ತಿರುವ ಬಿಜೆಪಿಗೆ ಇತ್ತೀಚೆಗೆ ಜರುಗುತ್ತಿರುವ ಚುನಾವಣಾ ಫಲಿತಾಂಶ
ಉತ್ತರವಾಗಿದೆ. ಎಲ್ಲೆಡೆ ಕಾಂಗ್ರೆಸ್ ಪಕ್ಷದ ಪರ ಜನ ಒಲವು ತೋರುತ್ತಿದ್ದಾರೆ.

ಜಿಲ್ಲೆಯಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯತ್ ಕ್ಷೇತ್ರದ 16 ಸ್ಥಾನಗಳಲ್ಲಿ 11 ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ, ಪಕ್ಷೇತರ ಮೂವರು ಕೂಡ ಪಕ್ಷದ ಸದಸ್ಯಸರಾಗಿದ್ದು, ಅವರು ಪಕ್ಷದ ಜೊತೆ ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರ ಕ್ಷೇತ್ರವಾದ ನಾಯಕನಹಟ್ಟಿ ಕ್ಷೇತ್ರದಲ್ಲಿ ಬಿಜೆಪಿಗೆ ಆಗಿರುವ ಹೀನಾಯ ಸೋಲು ಪಕ್ಷದ ಭ್ರಷ್ಟಾಚಾರ, ಜನವಿರೋಧಿ ನೀತಿಗೆ ಜನ ನೀಡಿದ ಉತ್ತರವಾಗಿದೆ. ಒಂದು ಜನಪರ ಯೋಜನೆ ಜಾರಿಗೊಳಿಸದೆ ಅಧಿಕಾರ ನಡೆಸುತ್ತಿರು ಬಿಜೆಪಿಯನ್ನು ಕೇಂದ್ರ,ರಾಜ್ಯದಲ್ಲಿ ಅಷ್ಟೇ ಅಲ್ಲದೇ ಹಳ್ಳಿ, ಪಟ್ಟಣ, ನಗರಮಟ್ಟದಿಂದಲೂ ಅಧಿಕಾರದಿಂದ
ಕಿತ್ತೋಗಿಯುವ ಸಂಕಲ್ಪ ಜನ ಮಾಡಿರುವುದು ಈಗಿನ ಫಲಿತಾಂಶ ಕೈಗನ್ನಡಿಯಾಗಿದೆ.
ಈಗಿನ ಗೆಲುವು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದ್ದು, ಬರುವ ವಿಧಾನಸಭೆ,ಲೋಕಸಭೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಅನುಕೂಲಕರವಾಗಿದೆ.

ಜನತೆ ಕಾಂಗ್ರೆಸ್ ಆಡಳಿತವನ್ನು ಎಲ್ಲೆಡೆ ಸ್ಮರಿಸುತ್ತಿದ್ದು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದ ವೇಳೆ ಜಾರಿಗೊಳಿಸಿದ ಜನಪರ ಯೋಜನೆಗಳಿಂದ ಆಗಿರುವ ಲಾಭ ಮನದಟ್ಟು ಮಾಡಿಕೊಡಬೇಕು. ಪ್ರತಿ ಮನೆಯಲ್ಲಿ ಪಕ್ಷದ ಕಾರ್ಯಕರ್ತರು ಇರುವಂತೆ ಸದಸ್ಯತ್ವ ಆಂದೋಲನ ಯಶಸ್ವಿಗೊಳಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *