April 20, 2024

Chitradurga hoysala

Kannada news portal

ಚೆನ್ನೈ ನಗರಮ್ ! ಈ ಚೆನ್ನೈ ಹೆಸರೇ ಹಿಂದಿನ ಮಾದಾರ ಚೆನ್ನೈ ನಗರಮ್

1 min read



ಚೆನ್ನೈ ನಗರಮ್ !

ಶಿವಶರಣ ಮಾದಾರ ಚೆನ್ನಯ್ಯನ ಅಂತ್ಯ ಸಂಸ್ಕಾರವನ್ನು ಕೊಳ್ಳೇಗಾಲದ ಹತ್ತಿರ ಏರುವ ಕುರುಬನಕಟ್ಟೆಯಲ್ಲಿ ನೆರವೇರಿಸಿದ ಕಂಚಿಯ ಉಜನಾದ ಕಲಕಾಲ ಚೋಳನು ತನ್ನ ಕಂಚಿನಗರಕ್ಕೆ ಹಿಂದಿರುಗಿ ಅರಮನೆಗೆ ಬಂದು ತನ್ನ ಮಂತ್ರಿಮಂಡಲದವರೊಡನೆ ಚರ್ಚಿಸಿ ಪಟ್ಟಣದ ಸಮೀಪ ಪ್ರದೇಶಗಳಲ್ಲಿನ ಎಲ್ಲೆಲ್ಲಿ ಚರ್ಮ ಕಾಯಕ ಮಾಡುವ ನಿರ್ಧಿಷ್ಟ ಸ್ಥಳಗಳಲ್ಲಿರುವ ಹೆಚ್ಚಿನ ಸಂಖ್ಯೆಯಲ್ಲಿ ಮಾದಾರರು ವಾಸಿಸುತ್ತಿದ್ದಾರೋ ಆ ಸ್ಥಳ ಗಳನ್ನೆಲ್ಲಾ ಮಾದಾರ ಚೆನ್ನಯ್ಯನ ಸವಿನೆನಪಿ ಗಾಗಿ ಮಾದಾರಚೆನ್ನೈ ನಗರಮ್’ ಎಂಬ ಹೆಸರಿಟ್ಟು ರಾಜಾಜ್ಞೆ ಹೊರಡಿಸಿದನು. ಈ ಪ್ರದೇಶವು ಮಾದಾರ ಚೆನ್ನೈ ನಗರಮ್

ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ನಂತರ ನಮ್ಮ ದೇಶವು ಬ್ರಿಟಿಷರ ಅಧಿಪತ್ಯಕ್ಕೆ ಸೇರಿದಾಗ, ಮಾದಾರ ಚೆನ್ನೈ ನಗರಕ್ಕೆ ಬಂದ ಬ್ರಿಟಿಷರು ಯಾರಿಲ್ಲಿ ವಾಸವಾಗಿದ್ದಾರೆಂದು ಕೇಳಿದಾಗ (ದೇ ಆರ್ ಮಾದರಾಸ್) ಎಂದು ಹೇಳಲು ಭಾಷೆ ತಿಳಿಯದೆ ಬ್ರಿಟಿಷರು ಉಚ್ಛಾರಣೆಯಲ್ಲಿನ ಸೊಗಡು ಅರ್ಥೈಸಿ ಕೊಳ್ಳಲಾಗದೇ ಓಕೆ ಓಕೆ ಮದ್ರಾಸ್ ಮದ್ರಾಸ್ ಎಂದು ಹೇಳಿ ಆ ನಗರಕ್ಕೆ ಮದ್ರಾಸ್‌ ಎಂದು ಪುನರ್‌ ನಾಮಕರಣ ಮಾಡಿದರು. ಬ್ರಿಟಿಷರ ಕಾಲದಿಂದ ಮದ್ರಾಸ್‌ ಎಂದು ಕರೆಯುತ್ತಿದ್ದ ನಗರವನ್ನು ತಮಿಳುನಾಡು ಸರ್ಕಾರ ಹಳೆಯ ಮಾದಾರ ಚನ್ನೈ ನಗರದ ಹೆಸರನ್ನೇ ಚೆನ್ನೈ ಎಂಬ ಹೆಸರಿನಿಂದ ಪುನರ್‌ನಾಮಕರಣ ಗೊಳಿಸಿದರು.

ಈ ಚೆನ್ನೈ ಹೆಸರೇ ಹಿಂದಿನ ಮಾದಾರ ಚೆನ್ನೈ ನಗರಮ್ ಎಂಬುದು ಸಂಕ್ಷಿಪ್ತ ಹೆಸರೆಂದು ತಿಳಿಯಬಹುದಾಗಿದೆ. ತಮಿಳಿನಲ್ಲಿ ‘ಯ್ಯ’ ಎನುವ ಅಕ್ಷರ ಬಳಕೆಯಿಲ್ಲ. ಆದ ಕಾರಣ ಚೆನ್ನಯ್ಯ ಎಂಬ ಕನ್ನಡ ಶಬ್ದದ ಬದಲಾಗಿ ‘ಚೆನ್ನೈ’ ಎಂದು ಕರೆಲ್ಪಟ್ಟಿರುವುದು ಕಂಡು ಬರುತ್ತದೆ. ‘ಅಯ್ಯ’ ಶಬ್ದಕ್ಕೆ ತಂದೆ ಎನ್ನುವ ಅರ್ಥವುಂಟು

ಡಾ.ಎಸ್.ಮಹಾದೇವಪ್ಪ ಮೈಸೂರು.

ಸಂಗ್ರಹ- ಡಿ.ಪ್ರಸನ್ನಕುಮಾರ್

About The Author

Leave a Reply

Your email address will not be published. Required fields are marked *