April 20, 2024

Chitradurga hoysala

Kannada news portal

ಇಂದು ಕಾಲೇಜು ಅಭಿವೃದ್ಧಿ ಸಮಿತಿ ಸಭೆ : ಸರ್ಕಾರಿ ಮಹಿಳಾ ಕಾಲೇಜು: ಬಿಕಾಂ ವಿದ್ಯಾರ್ಥಿನಿಗೆ 9ನೇ ರ್ಯಾಂಕ್ ಪಡೆದ ಕುಮಾರಿ ವಿದ್ಯಾಲತಾ.ಆರ್.ಎಂ ಇವರಿಗೆ ಅಭಿನಂದನೆ ಸಲ್ಲಸಲಿದ್ದಾರೆ.

1 min read




ಕಾಲೇಜು ಅಭಿವೃದ್ಧಿ ಸಮಿತಿ ಸಭೆ:

ಸರ್ಕಾರಿ ಮಹಿಳಾ ಕಾಲೇಜು: ಬಿಕಾಂ ವಿದ್ಯಾರ್ಥಿನಿಗೆ 9ನೇ ರ್ಯಾಂಕ್ ಪಡೆದ ಕುಮಾರಿ ವಿದ್ಯಾಲತಾ.ಆರ್.ಎಂ ಇವರಿಗೆ ಅಭಿನಂದನೆ ಸಲ್ಲಸಲಿದ್ದಾರೆ.

ಚಿತ್ರದುರ್ಗ:
ಸರ್ಕಾರಿ ಕಲಾ ಕಾಲೇಜು (ಹಳೇ ಕಟ್ಟಡ) ದಲ್ಲಿ ಚಿತ್ರದುರ್ಗ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಿ.ಹೆಚ್.ತಿಪ್ಪಾರೆಡ್ಡಿಯವರ ಅಧ್ಯಕ್ಷತೆಯಲ್ಲಿ ಜ.21 ರಂದು ಬೆಳಗ್ಗೆ 11 ಗಂಟೆಗೆ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಕರೆಯಲಾಗಿದೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.

ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ವಿದ್ಯಾಲತಾ ಆರ್.ಎಂ. ಇವರು 2020-21ನೇ ಸಾಲಿನ ಬಿಕಾಂ ಪದವಿಯಲ್ಲಿ ದಾವಣಗೆರೆ ವಿಶ್ವಾವಿದ್ಯಾನಿಲಯದಲ್ಲಿ 9ನೇ ರ್ಯಾಂಕ್ ಪಡೆದಿರುತ್ತಾರೆ. ಇವರಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹಾಗೂ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಸದಸ್ಯರು , ಕಾಲೇಜು ಅಭಿವೃದ್ಧಿ ಸಮಿತಿ ಪ್ರಾಂಶುಪಾಲರಾದ ಡಾ.ಸಿ.ಚನ್ನಕೇಶವ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಲಿದ್ದಾರೆ.

About The Author

Leave a Reply

Your email address will not be published. Required fields are marked *