March 29, 2024

Chitradurga hoysala

Kannada news portal

ವಿಪಶ್ಯನ ಧ್ಯಾನವು ಯಾವುದೇ ಕರ್ಮಠತನದ ನಂಬಿಕೆಯಲ್ಲ, ಇಲ್ಲಿ ಮೌಢ್ಯತೆಯಿಲ್ಲ. ಉಸಿರಿನ ಸಹಜ ಕ್ರಿಯೆಯು ಅರಿಯುವುದೇ ಆಗಿದೆ. ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಆರ್ಥಿಕ ವಿಶ್ಲೇಷಕರು.

1 min read


ವಿಪಶ್ಯನ ಧ್ಯಾನವು ಯಾವುದೇ ಕರ್ಮಠತನದ ನಂಬಿಕೆಯಲ್ಲ, ಇಲ್ಲಿ ಮೌಢ್ಯತೆಯಿಲ್ಲ. ಉಸಿರಿನ ಸಹಜ ಕ್ರಿಯೆಯು ಅರಿಯುವುದೇ ಆಗಿದೆ.

ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಆರ್ಥಿಕ ವಿಶ್ಲೇಷಕರ ಅಭಿಮಾತ
—————————————-  ಚಿತ್ರದುರ್ಗ:

ಉಸಿರಾಟವು ವೈದಿಕವು ಅಲ್ಲ, ಅವೈದಿಕವು ಅಲ್ಲ, ಉಸಿರು ವೈಚಾರಿಕತೆ ಮತ್ತು ವೈಜ್ಞಾನಿಕವಾದುದೆಂದು ಆರ್ಥಿಕವಿಶ್ಲೇಷಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.
ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ಕಂಡ0ತಹ ಬುದ್ಧ ಕಾರ್ಯಕ್ರಮದಲ್ಲಿ ವಿಪಶ್ಯನ ಧ್ಯಾನ ಮತ್ತು ಮಾನಸಿಕ ಸುಧಾರಣೆಗಳು ಎಂಬ ಉಪನ್ಯಾಸ ನೀಡುತ್ತಾ ಮಾತನಾಡಿ ವಿಪಶ್ಯನ ಧ್ಯಾನವು ಯಾವುದೇ ಕರ್ಮಠತನದ ನಂಬಿಕೆಯಲ್ಲ, ಇಲ್ಲಿ ಮೌಢ್ಯತೆಯಿಲ್ಲ. ಉಸಿರಿನ ಸಹಜ ಕ್ರಿಯೆಯು ಅರಿಯುವುದೇ ಆಗಿದೆ
. ಮನುಷ್ಯನ ಮನಸ್ಸನ್ನು ಸಹಜವಾಗಿ ಅರಿಯಲುಬಳಸುವ ಅಸ್ತ್ರವೇ ವಿಪಶ್ಯನ ಧ್ಯಾನ ಎಂದರು.
ಉಸಿರಾಟದ ಬಗ್ಗೆ ಓದಿ ಮಾತನಾಡುವುದು ಇಂಟಲ್ಯಾಕ್ಚುಯಲ್ ಲೆವೆಲ್ ಆಗುತ್ತದೆ. ಕಣ್ಮಚ್ಚಿ ಉಸಿರಾಟವನ್ನು ಗಮನಿಸಿದರೆ, ಆಲೋಚನೆಗಳ ಮಹಾಪೂರವೇ ಮನಸ್ಸಿನ ಮೇಲೆ ದಾಳಿ ನಡೆಸುತ್ತದೆ. ಅದಕ್ಕಾಗಿ ಗೌತಮ ಬುದ್ಧರು ಮನುಷ್ಯನ ದೇಹವನ್ನು ಅಧ್ಯಯನಕ್ಕೆ ತೆಗೆದುಕೊಂಡರು. ಹುಟ್ಟಿ-ಸಾಯುವ ಅಶಾಶ್ವತ ಸಾವಿರಾರು ಜೀವ ಕೋಶಗಳಿಂದ ಮಾನವನ ದೇಹ ರಚನೆಯಾಗಿದೆಯೆಂಬ ವೈಜ್ಞಾನಿಕ ಸತ್ಯವನ್ನು ೬೫೦೦ ವರ್ಷಗಳ ಹಿಂದೆಯೇ ಹೇಳಿದ್ದರು.

ಉಸಿರಾಟವು ಶಾಶ್ವತವಾದುದಲ್ಲ , ನಿರೀಕ್ಷೆಗಳು ಹುಸಿಯಾದಾಗ ಮನುಷ್ಯನು ದುಃಖಕ್ಕೆ ಹೋಗುತ್ತಾನೆ. ಜ್ಞಾನದ ಉದಯವೆಂದರೆ ಅಶಾಶ್ವತತೆಅರಿಯುವುದೇ ೮ ಪ್ರಜ್ಞೆಯಾಗಿದೆ. ದ್ವೇಷ, ರಾಗ, ಜಡತ್ವವು ಶಾಶ್ವತವಲ್ಲ. ದೇಹದಲ್ಲಿ ಉಂಟಾಗುವ ದುಃಖದ, ಸುಖದ, ಜಡದ ಸಂವೇದನೆಗಳು ಶಾಶ್ವತವಲ್ಲ. ಅಶಾಶ್ವತವೆಂಬ ಭಾವನೆಯೇ ನಮ್ಮ ಮನಸ್ಸನ್ನು ಸಮಾಧಾನ ಗೊಳಿಸುತ್ತದೆ.
ನಾವು ಉದ್ವೇಗದ ಉತ್ತುಂಗದಲ್ಲಿದ್ದಾಗ ನಮ್ಮ ಮನಸ್ಸನ್ನು ಉಸಿರಾಟದ ಕಡೆಗೆ ತೆಗೆದುಕೊಂಡು ಹೋದರೆ ಮನಸ್ಸು ಸಮಾಧಾನವಾಗುತ್ತದೆ..
ಪರ್ವತಾರೋಹಿ ತೇನ್ ಸಿಂಗ್ ಅವರು ಕಠಿಣವಾದ ಪರ್ವತ ಏರುವಾಗಲೂ ಉಸಿರಾಟದ ಸಮಚಿತ್ತತೆ ಪಾಲಿಸುತ್ತಿದ್ದಾರೆಂದು ಅವರ ಮನೆಯ ಮುಂಭಾಗದಲ್ಲಿ ಬರೆದಿರುವುದೇ ಸಾಕ್ಷಿ.
ಗನ್ ಪಾಯಿಂಟ್‌ನಲ್ಲಿ ಶೂಟ್ ಮಾಡುವಾಗಲೂ ೩-೪ಬಾರಿ ಉಸಿರಾಟ ತೆಗೆದುಕೊಂಡು,ಉಸಿರಾಟವನ್ನು ತಟಸ್ಥಗೊಳಿಸಿ ಶೂಟ್ ಮಾಡುತ್ತಾರೆ .ಾಇಲ್ಲವಾದರೆ ಸಮಚಿತ್ತತೆ ಸಿಗುವುದಿಲ್ಲ.
ಉಸಿರಾಟ ಯಾವ ನಂಬಿಕೆಯೊಳಗಡೆ ಇಲ್ಲ, ಯಾವ ಆಚರಣೆಗಳು ಇಲ್ಲ, ಉಸಿರಾಟಕ್ಕೆ ಯಾವ ಗುರುಗಳು ಇಲ್ಲ, ಶಬ್ದವು ಇಲ್ಲ, ನಮ್ಮಷ್ಟಕ್ಕೆ ನಾವೇ ಉಸಿರಿನ ಕಡೆಗೆ ಹೋಗುವುದು. ಯಾವ ಹೊರಗಿನ ಭಾವನೆಗಳ ಪ್ರೇರಣೆಯಿಲ್ಲದೇ ಅದರ ಚಿತ್ರಣವು ಮನಸ್ಸಿನ ಮೇಲೆ ಇಲ್ಲದೇ ಮಾಡುವಂತಹ ಉಸಿರಾಟವನ್ನು ಶುದ್ದ ಉಸಿರಾಟ ಎಂದು ಕರೆಯುವರು.

ಬಸವಣ್ಣನವರು ಹೇಳಿದಂತೆ ಬೆಳೆಯುವ ಭೂಮಿಯಲ್ಲಿ ಒಂದು ಕಸವು ಹುಟ್ಟಿದ್ದರೆ, ಅಂತಹ ಭೂಮಿಯಲ್ಲಿ ಕಳೆ ಕೀಳದೇ ಬೆಳೆ ಬೆಳೆಯುವುದೆ ಎಂದಿದ್ದಾರೆ. ಮನುಷ್ಯ ತನ್ನ ಅವಗುಣಗಳೆಂಬ ಕಸವನ್ನು ಕಳೆದುಕೊಳ್ಳಲು ಉಸಿರಾಟ ಅರಿಯುವ ಮಾರ್ಗದಿಂದ ಸಾಧ್ಯವೆಂದಿದ್ದಾರೆ.

ಧ್ಯಾನ ಮೌಡ್ಯದಿಂದ ಕೂಡಿಲ್ಲ, ಸಮಯ ವ್ಯರ್ಥ ಮಾಡುವುದಿಲ್ಲ, ಮೌಡ್ಯದಿಂದ ಕೂಡಿದ ಧ್ಯಾನ ನಮಗೆ ಬೇಕಾಗಿಲ್ಲ. ಮನಸ್ಸು ಮತ್ತು ಸಮಾಜವನ್ನು ಸುಸ್ಥಿತಿಯಲ್ಲಿಡಲು ಮತ್ತು ಇರುವಂತಹ ಧ್ಯಾನ ಅವಶ್ಯಕ.
ಅಸ್ಪೃಶ್ಯರಿಗೆ ಮತ್ತು ಆರೋಗ್ಯವಂತರಿಗೆ ಧ್ಯಾನ ಬೇಕಾಗಿಲ್ಲ ಎನ್ನುವುದಾದರೆ ಆರೋಗ್ಯವಂತರು ಯಾರು? ಅಸ್ವಸ್ಥರು ಎನ್ನುವುದರ ಆಯಾಮವೇನು?

ರಾಗ-ದ್ವೇಷದಲ್ಲಿ ತೊಡುಗುವುದು ಅಸ್ವಸ್ಥತೆ ಅಲ್ಲವೇ, ಅಸ್ವಸ್ಥತೆ ಬರೀ ದೇಹಕ್ಕೆ ಅಂಟಿದ ಕಾಯಿಲೆ ಆಗಿರದೇ ಮನಸ್ಸಿಗೂ ಅಂಟಿರುವ ಕಾಯಿಲೆ ಆಗಿರುವುದರಿಂದ ಮನಸ್ಸಿಗೆ ಅಂಟಿರುವ ಆಸೆಗಳ, ಭಾವೋದ್ವೆಗಗಳನ್ನು ನಿವಾರಿಸಲು ಇರುವ ಒಂದು ಅಸ್ತ್ರವೇ ಧ್ಯಾನ.

ಸಿಯಾಚಿ-ಉಬಾಕಿನ್ ಬರ್ಮಾ ಸರಕಾರದ ಆಕೌಂಟೆ೦ಟ್ ಜನರಲ್ ಆಗಿದ್ದಾಗ ಅವರ ಆಡಳಿತದಲ್ಲಿ ವಿಪಶ್ಯನ ಧ್ಯಾನದ ಪ್ರಯೋಗ ಮಾಡಿದ್ದರಿಂದ ನೌಕರರ ದಕ್ಷತೆ ಹೆಚ್ಚಿ, ಭ್ರಷ್ಠಾಚಾರ ಕಡಿಮೆಯಾಗುತ್ತದೆ. ಇದನ್ನು ಗಮನಿಸಿದ ಬರ್ಮಾ ಸರಕಾರ ಇವರಿಗೆ ೧೧ಇಲಾಖೆಗಳ ಜವಾಬ್ದಾರಿ ನೀಡಿ ಪ್ರಿನ್ಸಿಪಾಲ ಸೆಕ್ರೆಟರಿ ಮಾಡುತ್ತಾರೆ.
೧೫ರಾಷ್ಟಗಳಲ್ಲಿ ವ್ಯವಹಾರ ಇಟ್ಟುಕೊಂಡಿದ್ದ ಸತ್ಯನಾರಾಯಣ ಗೋಯಾಂಕ್ ಅವರಿಗೆ ಯಾವುದೇ ವೈದ್ಯರು, ಔಷಧಿಗಳಿಂದ ವಾಸಿಯಾಗದ ಮೈಗ್ರೇನ್ ಕಾಯಿಲೆಯು ವಿಪಶ್ಯನ ಧ್ಯಾನದಿಂದ ವಾಸಿಯಾಯಿತು.
ತೀಯಾರ್ ಜೈಲಿನಲ್ಲಿದ್ದ ನಟೋರಿಯಲ್ ಕ್ರಿಮಿನಲ್‌ಗಳನ್ನು ಸುಸ್ಥಿರ ಸ್ಥಿತಿಗೆ ತರಲು ಅತಿ ಕೋಪಿಷ್ಠೆಯಾಗಿದ್ದ ಕಿರಣ್‌ಬೇಡಿ ಅವರು ಸಹ ಬಳಸಿದ್ದು ವಿಪಶ್ಯನ ಧ್ಯಾನ ಅಸ್ತ್ರ . ಇದನ್ನು ಸರಕಾರದ ಅನುಮತಿ ಪಡೆದು ಗೋಯಾಂಕಜೀ ಅವರಿಂದಲೇ ನಟೋರಿಯಲ್ ಕ್ರಿಮಿನಲ್‌ಗಳಿಗೆ ವಿಪಶ್ಯನ ಧ್ಯಾನ ಅಭ್ಯಾಸ ಮಾಡಿಸಲಾಯಿತು.
ಅದುದರಿಂದಲೇ ಚಿತ್ರದುರ್ಗ ಮುರುಘಾ ಮಠವು ಕಿರಣ್‌ಬೇಡಿ ಅವರಿಗೆ ಬಸವಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಯಿತೆಂದರು.
ಅಜ್ಞಾನದ ಮುಖಾಂತರ ಮಾಡುವಂತಹ ಯಾವುದೇ ಪ್ರತಿಕ್ರಿಯೆಗಳಿಗೆ ಮೌನ ವಹಿಸುವುದಂತಹದ್ದೆ ಒಂದು ದೊಡ್ಡ ಶಕ್ತಿ. ಆ ಶಕ್ತಿಯನ್ನು ನೀಡುವುದೇ ವಿಪಶ್ಯನ ಧ್ಯಾನ.
೧೦ದಿನದ ವಿಪಶ್ಯನ ಧ್ಯಾನದ ಮೌನ ಸಣ್ಣ ವಿಚಾರವಲ್ಲ. ಒಂದು ಕ್ಷಣ ಕಣ್ಣು ಮುಚ್ಚಿದ್ದರೂ ಸಾವಿರಾರು ಆಲೋಚನೆಗಳು ದಾಳಿ ಮಾಡಿ ಚಂಚಲಗೊಳಿಸುವ ಮನಸ್ಸನ್ನು ಸಮಸ್ಥಿತಿಗೆ ತರಲು ಧ್ಯಾನ ಅವಶ್ಯಕತೆ ಇದೆಯೆಂದರು.

ಭಗವಾನ್ ಬುದ್ದರ ಬೋಧನೆಗಳ ಕಿರುಹೊತ್ತಿಗೆಯನ್ನುಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಬಿಡುಗಡೆ ಮಾಡಿದರು.
ತ್ರಿಸರಣ ಪಂಚಶೀಲ ಅಷ್ಠಾಂಗ ಮಾರ್ಗಗಳನ್ನು ಬೆನಕನಹಳ್ಳಿ ಚಂದ್ರಪ್ಪ ಹಾಗೂ ಬೀರೆನಹಳ್ಳಿ ರಾಮಚಂದ್ರ ಪಠಣ ಮಾಡಿದರು.
ಪ್ರೋ.ಲಿಂಗಪ್ಪ, ಬಿಎಸ್‌ಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ಐಹೊಳೆ, ನಿವೃತ್ತ ಉಪನಿರ್ದೇಶಕ ಬಿ.ಆರ್.ಶಿವಕುಮಾರ್, ಬಾಲೇನಹಳ್ಳಿ ರಾಮಣ್ಣ, ಸಮಾಜ ಕಲ್ಯಾಣ ಇಲಾಖೆ ನಾಗೇಂದ್ರಪ್ಪ, ಬಿ.ಪಿ.ಪ್ರೇಮ್‌ನಾಥ್, ಹುಚ್ಚವ್ವನಹಳ್ಳಿ ವೆಂಕಟೇಶ್, ತುರುವನೂರು ಜಗನ್ನಾಥ್, ಭೀಮನಕೆರೆ ಶಿವಮೂರ್ತಿ, ಹಿರಿಯೂರು ಗೌತಿ ದತ್ತಾತ್ರೇಯ, ಗುಡ್ಡದರಂಗವ್ವನಹಳ್ಳಿ ದುರಗೇಶ್, ಬುರುಜಿನರೊಪ್ಪದ ಬೆಸ್ಕಾಂ ತಿಪ್ಪೇಸ್ವಾಮಿ, ದುರುಗೇಶ್, ಬಿಎಸ್‌ಪಿ ಪ್ರಕಾಶ್ ಚಳ್ಳಕೆರೆ, ಶ್ರೀಮತಿ ಶಾಂತಮ್ಮ, ಭಾಗ್ಯಮ್ಮ, ಮಹದೇವಪುರ ಶಿಕ್ಷಕ ಹನುಮಂತಪ್ಪ
ಬಿ.ಪಿ.ತಿಪ್ಪೇಸ್ವಾಮಿ,ಗೌತಮ ಬುದ್ಧ ಪ್ರತಿಷ್ಠಾನ ಇತರರಿದ್ದರು.

About The Author

Leave a Reply

Your email address will not be published. Required fields are marked *