April 18, 2024

Chitradurga hoysala

Kannada news portal

ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿರುವ ಬಿ.ಎಲ್‍.ವೇಣು ಜಿಲ್ಲೆಯ ಹೆಮ್ಮೆ ಜತೆಗೆ ಆಸ್ತಿ ಆಗಿದ್ದಾರೆ. ಅವರನ್ನು ಗೌರವಿಸುವ ಕಾರ್ಯ ನಮ್ಮನ್ನು ನಾವು ಗೌರವಿಸಿಕೊಂಡು ಸಂಭ್ರಮಿಸಿದಂತೆ: ಮಾಜಿ ಸಚಿವ ಆಂಜನೇಯ

1 min read




ಸಾಹಿತ್ಯ ಕ್ಷೇತ್ರಕ್ಕೆ ವೇಣು ಕೊಡುಗೆ ಅಪಾರ

ಮಾಜಿ ಸಚಿವ ಆಂಜನೇಯ ಅಭಿಪ್ರಾಯ

ಕಾದಂಬರಿಯನ್ನು ಚಲನಚಿತ್ರ ಮಾಡಲು ಚಿಂತನೆ

ಚಿತ್ರದುರ್ಗ ಹೊಯ್ಸಳ ನ್ಯೂಸ್/       

ಚಿತ್ರದುರ್ಗ:

ಬೆಳಗೆರೆ, ತಳಕು ಕುಟುಂಬಳಗಳಂತೆ ಏಕಾಂಗಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಬಿ.ಎಲ್‍.ವೇಣು ಅಪಾರ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್‍.ಆಂಜನೇಯ ಬಣ‍್ಣಿಸಿದರು.

ಮಂಗಳವಾರ ಮಧ್ಯಾಹ್ನ ಬಿ.ಎಲ್‍.ವೇಣು ನಿವಾಸಕ್ಕೆ ಭೇಟಿ ನೀಡಿ ಅವರನ್ನು ಗೌರವಿಸಿ, ಬೇಡರ್ದಂಗೆ ಕಾದಂಬರಿ ಖರೀದಿಸಿದ ವೇಳೆ ಮಾತನಾಡಿದರು.

ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ‍್ಳಬೇಕೆಂಬ ಅಭಿಲಾಶೆ ಹೊಂದಿದ್ದೇ, ಆದರೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಇಂದು ಭೇಟಿ ನೀಡಿದ್ದೇನೆ ಎಂದರು.

ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿರುವ ಬಿ.ಎಲ್‍.ವೇಣು ಜಿಲ್ಲೆಯ ಹೆಮ್ಮೆ ಜತೆಗೆ ಆಸ್ತಿ ಆಗಿದ್ದಾರೆ. ಅವರನ್ನು ಗೌರವಿಸುವ ಕಾರ್ಯ ನಮ್ಮನ್ನು ನಾವು ಗೌರವಿಸಿಕೊಂಡು ಸಂಭ್ರಮಿಸಿದಂತೆ ಎಂದು ಅಭಿಪ್ರಾಯಪಟ್ಟರು.

ಹತ್ತಾರು ಕಾದಂಬರಿ, ಕಥೆಗಳು ಸೇರಿ ಅನೇಕ ಕೃತಿಗಳನ್ನು ರಚಿಸಿರುವ ವೇಣು ಅವರ ಸಾಹಿತ್ಯ ಸಾಮಾನ್ಯ ಓದುಗರ ಮನಗೆದ್ದಿದೆ. ಇನ್ನೂ ಹೆಚ್ಚು ಕೃತಿಗಳನ್ನು ತರಬೇಕು. ಈ ನಿಟ್ಟಿನಲ್ಲಿ ತಾವು ಆರೋಗ್ಯದ ಕಡೆ ಹೆ್ಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಕೃತಿಗಳನ್ನು ಜನತೆ ಹೆಚ್ಚು ಹೆಚ್ಚಾಗಿ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಜತೆಗೆ ಪಠ್ಯೇತ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಲು ಸಾಧ‍್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ಜಿಲ್ಲೆಯ ಅಭಿವೃದ್ಧಿ, ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಸ್ಪರ ಚರ್ಚಿಸಿದ ಸಂದರ್ಭ, ವೇಣು ಮಾತನಾಡಿ, ನನ್ನ ಕಾದಂಬರಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ರಿ. ಆದರೆ ಸಚಿವರಾಗಿದ್ದ ಸಂದರ್ಭ ಕೆಲಸದ ಒತ್ತಡದಲ್ಲಿ ಸಾಧ್ಯವಾಗಲಿಲ್ಲ. ಈಗ ಸಮಯವಿದ್ದು, ಬೇಗ ಮಾಡುವಂತೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಂಜನೇಯ, ಹೌದು ನಿಮ್ಮ ಕಾದಂಬರಿಯನ್ನು ಸಿನಿಮಾವನ್ನಾಗಿ ಮಾಡಬೇಕೆಂಬ ಮಹದಾಸೆ ನನ್ನದು. ಉತ್ತಮವಾಗಿ ಚಿತ್ರ ಮೂಡಿಬರಬೇಕು. ಮತ್ತೊಮ್ಮೆ ಈ ಕುರಿತು ಸುಧಿರ್ಘ ಚರ್ಚೆ ನಡೆಸೋಣಾ, ನಿರ್ದೇಶಕ ನಾಗಾಭರಣ, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಅನೇಕರನ್ನು ಕರೆಯಿಸಿ, ಅವರೊಂದಿಗೆ ಮಾತುಕತೆ ನಡೆಸಿ ಅಂತಿಮ ರೂಪ ಕೊಡೋಣಾ ಎಂದರು.

ಸಚಿವನಾಗಿದ್ದ ವೇಳೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೀರಾ. ಆದರೆ, ಅವುಗಳಿಗೆ ಪ್ರಚಾರ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದೀರಾ ಎಂದು ವೇಣು ಅವರು, ಆಂಜನೇಯ ಅವರಿಗೆ ಹೇಳಿದರು.

ನನ್ನ ಬಳಿ ತಾವು ಮಾಡಿದ ಅಭಿವೃದ್ಧಿ ಹೆಜ್ಜೆ ಗುರುತುಗಳನ್ನು ಹೇಳಿಕೊಂಡಂತೆ ಸಾರ್ವತ್ರಿಕವಾಗಿ ಹೇಳಿಕೊಳ‍್ಳಬೇಕು. ತಾವು್ ಮಾಡಿರುವ ಅಭೀವೃದ್ಧಿ ಕಾರ್ಯಗಳು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ತಾವು ಹೇಳುವ ಮಾತು ನಿಜ ಎಂದು ವೇಣು ಮಾತಿಗೆ ಸಹಮತ ವ್ಯಕ್ತಪಡಿಸಿದ ಆಂಜನೇಯ, ವಿಜ್ಞಾನ, ಕಲಾ ಕಾಲೇಜ್‍, ವಾಲ್ಮೀಕಿ ಭವನ, ಚಿತ್ರದುರ್ಗದಲ್ಲಿ ಈಗ ಆಗುತ್ತಿರುವ  ರಸ್ತೆ ಅಭಿವೃದ್ಧಿ ಕಾರ್ಯಗಳು ನಮ್ಮ ಕಾಂಗ್ರೆಸ್‍ ಸರ್ಕಾರದ ಅವಧಿ ಆಗಿರುವ  ಕೆಲಸಗಳು. ಜಿಲ್ಲೆಯಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕೆಲಸಗಳು ಮಾಡಿದ್ದೇವೆ. ಆದರೆ ನಾವು ಈ ವಿಷಯದಲ್ಲಿ ಪ್ರಚಾರ ಪಡೆದುಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೇವು. ಎಂದರು.

ಬೇಡರ್ದಂಗೆ ಕಾದಂಬರಿ ವಿಷಯದ ವಸ್ತು ಹಾಗೂ ಹಿನ್ನೆಲೆಯ ಮಾಹಿತಿಯನ್ನು ಬಿ.ಎಲ್‍.ವೇಣು ಅವರಿಂದ ಪಡೆದುಕೊಂಡ ಆಂಜನೇಯ ಅವರು, ಇಂತಹ ಕಾದಂಬರಿ ಬರೆಯುವ ಶಕ್ತಿ ಇನ್ನೂ ಹೆಚ್ಚು ಕಾಲ ದೊರೆಯಲಿ, ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮಿಂದ ಹೆಚ್ಚು ಕೊಡುಗೆ ಇನ್ನೂ ಲಭಿಸಲಿ ಎಂದು ಶುಭ ಹಾರೈಸಿ ಗೌರವಿಸಿದರು.

About The Author

Leave a Reply

Your email address will not be published. Required fields are marked *